TATA: ಹಬ್ಬಕ್ಕೆ ಟಾಟಾದಿಂದ ಗುಡ್‌ನ್ಯೂಸ್.. ಭಾರೀ ರಿಯಾಯಿತಿ ಘೋಷಣೆ, 4.57 ಲಕ್ಷಕ್ಕೆ ಹೊಸ ಕಾರು!
ಟಾಟಾ ಮೋಟಾರ್ಸ್ (Tata Motors), ಜನಪ್ರಿಯ ವಾಹನ ತಯಾರಕ ಕಂಪನಿ ಹೊರಹೊಮ್ಮಿದೆ. ದೀಪಾವಳಿ ಹಬ್ಬವನ್ನು ಗಮನದಲ್ಲಿರಿಸಿಕೊಂಡು ಈ ಅಕ್ಟೋಬರ್ ತಿಂಗಳು ವಿವಿಧ ಕಾರುಗಳ ಖರೀದಿ ಮೇಲೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಇದರಿಂದಾಗಿ ಕಂಪನಿಯ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿವೆ. ಬನ್ನಿ, ಯಾವ ಕಾರಿಗೆ ಎಷ್ಟು ರಿಯಾಯಿತಿ ಇದೆ.. ಜೊತೆಗೆ ಎಕ್ಸ್-ಶೋರೂಂ ದರವೆಷ್ಟು ಎಂಬುದರ ಕುರಿತಂತೆ ಒಂದಷ್ಟು ಪ್ರಮುಖ ವಿವರಗಳನ್ನು ತಿಳಿಯೋಣ.
ಟಾಟಾ ಟಿಯಾಗೊ:
ಇದೊಂದು ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರಿನ 2024ರ ಮಾಡೆಲ್‌ಗಳು ಒಟ್ಟು ರೂ.35,000 ವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ಅದೇ ರೀತಿಯಲ್ಲಿ 2025ರ ಮಾಡೆಲ್‌ಗಳು ಸರಿ ಸುಮಾರು ರೂ.25,000 ವರೆಗೆ ರಿಯಾಯಿತಿ ಪಡೆದಿವೆ. ನೂತನ 'ಟಿಯಾಗೊ' ರೂಪಾಂತರಗಳಿಗೆ ಅನುಗುಣವಾಗಿ ರೂ.4.57 ಲಕ್ಷದಿಂದ ರೂ.8.09 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಟಾಟಾ ಟಿಗೊರ್:
ಈ ಸೆಡಾನ್‌ಗೂ ಉತ್ತಮವಾದ ರಿಯಾಯಿತಿ ಲಭ್ಯವಿದೆ. ಇದರ 2024ರ ಮಾಡೆಲ್‌ಗಳು ಬರೋಬ್ಬರಿ ರೂ.45,000 ವರೆಗೆ ಆಫರ್‌ನ್ನು ಪಡೆದಿವೆ. 2025ರ ಮಾಡೆಲ್‌ಗಳು ಒಟ್ಟು ರೂ.30,000 ವರೆಗೆ ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ. ಹೊಸ 'ಟಿಗೊರ್' ರೂ.5.49 ಲಕ್ಷದಿಂದ ರೂ.8.74 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಟಾಟಾ ಆಲ್ಟ್ರೋಜ್:
ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಈ ಕಾರಿನ 2024ರ ಮಾಡೆಲ್‌ಗಳು ಸರಿ ಸುಮಾರು ರೂ.1 ಲಕ್ಷಕ್ಕೂ ಅಧಿಕ ರಿಯಾಯಿತಿ ಹೊಂದಿವೆ. 2025ರ ಮಾಡೆಲ್‌ಗಳು ಒಟ್ಟು ರೂ.65,000 ವರೆಗೆ ಹಣಕಾಸಿನ ಪ್ರಯೋಜನವನ್ನು ಒಳಗೊಂಡಿವೆ. ನೂತನ 'ಆಲ್ಟ್ರೋಜ್' ರೂ.6.30 ಲಕ್ಷದಿಂದ ರೂ.10.51 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿದಾರರಿಗೆ ಲಭ್ಯವಿದೆ.

ಟಾಟಾ ಪಂಚ್:
ಈ ಮೈಕ್ರೋ ಎಸ್‌ಯುವಿ ಗರಿಷ್ಠ ಹಣಕಾಸು ಪ್ರಯೋಜನವನ್ನೇ ಒಳಗೊಂಡಿದೆ. 2024ರ ಮಾಡೆಲ್‌ಗಳು ಬರೋಬ್ಬರಿ ರೂ.25,000 ವರೆಗೆ ರಿಯಾಯಿತಿ ಪಡೆದಿವೆ. 2025ರ ಮಾಡೆಲ್‌ಗಳು ಸರಿ ಸುಮಾರು ರೂ.50,000 ವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ಹೊಸ 'ಪಂಚ್' ರೂ.5.50 ಲಕ್ಷದಿಂದ ರೂ.9.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಟಾಟಾ ನೆಕ್ಸಾನ್:
ಇದೊಂದು ಜಗಮೆಚ್ಚಿದ ಎಸ್‌ಯುವಿಯಾಗಿದೆ. ಈ ಕಾರಿನ 2024ರ ಮಾಡೆಲ್‌ಗಳು ಒಟ್ಟು ರೂ.45,000 ವರೆಗೆ ಆಫರ್‌ನ್ನು ಹೊಂದಿವೆ. 2025ರ ಮಾಡೆಲ್‌ಗಳು ಬರೋಬ್ಬರಿ ರೂ.45,000 ವರೆಗೆ ರಿಯಾಯಿತಿ ಹೊಂದಿವೆ. ನೂತನ 'ನೆಕ್ಸಾನ್' ರೂ.7.32 ಲಕ್ಷದಿಂದ ರೂ.14.50 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

ಟಾಟಾ ಕರ್ವ್:
ಈ ಕೂಪೆ ಎಸ್‌ಯುವಿಗೂ ಹೆಚ್ಚಿನ ಹಣಕಾಸು ಪ್ರಯೋಜನಗಳು ದೊರೆಯುತ್ತದೆ. ಇದರ 2024ರ ಮಾಡೆಲ್‌ಗಳು ಸರಿ ಸುಮಾರು ರೂ.30,000 ವರೆಗೆ ರಿಯಾಯಿತಿ ಹೊಂದಿವೆ. ಅದೇ ರೀತಿಯಲ್ಲಿ 2025ರ ಮಾಡೆಲ್‌ಗಳು ಒಟ್ಟು ರೂ.40,000 ವರೆಗೆ ಹಣಕಾಸು ಪ್ರಯೋಜನವನ್ನು ಪಡೆದಿವೆ. ಹೊಸ 'ಕರ್ವ್' ರೂ.9.66 ಲಕ್ಷದಿಂದ ರೂ.19.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಟಾಟಾ ಹ್ಯಾರಿಯರ್ & ಸಫಾರಿ:
ಇವೆರೆಡು ಪ್ರಖ್ಯಾತ ಎಸ್‌ಯುವಿಯಾಗಿದ್ದು, 2024ರ ಮಾಡೆಲ್‌ಗಳು ಬರೋಬ್ಬರಿ ರೂ.75,000 ವರೆಗೆ ಆಫರ್‌ನ್ನು ಒಳಗೊಂಡಿವೆ. 2025ರ ಮಾಡೆಲ್‌ಗಳು ಸರಿ ಸುಮಾರು ರೂ.50,000 ವರೆಗೆ ರಿಯಾಯಿತಿ ಪಡೆದಿವೆ. ನೂತನ 'ಹ್ಯಾರಿಯರ್' ರೂ.14 ಲಕ್ಷದಿಂದ ರೂ.25.25 ಲಕ್ಷ ಹಾಗೂ ಹೊಸ 'ಸಫಾರಿ' ರೂ.14.66 ಲಕ್ಷದಿಂದ ರೂ.25.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ಈ ಕಾರುಗಳ ರಿಯಾಯಿತಿಗಳು ನಗರದಿಂದ ನಗರಕ್ಕೆ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಬೇರೆಯಾಗಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








