Tata: ಗುಡ್‌ನ್ಯೂಸ್.. ಟಾಟಾದಿಂದ 1.35 ಲಕ್ಷವರೆಗೆ ರಿಯಾಯಿತಿ ಘೋಷಣೆ.. 5 ಲಕ್ಷಕ್ಕೆ ಹೊಸ ಕಾರು!
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಟಿಗೂರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಹ್ಯಾರಿಯರ್, ಸಫಾರಿ ಮತ್ತು ಕರ್ವ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಈ ಏಪ್ರಿಲ್ ತಿಂಗಳು ಇದೇ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ. ವಿವಿಧ ಮಾಡೆಲ್‌ಗಳಿಗೆ ಅನುಗುಣವಾಗಿ ರೂ.15,000 ದಿಂದ ರೂ.1.35 ಲಕ್ಷವರೆಗೆ ಹಣಕಾಸಿನ ಪ್ರಯೋಜನಗಳು ಲಭ್ಯವಿವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿವನ್ನು ತಿಳಿಯೋಣ.
ಟಾಟಾ ಟಿಯಾಗೊ: ಇದೊಂದು ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಈ ಕಾರಿನ 2024ರ ಮಾಡೆಲ್‌ಗಳು ರೂ.35,000 ಹಾಗೂ 2025ರ ಮಾಡೆಲ್‌ಗಳು ರೂ.25,000 ರಿಯಾಯಿತಿ ಒಳಗೊಂಡಿವೆ. ನೂತನ ಟಿಯಾಗೊ ಹ್ಯಾಚ್‌ಬ್ಯಾಕ್, ರೂ.5 ಲಕ್ಷದಿಂದ ರೂ.8.45 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಟಾಟಾ ಟಿಗೊರ್: ಈ ಸೆಡಾನ್‌ನ 2024ರ ಮಾಡೆಲ್‌ಗಳು ರೂ.45,000 ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ಅದೇ ರೀತಿಯಲ್ಲಿ 2025ರ ಮಾಡೆಲ್‌ಗಳು ರೂ.30,000 ರಿಯಾಯಿತಿ ಪಡೆದಿವೆ. ಹೊಸ ಟಿಗೊರ್ ಕಾರು, ಕನಿಷ್ಠ ರೂ.6 ಲಕ್ಷ ಹಾಗೂ ಗರಿಷ್ಠ ರೂ.9.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ.
ಟಾಟಾ ಆಲ್ಟ್ರೋಜ್: ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರಿಗೆ 2024ರ ಮಾಡೆಲ್‌ಗಳು ರೂ.1 ಲಕ್ಷದಿಂದ ರೂ.1.35 ಲಕ್ಷ ಮತ್ತು 2025ರ ಮಾಡೆಲ್‌ಗಳು 45,000 ರಿಯಾಯಿತಿ ಹೊಂದಿವೆ. ನೂತನ ಆಲ್ಟ್ರೋಜ್ ಕಾರು, ರೂ.6.65 ಲಕ್ಷದಿಂದ ರೂ.11.30 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

ಟಾಟಾ ಪಂಚ್: ಈ ಮೆಕ್ರೋ ಎಸ್‌ಯುವಿಯ 2024ರ ಮಾಡೆಲ್‌ಗಳು ರೂ.25,000 ಮತ್ತು 2025ರ ಮಾಡೆಲ್‌ಗಳು ರೂ.35,000 ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ನೂತನ ಪಂಚ್ ಎಸ್‌ಯುವಿ, ಕನಿಷ್ಠ ರೂ.6.20 ಲಕ್ಷ ಮತ್ತು ಗರಿಷ್ಠ ರೂ.10.32 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ.
ಟಾಟಾ ನೆಕ್ಸಾನ್: ಇದೊಂದು ಪ್ರಖ್ಯಾತ ಎಸ್‌ಯುವಿಯಾಗಿದೆ. ಈ ಕಾರಿನ 2024ರ ಮಾಡೆಲ್‌ಗಳು ರೂ.45,000 ಹಾಗೂ 2025ರ ಮಾಡೆಲ್‌ಗಳು ರೂ.15,000 ರಿಯಾಯಿತಿ ಒಳಗೊಂಡಿವೆ. ಹೊಸ ಟಾಟಾ ನೆಕ್ಸಾನ್ ಎಸ್‌ಯುವಿ, ರೂ.8 ಲಕ್ಷದಿಂದ ರೂ.15.60 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಜೊತೆಗೆ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಹೊಂದಿದ್ದು, 17.01 ರಿಂದ 24 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಟಾಟಾ ಹ್ಯಾರಿಯರ್ & ಸಫಾರಿ: ಇವೆರೆಡು ಎಸ್‌ಯುವಿಗಳ 2024ರ ಮಾಡೆಲ್‌ಗಳು ರೂ.75,000 ಮತ್ತು 2025ರ ಮಾಡೆಲ್‌ಗಳು ರೂ.50,000 ರಿಯಾಯಿತಿ ಹೊಂದಿವೆ. ಹ್ಯಾರಿಯರ್ ಕಾರು, ರೂ.15 ಲಕ್ಷದಿಂದ ರೂ.26.50 ಲಕ್ಷ ಬೆಲೆಯನ್ನು ಪಡೆದಿದೆ. ಅದೇ ರೀತಿಯಲ್ಲಿ ಸಫಾರಿ ಕಾರು, ರೂ.15.50 ಲಕ್ಷದಿಂದ ರೂ.27.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ.
ಟಾಟಾ ಕರ್ವ್: ಇದು ಕೂಪೆ ಎಸ್‌ಯುವಿಯಾಗಿದೆ. ಈ ಕಾರಿನ 2024ರ ಮಾಡೆಲ್‌ಗಳು ರೂ.30,000 ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ಆದರೆ, 2025ರ ಮಾಡೆಲ್‌ಗಳಿಗೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ. ನೂತನ ಕರ್ವ್ ಕಾರು ರೂ.10 ಲಕ್ಷದಿಂದ ರೂ.19.20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ಈ ಹಣಕಾಸಿನ ಪ್ರಯೋಜನಗಳು ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ನಗರದಿಂದ ನಗರಕ್ಕೆ ಬೇರೆಯಾಗಿರಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ, ಇದರೊಂದಿಗೆ ರಿಯಾಯಿತಿ ಕುರಿತ ನಿಮ್ಮ ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು.


Click it and Unblock the Notifications