ಟಾಟಾ ಕರ್ವ್ VS ಸಿಟ್ರನ್ ಬಸಾಲ್ಟ್: ಸೇಫ್ಟಿಯಲ್ಲಿ ಟಾಟಾವನ್ನು ಮೀರಿಸಬಲ್ಲದೇ?

ಭಾರತದಲ್ಲಿ ಟಾಟಾ ಮೋಟಾರ್ಸ್ ಎಸ್‌ಯುವಿ ಕೂಪೆ ಸೆಗ್ಮೆಂಟಿನಲ್ಲಿ ಕರ್ವ್ ಎಂಬ ಕಾರನ್ನು ಪರಿಚಯಿಸಿದೆ. ಸದ್ಯ ಈ ಸೆಗ್ಮೆಂಟಿನಲ್ಲಿ ಇದುವರೆಗೆ ಸಿಟ್ರನ್ ಕಂಪನಿ ಬಿಟ್ಟರೆ ಇನ್ಯಾವುದೇ ಬ್ರಾಂಡ್ ಕೂಪೆ ಎಸ್‌ಯುವಿಯನ್ನು ಹೊಂದಿಲ್ಲ. ಸಿಟ್ರನ್ ಬಸಾಲ್ಟ್ ಹಾಗೂ ಟಾಟಾ ಕರ್ವ್ ನೇರ ಪ್ರತಿಸ್ಪರ್ಧಿಗಳಾಗಿದ್ದು, ಎಸ್‌ಯುವಿಯೊಂದಿಗೆ ಸೆಡಾನ್ ಲುಕ್‌ ಬಯಸುವ ವಾಹನ ಖರೀದಿದಾರರಿಗೆ ಇವೆರಡೂ ಕಾರುಗಳು ಆಯ್ಕೆಯಲ್ಲಿವೆ. ಆದರೆ ಇವೆರಡು ಕಾರುಗಳಲ್ಲಿ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಲು ಬೆಲೆ ಹಾಗೂ ಅವುಗಳ ಗುಣಮಟ್ಟವನ್ನು ಇಲ್ಲಿ ಹೋಲಿಕೆ ಮಾಡಲಾಗಿದೆ.

ಸಿಟ್ರನ್ ಬಸಾಲ್ಟ್ ಸುರಕ್ಷತೆ: ವಾಹನ ಸುರಕ್ಷತಾ ತಪಾಸಣೆ ಸಂಸ್ಥೆ 'ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ) ಪ್ರಕಾರ ಸಿಟ್ರನ್ ಬಸಾಲ್ಟ್ ವಯಸ್ಕರ ರಕ್ಷಣೆ ವಿಭಾಗದಲ್ಲಿ 32 ಅಂಕಗಳಿಗೆ 26.19 ಅಂಕಗಳು ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 49 ಅಂಕಗಳಿಗೆ 35.90 ಅಂಕಗಳನ್ನು ಗಳಿಸಿದೆ. ಈ ಮೂಲಕ 4-ಸ್ಟಾರ್ ಸೇಫ್ಟಿ ರೇಟಿಂಗ್‌ ಪಡೆದಿದೆ.

tata-curvv-vs-citroen-basalt-safety-comparison

ಪ್ರಯಾಣಿಕರ (ಡಮ್ಮಿ) ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಈ ಕಾರಿನಲ್ಲಿದ್ದ ಸುರಕ್ಷತಾ ವೈಶಿಷ್ಟ್ಯಗಳು ಹೆಚ್ಚಿನ ರಕ್ಷಣೆ ಒದಗಿಸಿವೆ ಎಂದು ವರದಿ ಹೇಳಿದೆ. ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆಯಲ್ಲಿ ಪ್ರಮುಖವಾಗಿ 6 - ಏರ್‌ಬ್ಯಾಗ್‌, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ ಗಳಂತಹ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಾಟಾ ಕರ್ವ್ ಸುರಕ್ಷತೆ: ವಾಹನ ಸುರಕ್ಷತಾ ತಪಾಸಣೆ ಸಂಸ್ಥೆ 'ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ) ಪರೀಕ್ಷೆಯಲ್ಲಿ ಟಾಟಾ ಕರ್ವ್, 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ. ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.5 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43.66 ಅಂಕಗಳನ್ನು ಗಳಿಸಿದೆ.

tata-curvv-vs-citroen-basalt-safety-comparison

ಟಾಟಾ ಕರ್ವ್ ಪರೀಕ್ಷೆಯಲ್ಲಿ ಮುಂಭಾಗದ ಪ್ರಯಾಣಿಕರು (ಡಮ್ಮಿ) ಸುರಕ್ಷಿತವಾಗಿದ್ದರೆ, ಚಾಲಕನ ಬಲಗಾಲು ಕನಿಷ್ಠ ರಕ್ಷಣೆಯನ್ನು ಪಡೆದುಕೊಂಡಿದೆ. ಮಕ್ಕಳ ರಕ್ಷಣೆಯಲ್ಲಿ ಟಾಟಾ ಕರ್ವ್ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ನೀಡಿದೆ. ಕರ್ವ್ ಎಸ್‌ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ ಮತ್ತು TPMS ಜೊತೆಗೆ ಆರು ಏರ್‌ಬ್ಯಾಗ್‌ಗಳನ್ನು ಸ್ತ್ಯಾಂಡರ್ಡ್ ಆಗಿ ನೀಡಲಾಗಿದೆ.

ಸಿಟ್ರನ್ ಬಸಾಲ್ಟ್ ಬೆಲೆ: ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ, ರೂ.7.99 ಲಕ್ಷದಿಂದ ರೂ.13.83 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಇದು ಬಸಾಲ್ಟ್ 1.2ಪಿಯು, ಬಸಾಲ್ಟ್ ಪ್ಲಸ್, ಬಸಾಲ್ಟ್ ಟರ್ಬೊ ಪ್ಲಸ್, ಬಸಾಲ್ಟ್ ಟರ್ಬೊ ಎಟಿ ಪ್ಲಸ್ ಹಾಗೂ ಬಸಾಲ್ಟ್ ಟರ್ಬೊ ಮ್ಯಾಕ್ಸ್ ಸೇರಿದಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ.

tata-curvv-vs-citroen-basalt-safety-comparison

ಟಾಟಾ ಕರ್ವ್ ಬೆಲೆ: ಟಾಟಾ ಕರ್ವ್ ಎಸ್‌ಯುವಿ ಕೂಪೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ ಆಯ್ಕೆಗಳಿದ್ದು, ಡೀಸೆಲ್ ಎಂಜಿನ್ 11 ಲಕ್ಷದಿಂದ 19 ಲಕ್ಷ ರೂ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)ವರೆಗೆ ಇದೆ. ಪೆಟ್ರೋಲ್ ಎಂಜಿನ್ ಬೆಲೆಗಳು 10 ಲಕ್ಷದಿಂದ 19 ಲಕ್ಷ ರೂ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)ವರೆಗೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, May 25, 2025, 13:10 [IST]
English summary
Tata curvv vs citroen basalt safety comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+