ಟಾಟಾ ಕಾರಿಗೆ ಮುಗಿಬಿದ್ದ ಜನ: ಬುಕಿಂಗ್ ಹೆಚ್ಚಾಯ್ತು... ಮನೆಗೆ ಬರಲು 3 ತಿಂಗಳು ಕಾಯಬೇಕು!
ಟಾಟಾ ಕರ್ವ್ ಎಸ್‌ಯುವಿ (Tata Curvv) ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಪ್ರಸ್ತುತ ಬೇಡಿಕೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಇದು ಖರೀದಿದಾರರ ಕಾಯುವ ಅವಧಿಯನ್ನು ಸುಮಾರು 8 ರಿಂದ 12 ವಾರಗಳವರೆಗೆ (2 ರಿಂದ 3 ತಿಂಗಳಿಗೆ) ವಿಸ್ತರಿಸಿದೆ. ಇತ್ತೀಚಿನ ಜಿಎಸ್‌ಟಿ ಇಳಿಕೆಯಿಂದ ಬೆಲೆ ಕಡಿತವಾಗಿದ್ದು, ಅದರ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ನಿರೀಕ್ಷಿತ ಖರೀದಿದಾರರು ಬುಕಿಂಗ್ ಸಮಯದಿಂದ ಡೆಲಿವರಿ ಪಡೆಯಲು ಸುಮಾರು 2 ರಿಂದ 3 ತಿಂಗಳುಗಳ ಕಾಯುವಿಕೆಗೆ ಸಿದ್ಧರಾಗಿರಬೇಕು.
ಟಾಟಾ ಕರ್ವ್ ವಿಶೇಷತೆಗಳು: ಟಾಟಾ ಮೋಟಾರ್ಸ್ ಈ ಕಾರನ್ನು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಐಷಾರಾಮಿ ಇಂಟೀರಿಯರ್‌ನೊಂದಿಗೆ ಸಜ್ಜುಗೊಳಿಸಿದೆ. ಈ ಕಾರಿನ ಬೇಸ್ ವೇರಿಯೆಂಟ್ ಪ್ರಸ್ತುತ ರೂ. 9,65,690 (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಉತ್ತಮ ಚಾಲನಾ ಅನುಭವಕ್ಕಾಗಿ ಸೌಕರ್ಯ ಮತ್ತು ಪರ್ಫಾಮೆನ್ಸ್ ಎರಡಕ್ಕೂ ಆದ್ಯತೆ ನೀಡಿ ನಿರ್ಮಿಸಲಾಗಿದೆ.

ಹೊಸ ಟಾಟಾ ಕರ್ವ್ ಎರಡು ಪೆಟ್ರೋಲ್ ಎಂಜಿನ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 1.2 - ಲೀಟರ್ ರೆವೊಟ್ರಾನ್ NA ಎಂಜಿನ್ 88.2 kW ಪವರ್ ಮತ್ತು 170 Nm ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.2 - ಲೀಟರ್ ಟರ್ಬೋಚಾರ್ಜ್ಡ್ ಹೈಪರಿಯನ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ 91.9 kW ಪವರ್ ಮತ್ತು 225 Nm ಟಾರ್ಕ್ ಉತ್ಪಾದಿಸುತ್ತದೆ.
ಮೂರನೆಯ ಆಯ್ಕೆಯು 1.5 - ಲೀಟರ್ ಕ್ರಿಯೋಜೆಟ್ ಡೀಸೆಲ್ ಎಂಜಿನ್ ಆಗಿದ್ದು, ಇದು 86.7 kW ಪವರ್ ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸುರಕ್ಷತೆ ಮತ್ತು ಪರ್ಫಾಮೆನ್ಸ್ ಸಂಯೋಜನೆಯು ಟಾಟಾ Curvv ಅನ್ನು ಅದರ ವಿಭಾಗದಲ್ಲಿ ಬಲವಾದ ಆಯ್ಕೆಯಾಗಿ ಇರಿಸುತ್ತದೆ ಎಂದು ಹೇಳಬಹುದು.

ಸೇಫ್ಟಿ ವಿಷಯದಲ್ಲಿ ಟಾಟಾ Curvv ವ್ಯಾಪಕ ಶ್ರೇಣಿಯ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಸ್ಟಾಪ್ & ಗೋ, 360 ಡಿಗ್ರಿ 3D ಸರೌಂಡ್ - ಕ್ಯಾಮೆರಾ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ನೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ - ಡಿಪಾರ್ಚರ್ ವಾರ್ನಿಂಗ್ (LDW), ಲೇನ್ - ಕೀಪ್ ಅಸಿಸ್ಟ್ (LKA) ನೀಡಲಾಗಿದೆ.
ಇಂಟೀರಿಯರ್‌ನಲ್ಲಿ 10 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಇದರ ಜೊತೆಗೆ ಒಂಬತ್ತು JBL - ಸ್ಪೀಕರ್‌ಗಳಿಂದ ಆಡಿಯೊ ಸಿಸ್ಟಮ್ ನೀಡಲಾಗಿದೆ. 12.3 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಪೋರ್ಟ್ ಮಾಡುತ್ತದೆ. ಲೆದರ್ ಸೀಟ್‌ಗಳು ಮತ್ತು ಲೆದರ್ ಸ್ಟೀರಿಂಗ್ ವೀಲ್ ಪ್ರೀಮಿಯಂ ಆಗಿ ಕಾಣುತ್ತವೆ.

ಮೂಡ್ ಲೈಟಿಂಗ್ ನೊಂದಿಗೆ ಪನಾರಮಿಕ್ ಸನ್‌ರೂಫ್ ಐಷಾರಾಮಿ ಮತ್ತು ಅನುಕೂಲತೆ ಎರಡನ್ನೂ ಹೆಚ್ಚಿಸುತ್ತದೆ. 6 - ಸ್ಟೆಪ್ ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ಫ್ರಂಟ್ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ನೀಡಲಾಗಿದೆ. ಬೆಲೆಗೆ ತಕ್ಕ ವೇರಿಯೆಂಟ್ ಗೆ ಅನುಗುಣವಾಗಿ ಫೀಚರ್ಸ್ ಇರುತ್ತವೆ ಎಂಬುದನ್ನು ಗಮನಿಸಬೇಕು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಒಟ್ಟಾರೆ ಟಾಟಾ ಕರ್ವ್ ಎಸ್‌ಯುವಿ ಮಾರುಕಟ್ಟೆಯಲ್ಲಿ ದೃಢವಾದ SUV ಸಾಮರ್ಥ್ಯಗಳೊಂದಿಗೆ ನಯವಾದ ಕೂಪ್ ತರಹದ ಡಿಸೈನ್ ಎಲ್ಲರನ್ನು ಆಕರ್ಷಿಸುತ್ತಿದೆ. ಫ್ಲಶ್ ಡೋರ್ ಹ್ಯಾಂಡಲ್‌ಗಳು, ಸೀಕ್ವೆನ್ಷಿಯಲ್ ಎಲ್‌ಇಡಿ ಲೈಟಿಂಗ್ ಮತ್ತು ಐಷಾರಾಮಿ ಒಳಾಂಗಣದ ಜೊತೆಗೆ ಆಕರ್ಷಕ ಹೊರಾಂಗಣವನ್ನು ಒಳಗೊಂಡಿದೆ. ಬಹು ಡ್ರೈವ್ ಮೋಡ್‌ಗಳು ಮತ್ತು ADAS ಲೆವೆಲ್ - 2 ಸುರಕ್ಷತಾ ತಂತ್ರಜ್ಞಾನದೊಂದಿಗೆ ಕೇವಲ ಡಿಸೈನ್ ಮಾತ್ರವಲ್ಲದೆ ವೈಶಿಷ್ಟ್ಯಗಳಲ್ಲಿಯೂ ಸಮೃದ್ಧವಾಗಿದೆ.


Click it and Unblock the Notifications








