Tata: ಹೊಚ್ಚ ಹೊಸ ಟಾಟಾ ಹ್ಯಾರಿಯರ್ & ಸಫಾರಿ ಸ್ಟೆಲ್ತ್ ಎಡಿಷನ್ ಬಿಡುಗಡೆ.. ಬೆಲೆ ಎಷ್ಟು, ಹೇಗಿದೆ?

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ನಂಬಿಕೆ ಹೆಸರುವಾಸಿಯಾಗಿರುವ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಕಾರುಗಳು ಹೆಚ್ಚು ಸುರಕ್ಷಿತವಾಗಿರುವ ಕಾರಣ, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ ನವದೆಹಲಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ಜನಪ್ರಿಯ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಯ 'ಸ್ಟೆಲ್ತ್ ಎಡಿಷನ್'ನ್ನು ಅನಾವರಣಗೊಳಿಸಿತ್ತು. ಸದ್ಯ, ಈ ಕಾರುಗಳನ್ನು ಮಾರಾಟಕ್ಕೂ ತಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನೂತನ ಟಾಟಾ ಹ್ಯಾರಿಯರ್ ಸ್ಟೆಲ್ತ್ ಎಡಿಷನ್ (Tata Harrier Stealth Edition), ಸಾಮಾನ್ಯ ಹ್ಯಾರಿಯರ್ ಕಾರಿನ ಫಿಯರ್‌ಲೆಸ್ ಪ್ಲಸ್ ರೂಪಾಂತರವನ್ನು (ವೇರಿಯೆಂಟ್) ಆಧರಿಸಿದೆ. ಇದು ರೂ.24.85 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಓಡಾಟ ನಡೆಸಬಹುದು.

Tata Harrier And Safari Stealth Edition Launched In India Details

ಹೊಚ್ಚ ಹೊಸ ಟಾಟಾ ಸಫಾರಿ ಸ್ಟೆಲ್ತ್ ಎಡಿಷನ್ (Tata Safari Stealth Edition), ಈಗಿರುವ ಸಫಾರಿ ಎಸ್‌ಯುವಿ ಅಕಂಪ್ಲಿಶ್ಡ್ ಪ್ಲಸ್ ರೂಪಾಂತರದ (ವೇರಿಯೆಂಟ್) ತದ್ರೂಪದಂತಿದೆ. ಈ ನೂತನ ಮಾಡೆಲ್, ರೂ.25.30 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. ಇದು 7 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.

ಟಾಟಾ ಹ್ಯಾರಿಯರ್ & ಸಫಾರಿ ಸ್ಟೆಲ್ತ್ ಎಡಿಷನ್ ಮಾಡೆಲ್‌ಗಳ ಪವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣಿಯನ್ನು ಮಾಡಲಾಗಿಲ್ಲ. ಅದು ಸಾಮಾನ್ಯ ಮಾಡೆಲ್‌ಗಳಂತೆಯೇ ಇದೆ. ಈ ಕಾರುಗಳು ಪಡೆದಿರುವ 2.0-ಲೀಟರ್ ಡೀಸೆಲ್ ಎಂಜಿನ್, 168 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 350 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತವೆ. 6-ಸ್ಪೀಡ್ ಮ್ಯೂನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿವೆ.

Tata Harrier And Safari Stealth Edition Launched In India Details

ಈ ಟಾಟಾ ಹ್ಯಾರಿಯರ್ & ಸಫಾರಿ ಸ್ಟೆಲ್ತ್ ಎಡಿಷನ್ ಎಸ್‌ಯುವಿಗಳು, ಹಳೆಯ ಮಾಡೆಲ್‌ಗಳಂತೆ ವಿನ್ಯಾಸವನ್ನು ಹೊಂದಿವೆ. ಅದರ ಹೊರತಾಗಿ ಹೊರಭಾಗದಲ್ಲಿ 'ಸ್ಟೆಲ್ತ್' ಬ್ಯಾಡ್ಜಿಂಗ್, ಮ್ಯಾಟ್ ಬ್ಲ್ಯಾಕ್ ಪೇಂಟ್ ಸ್ಕೀಮ್ ಪಡೆದಿದ್ದು, ಒಳಭಾಗದಲ್ಲಿ ಫುಲ್ ಬ್ಲ್ಯಾಕ್ ಲೆದರೆಟ್ ಇಂಟೀರಿಯರ್‌ನ್ನು ಒಳಗೊಂಡಿವೆ. ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿವೆ.

ಟಾಟಾ ಹ್ಯಾರಿಯರ್ & ಸಫಾರಿ ಸ್ಟೆಲ್ತ್ ಎಡಿಷನ್ ಕಾರುಗಳು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿವೆ. ಪ್ರಮುಖವಾಗಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಡುಯಲ್ ಜೋನ್ ಆಟೋಮೆಟಿಕ್ ಎಸಿ ಮತ್ತು ಸನ್‌ರೂಫ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿವೆ.

Tata Harrier And Safari Stealth Edition Launched In India Details

ಈ ಸ್ಟೆಲ್ತ್ ಎಡಿಷನ್ ಮಾಡೆಲ್‌ಗಳು ಸುರಕ್ಷತೆಗೂ ಹೆಸರುವಾಸಿಯಾಗಿವೆ. ಪ್ರಯಾಣಿಕರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 13, 2025, 14:23 [IST]
English summary
Tata harrier and safari stealth edition launched in india details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+