600+ Km ರೇಂಜ್: ಹೊಸ Tata Harrier EV ಎಡಬ್ಲ್ಯೂಡಿ ವೇರಿಯೆಂಟ್‌ ಬೆಲೆ ಘೋಷಣೆ, ಎಷ್ಟಿದೆ?

ಇತ್ತೀಚೆಗೆ ಟಾಟಾ ಹ್ಯಾರಿಯರ್ ಇವಿ (Tata Harrier EV), ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ವೇರಿಯೆಂಟ್‌ಗಳ ಬೆಲೆಯನ್ನು ಘೋಷಣೆ ಮಾಡಲಾಗಿತ್ತು. ಇವು ಅಡ್ವೆಂಚರ್ 65, ಅಡ್ವೆಂಚರ್ ಎಸ್ 65, ಫಿಯರ್‌ಲೆಸ್ ಪ್ಲಸ್ 65, ಫಿಯರ್‌ಲೆಸ್ ಪ್ಲಸ್ 75 ಮತ್ತು ಎಂಪವರ್ಡ್ 75 ಎಂಬ ರೂಪದಲ್ಲಿ ಖರೀದಿಗೆ ಲಭ್ಯವಿವೆ. ಕನಿಷ್ಠ ರೂ.21.49 ಲಕ್ಷ ಹಾಗೂ ಗರಿಷ್ಠ ರೂ.27.49 ಲಕ್ಷ (ಎಕ್ಸ್- ಶೋರೂಂ) ದರವನ್ನು ಪಡೆದಿವೆ. ಸದ್ಯ, ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ವೇರಿಯೆಂಟ್‌ ಬೆಲೆಯನ್ನು ಪ್ರಕಟಿಸಲಾಗಿದೆ.

ನೂತನ ಟಾಟಾ ಹ್ಯಾರಿಯರ್ ಇವಿ ಎಡಬ್ಲ್ಯೂಡಿ ವೇರಿಯೆಂಟ್, ರೂ.28.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದು 'ಎಂಪವರ್ಡ್' ಎಂಬ ವಿಧದಲ್ಲಿ ಮಾತ್ರ ಸಿಗುತ್ತದೆ. ಇದೇ ಜುಲೈ 2 ರಿಂದ ಹ್ಯಾರಿಯರ್ ಇವಿಯ ಎಲ್ಲ ಮಾಡೆಲ್‌ಗಳ ಬುಕ್ಕಿಂಗ್ ಶುರುವಾಗಲಿದ್ದು, ಆಸಕ್ತ ಗ್ರಾಹಕರು, ಇಂತಿಷ್ಟು ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು.

Tata Harrier EV AWD Variant Price Announced Details

ಹೊಸ ಎಡಬ್ಲ್ಯೂಡಿ ವೇರಿಯೆಂಟ್ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದು 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 622 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 396 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 504 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಅದೇ ರೀತಿಯಲ್ಲಿ ಆರ್‌ಡಬ್ಲ್ಯೂಡಿ ವೇರಿಯೆಂಟ್‌ಗಳು ಕೂಡ ಬಲಿಷ್ಠವಾಗಿರುವ ಪವರ್‌ಟ್ರೇನ್‌ನ್ನು ಪಡೆದಿವೆ. 65 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿವೆ. ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮಕಾಗಿ 538 ರಿಂದ 627 ಕಿಲೋಮೀಟರ್‌ವರೆಗೆ ಓಡುತ್ತವೆ.

Tata Harrier EV AWD Variant Price Announced Details

ಟಾಟಾ ಹ್ಯಾರಿಯರ್ ಇವಿಯ ಆರ್‌ಡಬ್ಲ್ಯೂಡಿ ಮತ್ತು ಎಡಬ್ಲ್ಯೂಡಿ ವೇರಿಯೆಂಟ್‌ಗಳು ಬಹುತೇಕ ಒಂದೇ ರೀತಿಯ ವಿನ್ಯಾಸವನ್ನು ಹೊಂದಿವೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ 19-ಇಂಚಿನ ಅಲಾಯ್ ವೀಲ್‌ಗಳು ಪಡೆದಿವೆ. ಸ್ಟೆಲ್ತ್ ಬ್ಲ್ಯಾಕ್, ಎಂಪವರ್ಡ್ ಆಕ್ಸೈಡ್ ಮತ್ತು ಪ್ಯೂರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತವೆ.

ಹ್ಯಾರಿಯರ್ ಇವಿಯ ಎಲ್ಲ ಆರ್‌ಡಬ್ಲ್ಯೂಡಿ & ಎಡಬ್ಲ್ಯೂಡಿ ವೇರಿಯೆಂಟ್‌ಗಳು 5 ಆಸನಗಳನ್ನು ಪಡೆದಿವೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 502 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿವೆ. ಜೊತೆಗೆ 14.5-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್,10.25-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಜೆಬಿಎಲ್ 10-ಸ್ಪೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿವೆ.

ಭಾರತ್ ಎನ್‌ಸಿಎಪಿಯು ಟಾಟಾ ಹ್ಯಾರಿಯರ್ ಇವಿಯನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದ್ದು, 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ. ಇದು ಪ್ರತಿಯೊಂದು ವೇರಿಯೆಂಟ್‌ಗಳಿಗೂ ಅನ್ವಯಿಸುತ್ತದೆ ಎಂದು ವರದಿಯಾಗಿದೆ. ಈ ಕಾರು 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಒಟ್ಟಾರೆಯಾಗಿ ಟಾಟಾ ಹ್ಯಾರಿಯರ್ ಇವಿಯ ಎಲ್ಲ ವೇರಿಯೆಂಟ್‌ಗಳ ಬೆಲೆಯನ್ನು ಘೋಷಣೆ ಮಾಡಲಾಗಿದೆ. ಈ ಕಾರಿಗೆ ಬಿವೈಡಿ ಅಟ್ಟೊ 3, ಮಹೀಂದ್ರಾ ಎಕ್ಸ್ಇವಿ 9ಇ ಹಾಗೂ ಹ್ಯುಂಡೈ ಐಯೋನಿಕ್ ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಆರಂಭವಾಗಲಿದ್ದು, ಆ ಬಳಿಕ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Saturday, June 28, 2025, 9:14 [IST]
English summary
Tata harrier ev awd variant price announced details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+