Tata: ಇತ್ತೀಚೆಗೆ ಬಿಡುಗಡೆಯಾದ ಟಾಟಾ ಕಾರಿಗೆ ಫುಲ್ ಡಿಮ್ಯಾಂಡ್: ಖರೀದಿಗು ಮುನ್ನ ಇವು ತಿಳಿದಿರಲಿ!
ಐದು ವರ್ಷಗಳ ಸುದೀರ್ಘ ನಿರೀಕ್ಷೆಯ ನಂತರ ಟಾಟಾ ಮೋಟಾರ್ಸ್ ಕಳೆದ ವಾರ ಎಲೆಕ್ಟ್ರಿಕ್ ಹ್ಯಾರಿಯರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ಕಂಪನಿಯು ಈ ಕಾರಿನ ಆರಂಭಿಕ ಬೆಲೆಯನ್ನು ಮಾತ್ರ ಬಹಿರಂಗಪಡಿಸಿದ್ದಾರೆ, ಇದು 21.49 ಲಕ್ಷ ರೂ. (ಎಕ್ಸ್ ಶೋರೂಂ)ಗೆ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದೆ. ಟಾಟಾ ಹ್ಯಾರಿಯರ್ ಇವಿಯ ಬುಕಿಂಗ್ ಜುಲೈ 3 ರಿಂದ ಪ್ರಾರಂಭವಾಗಲಿದ್ದು, ಇದರ ವೈಶಿಷ್ಟ್ಯಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ನಿಮಗೂ ಈ ಕಾರನ್ನು ಖರೀದಿಸುವ ಪ್ಲಾನ್ ಇದ್ದರೇ, ಇದರ ಬ್ಯಾಟರಿ, ಮೋಟಾರ್, ಪರ್ಫಾಮೆನ್ಸ್ ಬಗ್ಗೆ ಇಲ್ಲಿ ವಿವರಿಸಿದ್ದೇವೆ.
ಫೀಚರ್ಸ್: ಟಾಟಾ ಮೋಟಾರ್ಸ್ ತನ್ನ ಹೊಸ ಹ್ಯಾರಿಯರ್ ಇವಿಯಲ್ಲಿ ಸಮನ್ ಮೋಡ್ ನೊಂದಿಗೆ ಸೆಲ್ಫ್ ಪಾರ್ಕ್ ಮತ್ತು ಸ್ಯಾಮ್‌ಸಂಗ್ ನಿಯೋ ಕ್ಯೂಎಲ್ಇಡಿ ಇನ್ಫೋಟೈನ್ ಮೆಂಟ್ ಸ್ಕ್ರೀನ್, ಡಿವಿಆರ್ ನೊಂದಿಗೆ ಎಲೆಕ್ಟ್ರಾನಿಕ್ ಐಆರ್‌ವಿಎಂ, ಎನ್‌ಎಫ್‌ಸಿ ಕೀ ಕಾರ್ಡ್ ನೊಂದಿಗೆ ಡಿಜಿಟಲ್ ಕೀ ನೀಡಿದೆ.

ಜೊತೆಗೆ 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್ ರೂಫ್, ಫ್ರಂಟ್ ವೆಂಟಿಲೇಟೆಡ್ ಸೀಟುಗಳು, ಪವರ್ಡ್ ಡ್ರೈವರ್ ಫ್ರಂಟ್ ಸೀಟ್, ಕ್ರೂಸ್ ಕಂಟ್ರೋಲ್ ನೀಡಲಾಗಿದೆ. ಹ್ಯಾರಿಯರ್ ಇವಿ ವೆಹಿಕಲ್ 2-ವೆಹಿಕಲ್ (ವಿ 2 ವಿ) ಮತ್ತು ವೆಹಿಕಲ್ 2-ಲೋಡ್ (ವಿ 2 ಎಲ್) ನಂತಹ ಹೆಚ್ಚುವರಿ ಫೀಚರ್ಸ್ ಒಳಗೊಂಡಿದೆ.
ಹೊಸ ಹ್ಯಾರಿಯರ್ ಎಸ್‌ಯುವಿಯು Normal, Grass/Snow, Mud/Gravel, Sand, Rock Crawl, and Custom ಎಂಬ ಆರು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು ಬೂಸ್ಟ್ ಮೋಡ್, ಡ್ರಿಫ್ಟ್ ಮೋಡ್ ಮತ್ತು ಆಫ್-ರೋಡ್ ಅಸಿಸ್ಟ್ ಅನ್ನು ಹೊಂದಿದೆ. ಹ್ಯಾರಿಯರ್ ಇವಿ 65 ಕಿಲೋವ್ಯಾಟ್ ಮತ್ತು 75 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರಲಿದೆ.

ಎಂಟ್ರಿ ಲೆವೆಲ್ ವೇರಿಯೆಂಟ್‌ಗಳು ಸಿಂಗಲ್ ಮೋಟರ್ ನೊಂದಿಗೆ ಬರಲಿದ್ದು, ಇದು 235 ಬಿಹೆಚ್ ಪವರ್ (116 ಕಿಲೋವ್ಯಾಟ್) ಉತ್ಪಾದಿಸುತ್ತದೆ. ಹೈ-ಸ್ಪೆಕ್ ವೇರಿಯೆಂಟ್‌ಗಳು ಡ್ಯುಯಲ್-ಮೋಟರ್, ಆಲ್-ವೀಲ್ ಡ್ರೈವ್ ಪವರ್ ಟ್ರೇನ್ ನೊಂದಿಗೆ ಬರುತ್ತವೆ. ಇದು ಹೆಚ್ಚುವರಿ 156 ಬಿಹೆಚ್ ಪವರ್ ಉತ್ಪಾದಿಸುತ್ತದೆ. ಹ್ಯಾರಿಯರ್ ಇವಿಯ ಟಾಪ್ ಸ್ಪೀಡ್ ಅನ್ನು ಗಂಟೆಗೆ 180 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.
ಟಾಟಾ ಕಂಪನಿ ಪ್ರಕಾರ್ ಇದು ಒಂದು ಬಾರಿ ಚಾರ್ಜ್ ಮಾಡಿದರೆ 622 ಕಿ.ಮೀ ರೇಂಜ್ ನೀಡುತ್ತದೆ. ರಿಯಲ್ ವರ್ಲ್ಡ್ ನಲ್ಲಿ ಇದು ಒಂದು ಬಾರಿ ಚಾರ್ಜ್ ಮಾಡಿದರೆ 480-500 ಕಿ.ಮೀ ರೇಂಜ್ ನೀಡುತ್ತದೆ. ಎಲೆಕ್ಟ್ರಿಕ್ ಹ್ಯಾರಿಯರ್ 6.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು.

ಟಾಟಾ ಹ್ಯಾರಿಯರ್ ಇವಿಗಾಗಿ 3.3 ಕಿಲೋವ್ಯಾಟ್ ಮತ್ತು 7.2 ಕಿಲೋವ್ಯಾಟ್ ಎಂಬ ಎರಡು ಎಸಿ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗಿದೆ. ಬ್ಯಾಟರಿಯು 120 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ್ ಮಾಡುತ್ತದೆ. ಇದು ಕೇವಲ 15 ನಿಮಿಷಗಳ ಚಾರ್ಜ್‌ನಲ್ಲಿ 250 ಕಿ.ಮೀ ಓಡಿಸುವಷ್ಟು ಅನುವು ಮಾಡಿಕೊಡುತ್ತದೆ.
ಒಟ್ಟಾರೆ ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆಗೆ ಬರಲು ಕಾಯಿಸುತ್ತಿದ್ದ ಈ ಕಾರು ಕೊನೆಗೂ ಎಲ್ಲರ ನಿರೀಕ್ಷೆಗಳನ್ನು ಮೀರಿ ಎಂಟ್ರಿಕೊಟ್ಟಿದೆ. ಟಾಟಾ ಮೋಟಾರ್ಸ್ ಇವಿ ವಾಹನ ವಲಯದಲ್ಲಿ ತನ್ನ ನಂ.1 ಸ್ಥಾನವನ್ನು ಈ ಕಾರಿನ ಆಗಮನದಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಗಳಿವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications