ಟಾಟಾ ಹ್ಯಾರಿಯರ್ VS ಟಾಟಾ ಸಿಯೆರಾ: ಯಾವುದು ಬೆಸ್ಟ್? ಖರೀದಿ ಗೊಂದಲವೇ... ಹೋಲಿಕೆ ಇಲ್ಲಿದೆ!

ಟಾಟಾ ಮೋಟಾರ್ಸ್ ಇತ್ತೀಚೆಗೆ ಸಿಯೆರಾ SUV ಅನ್ನು ಬಿಡುಗಡೆ ಮಾಡಿದ್ದು, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಕಾರು ರಗಡ್ ಲುಕ್‌ನಲ್ಲಿ ಎಂಟ್ರಿಕೊಟ್ಟಿದೆ, ಗ್ರಾಹಕರು ಖರೀದಿಗೆ ಮುಗಿಬೀಳುತ್ತಿದ್ದು, ಭಾರೀ ಬುಕಿಂಗ್‌ಗಳು ಹರಿದುಬರುತ್ತಿವೆ ಎಂದು ಇತ್ತೀಚೆಗೆ ಟಾಟಾ ತಿಳಿಸಿದೆ. ಟಾಟಾ ಮೋಟಾರ್ಸ್‌ನ ಮತ್ತೊಂದು ಬಲಿಷ್ಠ ಕಾರಾಗಿರುವ ಹ್ಯಾರಿಯರ್ ಕೂಡ ಭಾರತದಲ್ಲಿ ಅಷ್ಟೇ ಬೇಡಿಕೆ ಪಡೆದುಕೊಂಡಿದೆ. ಇಲ್ಲಿ ಗ್ರಾಹಕರಿಗೆ ಈ ಎರಡೂ ಕಾರುಗಳ ನಡುವೆ ಗೊಂದಲವಿದೆ, ಯಾವ ಕಾರು ಖರೀದಿಸಬೇಕು? ಯಾವ ಕಾರಿನಲ್ಲಿ ಏನೇನೆದೆ ಎಂಬ ಸಂದೇಹಗಳಿವೆ. ಹಾಗಾಗಿ ಈ ಎರಡೂ ಕಾರುಗಳನ್ನು ನಾವು ಹೋಲಿಕೆ ಮಾಡಿದ್ದೇವೆ.

ಆಯಾಮಗಳು: ಆಯಾಮಗಳ ವಿಷಯದಲ್ಲಿ, ಟಾಟಾ ಹ್ಯಾರಿಯರ್ 4,605mm ಉದ್ದ, 1,922mm ಅಗಲ, 1,718mm ಎತ್ತರವನ್ನು ಹೊಂದಿದೆ. ಹಾಗೆಯೇ ವೀಲ್‌ಬೇಸ್ 2,741mm, ಗ್ರೌಂಡ್ ಕ್ಲಿಯರೆನ್ಸ್ 205mm ಇದೆ. ಬೂಟ್ ಸ್ಪೇಸ್ ವಿಷಯಕ್ಕೆ ಬಂದರೆ 445 ಲೀಟರ್ ಇದೆ. ಸಿಯೆರಾ ವಿಷಯಕ್ಕೆ ಬಂದರೆ 4,340mm ಉದ್ದ, 1,841mm ಅಗಲ, 1,715mm ಎತ್ತರವಿದೆ. ಇದು 2,730mm ವೀಲ್‌ಬೇಸ್, 205mm ಗ್ರೌಂಡ್ ಕ್ಲಿಯರೆನ್ಸ್ ಮತ್ತು 622 ಲೀಟರ್ ಬೂಟ್ ಜಾಗವನ್ನು ಹೊಂದಿದೆ.

tata-harrier-vs-tata-sierra-which-is-the-best-heres-the-comparison

ಬೆಲೆ: ಹ್ಯಾರಿಯರ್ ಸ್ಟ್ಯಾಂಡರ್ಡ್ ಡೀಸೆಲ್ - MT ಬೆಲೆಯು ರೂ. 14 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗಿ ಸ್ಟೆಲ್ತ್ ಆವೃತ್ತಿಯು ರೂ. 25.25 ಲಕ್ಷ (ಎಕ್ಸ್-ಶೋರೂಂ) ದವರೆಗೆ ಇದೆ. ಟಾಟಾ ಸಿಯೆರಾ ವಿಷಯಕ್ಕೆ ಬಂದರೆ ಕಂಪನಿಯು ಇನ್ನೂ ಸಿಯೆರಾಗೆ ಪ್ರಸ್ತುತ ಬೆಲೆಗಳು ರೂ. 11.49 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗಿ ರೂ. 18.49 ಲಕ್ಷ (ಎಕ್ಸ್-ಶೋರೂಂ) ದವರೆಗೆ ಇವೆ.

ಫೀಚರ್ಸ್: ಟಾಟಾ ಹ್ಯಾರಿಯರ್ ವಿಷಯಕ್ಕೆ ಬಂದರೆ, ಇಂಟೀರಿಯರ್‌ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಡುಯಲ್ ಜೋನ್ ಆಟೋಮೆಟಿಕ್ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ ಪನೊರೊಮಿಕ್ ಸನ್‌ರೂಫ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

tata-harrier-vs-tata-sierra-which-is-the-best-heres-the-comparison

ಟಾಟಾ ಸಿಯೆರಾ ವಿಷಯಕ್ಕೆ ಬಂದರೆ, ಇಂಟೀರಿಯರ್‌ನಲ್ಲಿ ಟ್ರಿಪಲ್ ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಪ್ಯಾಸೆಂಜರ್ ಸೈಡ್ ಡಿಸ್​ಪ್ಲೇ), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, 12-ಸ್ಪೀಕರ್ ಬಿಜಿಎಲ್ ಸೌಂಡ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಆಟೋಮೆಟಿಕ್ ವೈಪರ್‌ಗಳು, ರೇರ್ ಎಸಿ ವೆಂಟ್‌ಗಳು, ಸನ್‌ರೂಫ್ ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.

ಸುರಕ್ಷತೆ: ಹೊಸ ಟಾಟಾ ಸಿಯೆರಾದಲ್ಲಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

tata-harrier-vs-tata-sierra-which-is-the-best-heres-the-comparison

ಹೊಸ ಟಾಟಾ ಹ್ಯಾರಿಯರ್‌ನಲ್ಲಿ 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್​​ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಎಂಜಿನ್: ಟಾಟಾ ಸಿಯೆರಾ SUV ಯೊಂದಿಗೆ ಮೂರು 1.5-ಲೀಟರ್ ಎಂಜಿನ್ ಆಯ್ಕೆಗಳನ್ನು ನೀಡುತ್ತಿದೆ, 105bhp NA ಪೆಟ್ರೋಲ್, 158bhp ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 116bhp ಡೀಸೆಲ್ ಆಗಿದೆ. NA ಪೆಟ್ರೋಲ್ ಅನ್ನು ಮ್ಯಾನುವಲ್ ಮತ್ತು DCT ಎರಡಕ್ಕೂ ಜೋಡಿಸಲಾಗಿದೆ, ಆದರೆ ಟರ್ಬೋ ಪೆಟ್ರೋಲ್ ಎಂಜಿನ್ ಆಟೋಮೇಟೆಡ್ ಗೇರ್‌ಬಾಕ್ಸ್ ಅನ್ನು ಮಾತ್ರ ಪಡೆಯುತ್ತದೆ. ಡೀಸೆಲ್ ಮ್ಯಾನುವಲ್ ಮತ್ತು ಆಟೋಮೇಟೆಡ್ ಗೇರ್‌ಬಾಕ್ಸ್ ಎರಡೂ ಆಯ್ಕೆಗಳೊಂದಿಗೆ ಲಭ್ಯವಿದೆ.

ಇನ್ನು ಟಾಟಾ ಹ್ಯಾರಿಯರ್ ಪ್ರಸ್ತುತ 168bhp, 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತಿದ್ದು, ಇದನ್ನು ಮ್ಯಾನುವಲ್ ಅಥವಾ ಆಟೋಮೇಟೆಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಬಹುದು. ಹಾಗೆಯೇ 1.5-ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

More from DriveSpark

Article Published On: Wednesday, December 31, 2025, 12:48 [IST]
English summary
Tata harrier vs tata sierra which is the best heres the comparison
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+