ಕೇವಲ ಒಂದೇ ದಿನ ಬಾಕಿ: ಮೇ ತಿಂಗಳಲ್ಲಿ 4 ಹೊಸ ಕಾರುಗಳು ಬಿಡುಗಡೆ: ಬೇಗ ರೆಡಿಯಾಗಿ...
ಭಾರತದ ನಾಲ್ಕು ಪ್ರಮುಖ ಕಾರು ತಯಾರಕ ಕಂಪನಿಗಳು ತಮ್ಮ ಹೊಸ ಕಾರುಗಳ ಬಿಡುಗಡೆಗೆ ರೆಡಿಯಾಗಿವೆ. ಪ್ರಮುಖ ವಾಹನ ತಯಾರಕರಾದ ಟಾಟಾ, ಕಿಯಾ, ಎಂಜಿ ಮತ್ತು ಫೋಕ್ಸ್ ವ್ಯಾಗನ್ 2025 ರ ಮೇ ತಿಂಗಳಲ್ಲಿ ತಮ್ಮ ಮುಂಬರುವ ಹೊಸ ಉತ್ಪನ್ನಗಳನ್ನು ಪರಿಚಯಿಸಲಿವೆ. 2025ರ ಕಿಯಾ ಕ್ಯಾರೆನ್ಸ್, ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ನವೀಕರಿಸಿದ ವಿಂಡ್ಸರ್ ಇವಿ, 2025ರ ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್, 250 ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ ಕಾರುಗಳು ಮೇ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿಬಿಟ್ಟಿವೆ.
ಹೊಸ ಕಿಯಾ ಕಾರೆನ್ಸ್: 2025ರ ನವೀಕರಿಸಿದ ಹೊಸ ಕಿಯಾ ಕಾರೆನ್ಸ್ ಮೇ 8 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ನವೀಕರಿಸಿದ ಕಿಯಾ ಕ್ಯಾರೆನ್ಸ್ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂರು 1.5 ಲೀಟರ್ ಎಂಜಿನ್ ಗಳೊಂದಿಗೆ ಮುಂದುವರಿಯುತ್ತದೆ. 115 ಬಿಹೆಚ್ ಪವರ್ ಪೆಟ್ರೋಲ್, 160 ಬಿಹೆಚ್ ಪವರ್ ಟರ್ಬೊ ಪೆಟ್ರೋಲ್ ಮತ್ತು 116 ಬಿಹೆಚ್ ಪವರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹಾಗೆಯೇ ಉಳಿಸಿಕೊಳ್ಳಲಿದೆ.

2025ರ ನವೀಕರಿಸಿದ ಹೊಸ ಕಿಯಾ ಕಾರೆನ್ಸ್ ಕಾರಿನ ಹೊಸ ನವೀಕರಣಗಳ ವಿಷಯಕ್ಕೆ ಬಂದರೆ, ಇಂಟೀರಿಯರ್‌ನಲ್ಲಿ ಲೆವೆಲ್ 2 ADAS, 360 ಡಿಗ್ರಿ ಕ್ಯಾಮೆರಾ, ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ನವೀಕರಿಸಿದ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಪನೋರಮಿಕ್ ಸನ್ ರೂಫ್ ಸೇರಿದಂತೆ ಗಮನಾರ್ಹ ವೈಶಿಷ್ಟ್ಯ ನವೀಕರಣಗಳು ಹೊಸ ಕಾರಿನಲ್ಲಿ ಸಿಗಲಿವೆ.
2025ರ ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್: ಈ ಕಾರು ಮೇ 21 ರಂದು ರಸ್ತೆಗಿಳಿಯಲಿದೆ. ಹ್ಯಾಚ್ ಬ್ಯಾಕ್ ಒಳಗೆ ಮತ್ತು ಹೊರಗೆ ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಆಲ್ಟ್ರೋಜ್ 88 ಬಿಹೆಚ್ ಪವರ್ ಹೊರಹಾಕುವ 1.2 ಲೀಟರ್ ಪೆಟ್ರೋಲ್, 90 ಬಿಹೆಚ್ ಪವರ್ ಹೊರಹಾಕುವ 1.5 ಲೀಟರ್ ಡೀಸೆಲ್ ಮತ್ತು 120 ಬಿಹೆಚ್ ಪವರ್ ಹೊರಹಾಕುವ 1.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ.

ನವೀಕರಿಸಿದ ಆಲ್ಟ್ರೊಜ್ ಸ್ವಲ್ಪ ಪರಿಷ್ಕೃತ ಮುಂಭಾಗದ ಬಂಪರ್, ಟೈಲ್ ಲ್ಯಾಂಪ್ ಗಳು ಮತ್ತು ಫಾಗ್ ಲ್ಯಾಂಪ್ ಕ್ಲಸ್ಟರ್ ಗಳ ಕೆಳಗೆ ಲಂಬವಾದ ಕ್ರೀಸ್, ಇಂಡಿಕೇಟರ್ ಗಳಲ್ಲಿ ಎಲ್ಇಡಿ ಅಂಶಗಳನ್ನು ಹೊಂದಿರುತ್ತದೆ. ನವೀಕರಿಸಿದ ಆಲ್ಟ್ರೊಜ್ ಹೊಸ ಅಪ್ಹೋಲ್ಸ್ಟರಿ ಮತ್ತು ಡೋರ್ ಟ್ರಿಮ್ ಜೊತೆಗೆ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಘಟಕವನ್ನು ಸಹ ಪಡೆಯುವ ನಿರೀಕ್ಷೆಯಿದೆ.
2025ರ ಎಂಜಿ ವಿಂಡ್ಸರ್ ಇವಿ: ಎಂಜಿ ಮೋಟಾರ್ ಇಂಡಿಯಾ ನವೀಕರಿಸಿದ ವಿಂಡ್ಸರ್ ಇವಿಯ ಅಧಿಕೃತ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಹೊಸ 50.6 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಹೊಸ ಕಾರನ್ನು ಮೇ 2025 ರ ಆರಂಭಿಕ ವಾರಗಳಲ್ಲಿ ಪರಿಚಯಿಸಲಿದೆ. 2025ರ ಎಂಜಿ ವಿಂಡ್ಸರ್ ಇವಿ ಲಾಂಗ್-ರೇಂಜ್ ಆವೃತ್ತಿಯು ಒಮ್ಮೆ ಚಾರ್ಜ್ ಮಾಡಿದರೆ 460 ಕಿ.ಮೀ ರೇಂಜ್ ನೀಡಲಿದೆ.

ನವೀಕರಿಸಿದ ವಿಂಡ್ಸರ್ ಇವಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ನೊಂದಿಗೆ ಬರುವ ಸಾಧ್ಯತೆಯಿದೆ. ಇದರ ಜೊತೆಗೆ ಹೊಸ ದೊಡ್ಡ ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟರ್ ಮತ್ತು ಎಫ್ ಡಬ್ಲ್ಯುಡಿ (ಫ್ರಂಟ್-ವೀಲ್ ಡ್ರೈವ್) ಕಾನ್ಫಿಗರೇಶನ್ 136 ಬಿಹೆಚ್ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ: 2025ರ ಮೇ ತಿಂಗಳ ಕೊನೆಯಲ್ಲಿ ಬಹುನಿರೀಕ್ಷಿತ ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ ಕಾರುಗಳನ್ನು ಸಿಬಿಯು ಘಟಕಗಳಾಗಿ ಭಾರತಕ್ಕೆ ತರಲಾಗುವುದು. ಇದು 5.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಮತ್ತು ಗರಿಷ್ಠ 250 ಕಿ.ಮೀ ವೇಗವನ್ನು ಹೊಂದಿದೆ. ಈ ಪರ್ಫಾಮೆನ್ಸ್ ಹ್ಯಾಚ್ ಬ್ಯಾಕ್ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗೆ ಜೋಡಿಸಲ್ಪಟ್ಟಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications