ಬಿಡುಗಡೆಗೆ ಸಾಲಾಗಿ ನಿಂತಿವೆ ನಾಲ್ಕು ಹೊಸ ಎಸ್‌ಯುವಿಗಳು: ಅಗ್ಗದ ಬೆಲೆಗೆ ಮಾರುತಿ ಇ-ವಿಟಾರಾ?

ಭಾರತದಲ್ಲಿ ಹಲವಾರು ಕಾರು ತಯಾರಕ ಕಂಪನಿಗಳು ತಮ್ಮ ಇವಿ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ. ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ ಮತ್ತು ಎಂಜಿಯಂತಹ ಬ್ರಾಂಡ್ ಗಳು ಈಗಾಗಲೇ ತಮ್ಮ ಶ್ರೇಣಿಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿವೆ. ಮಾರುತಿ ಕೂಡ ಮುಂಬರುವ ತಿಂಗಳುಗಳಲ್ಲಿ, ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇವಿ ವಲಯದಲ್ಲಿ ಪೈಪೋಟಿ ಹೆಚ್ಚಾಗಿದ್ದು, 2025 ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರುಗಳು ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿವೆ. ಯಾವೆಲ್ಲಾ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ ಬನ್ನಿ ನೋಡೋಣ.

ಟಾಟಾ ಹ್ಯಾರಿಯರ್ ಇವಿ: ಹೊಸ ಟಾಟಾ ಹ್ಯಾರಿಯರ್ ಇವಿ (Tata Harrier EV) ಜೂನ್ 3 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ರೂ.24 ಲಕ್ಷ ದಿಂದ ರೂ.28 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಈವರೆಗೆ ಟಾಟಾ ಹ್ಯಾರಿಯರ್ ಇವಿ ಪವರ್‌ಟ್ರೇನ್ ಆಯ್ಕೆಯ ಕುರಿತಂತೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

tata-maruti-kia-mahindra-electric-cars-launching-in-2025

ಈ ಕಾರು 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡಬಹದು ಎಂದು ಅಂದಾಜಿಸಲಾಗಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಎಂಜಿ ಜಡ್ಎಸ್ ಇವಿ ಮತ್ತು ಮಾರುತಿ ಸುಜುಕಿ ಇ-ವಿಟಾರಾ ಎಸ್‌ಯುವಿ ಪ್ರಬಲವಾದ ಎದುರಾಳಿಯಾಗಿದೆ.

ಹೊಸ ಟಾಟಾ ಹ್ಯಾರಿಯರ್ ಇವಿನಲ್ಲಿ ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.3-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (10.25-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡುಯಲ್ ಜೋನ್ ಆಟೋಮೆಟಿಕ್ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಫೋರ್ಟ್ & ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ.

tata-maruti-kia-mahindra-electric-cars-launching-in-2025

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಇಎಸ್‍ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ.

ಕಿಯಾ ಕ್ಲಾವಿಸ್ ಇವಿ: ಇಂಧನ ಚಾಲಿತ ಕಿಯಾ ಕ್ಲಾವಿಸ್‌ನ ಅಧಿಕೃತ ಅನಾವರಣದ ನಂತರ ಕಿಯಾ ಇಂಡಿಯಾ ಶೀಘ್ರದಲ್ಲೇ ಕಿಯಾ ಕ್ಲಾವಿಸ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದು ಕ್ಯಾರೆನ್ಸ್ ಕ್ಲಾವಿಸ್ ಅನ್ನು ಆಧರಿಸಿರಲಿದ್ದು, ಎಲೆಕ್ಟ್ರಿಕ್ ಕ್ಲಾವಿಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.20 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

tata-maruti-kia-mahindra-electric-cars-launching-in-2025

ಕ್ಲಾವಿಸ್ ಇವಿ ಜೂನ್ 2025 ರ ವೇಳೆಗೆ ಹೊರಬರಲಿದೆ. ಇದು ಭಾರತದ ಮೊದಲ ಸಾಮೂಹಿಕ ಮಾರುಕಟ್ಟೆಯ ಏಳು ಆಸನಗಳ ಎಲೆಕ್ಟ್ರಿಕ್ ವಾಹನವಾಗಲಿದೆ. ಈ ಎಲೆಕ್ಟ್ರಿಕ್ ವಾಹನವನ್ನು ಎರಡು ರೂಪಾಂತರಗಳಲ್ಲಿ ನೀಡಲಾಗುವುದು, ಕ್ರೆಟಾ ಎಲೆಕ್ಟ್ರಿಕ್ ಗೆ ಹೋಲುವ ಅದೇ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡುವ ಸಾಧ್ಯತೆಗಳಿವೆ. ಕ್ರೆಟಾ ಎಲೆಕ್ಟ್ರಿಕ್ ನಲ್ಲಿ ನೀವು 42 ಕಿಲೋವ್ಯಾಟ್ ಮತ್ತು 51.4 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಗಳಿಂದ ಆಯ್ಕೆ ಮಾಡಬಹುದು.

ಸಣ್ಣ ಬ್ಯಾಟರಿಯು ಪ್ರತಿ ಚಾರ್ಜ್ ಗೆ 390 ಕಿ.ಮೀ ರೇಂಜ್ ನೀಡುತ್ತದೆ ಎಂದು ಹೇಳಲಾಗಿದೆ. 51.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್‌ಗೆ 473 ಕಿ.ಮೀ ರೇಂಜ್ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ವಾಹನವು ಟಾಟಾ ಕರ್ವ್.ಇವಿ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಎಂಜಿ ಝಡ್ಎಸ್ ಇವಿ ಮತ್ತು ಮಹೀಂದ್ರಾ ಬಿಇ 6 ಕಾರುಗಳಿಗೆ ಪೈಪೋಟಿ ನೀಡಲಿದೆ.

ಇಂಧನ ಚಾಲಿತ ಕ್ಲಾವಿಸ್ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಇವಿ ಆವೃತ್ತಿಯನ್ನು ಸಹ ಡಿಸೈನ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹೆಚ್ಚಿನ ಒಳಾಂಗಣ ವಿನ್ಯಾಸಗಳು ಇವಿಯಲ್ಲಿಯೂ ಬದಲಾಗದೆ ಉಳಿಯಬಹುದು. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಎರಡನೇ ಸಾಲಿನ ಸೀಟುಗಳಿಗೆ ಟಂಬಲ್ ಫಂಕ್ಷನ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್ ರೂಫ್ ಮತ್ತು ADAS ನಂತಹ ಫೀಚರ್‌ಗಳನ್ನು ಇವಿಯಲ್ಲಿ ನಿರೀಕ್ಷಿಸಲಾಗಿದೆ.

ಮಹೀಂದ್ರಾ ಎಕ್ಸ್ ಯುವಿ 3X0 ಇವಿ: ಸ್ವದೇಶಿ ಬ್ರಾಂಡ್ ಮಹೀಂದ್ರಾ ಕಂಪನಿ ತನ್ನ ಎಕ್ಸ್‌ಯುವಿ 3X0 ನ ಎಲೆಕ್ಟ್ರಿಕ್ ಆವೃತ್ತಿಯನ್ನು ಪರೀಕ್ಷಿಸುತ್ತಿದೆ. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಕಾರು ಅಸ್ತಿತ್ವದಲ್ಲಿರುವ XUV 400 ಅನ್ನು ಬದಲಾಯಿಸುತ್ತದೆ. ಈ ಇವಿ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿರಲಿದ್ದು, 34.5 ಕಿಲೋವ್ಯಾಟ್ ಮತ್ತು 39.5 ಕಿಲೋವ್ಯಾಟ್, ಎರಡೂ ಒಂದೇ ಎಲೆಕ್ಟ್ರಿಕ್ ಮೋಟರ್ ನೊಂದಿಗೆ 150 ಪಿಎಸ್ ಮತ್ತು 310 ಎನ್ಎಂ ಉತ್ಪಾದಿಸುತ್ತದೆ.

ಇದನ್ನು ಒಮ್ಮೆ ಚಾರ್ಜ್ ಮಾಡೆದ್ರೆ 456 ಕಿ.ಮೀ ವರೆಗೆ ರೇಂಜ್ ನೀಡುವ ನಿರೀಕ್ಷೆಯಿದೆ. ಸ್ಪರ್ಧೆಯ ವಿಷಯದಲ್ಲಿ, ಇದು ಟಾಟಾ ನೆಕ್ಸಾನ್ ಇವಿಯೊಂದಿಗೆ ಹೋರಾಡಲಿದ್ದು, ಟಾಟಾ ಕರ್ವ್ ಇವಿ ಮತ್ತು ಎಂಜಿ ಝಡ್ಎಸ್ ಇವಿಗೆ ಕೈಗೆಟುಕುವ ಪರ್ಯಾಯವಾಗಿ ಸಿಗುವ ನಿರೀಕ್ಷೆಯಿದೆ. ಮಹೀಂದ್ರಾ XUV 3XO EV ಬೆಲೆ ರೂ. 15.00 ದಿಂದ ರೂ. 18.00 ಲಕ್ಷ (ಎಕ್ಸ್‌ ಶೋರೂಂ) ವ್ಯಾಪ್ತಿಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ.

ಮಾರುತಿ ಸುಜುಕಿ ಇ-ವಿಟಾರಾ: ಮಾರುತಿ ಸುಜುಕಿ ಕೊನೆಗೂ ತನ್ನ ಬಹುನಿರೀಕ್ಷಿತ ಇ-ವಿಟಾರಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮಾರುತಿ ಸುಜುಕಿ ಇ-ವಿಟಾರಾ ಬೆಲೆಯು ರೂ.17 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸೆಪ್ಟೆಂಬರ್ 2025 ರಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ. ಇದು 48.8 ಕಿಲೋವ್ಯಾಟ್ ಪ್ಯಾಕ್ ಮತ್ತು 61.1 ಕಿಲೋವ್ಯಾಟ್ ಪ್ಯಾಕ್ ಎಂಬ ಎರಡು ಬ್ಯಾಟರಿ ಆಯ್ಕೆಗಳನ್ನು ನೀಡುವ ಸಾಧ್ಯತೆಯಿದೆ.

48.8 ಕಿಲೋವ್ಯಾಟ್ ಪ್ಯಾಕ್ ಅನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 345 ಕಿ.ಮೀ ರೇಂಜ್ ನೀಡುತ್ತದೆ. 61 ಕಿಲೋವ್ಯಾಟ್ ಮಾದರಿಯು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 426 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ. ಸ್ಲೈಡಿಂಗ್ ಮತ್ತು ರೆಕ್ಲೈನಿಂಗ್ ಸೀಟುಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಯುಎಸ್‌ಬಿ ಮತ್ತು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇವಿಷ್ಟೇ ಅಲ್ಲದೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.1-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ, ಆಂಬಿಯೆಂಟ್ ಲೈಟಿಂಗ್, 10-ವೇ ಪವರ್ಡ್ ಡ್ರೈವರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.

ಪ್ರಯಾಣಿಕರ ರಕ್ಷಣೆಗಾಗಿ 7 - ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 360 - ಡಿಗ್ರಿ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿರಲಿದೆ.

Article Published On: Wednesday, May 21, 2025, 12:14 [IST]
English summary
Tata maruti kia mahindra electric cars launching in 2025
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+