ಟಾಟಾ ಬ್ರಹ್ಮಾಸ್ತ್ರ.. ಹೊಸ ಸಿಯೆರಾ ರಗಡ್ SUV ಬಿಡುಗಡೆ: ಟಾಪ್ ಬ್ರಾಂಡ್‌ಗಳಿಗೆ ಭಯ ಶುರು!

ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಸಿಯೆರಾವನ್ನು ಬಿಡುಗಡೆ (ನವೆಂಬರ್ 25, 2025) ಮಾಡಿದೆ. ಇದನ್ನು 20 ವರ್ಷಗಳ ನಂತರ ಭಾರತೀಯ ಮಾರುಕಟ್ಟೆಗೆ ಮತ್ತೆ ಪರಿಚಯಿಸಲಾಗಿದೆ. ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆ ರೂ. 11.49 ಲಕ್ಷದಿಂದ ಪ್ರಾರಂಭವಾಗುತ್ತದೆ, ಬುಕಿಂಗ್ ಡಿಸೆಂಬರ್ 16, 2025 ರಿಂದ ಪ್ರಾರಂಭವಾಗುತ್ತದೆ ಮತ್ತು ವಿತರಣೆಗಳು ಜನವರಿ 2026 ರಲ್ಲಿ ಪ್ರಾರಂಭವಾಗಲಿವೆ.​ ಹೊಸ ಟಾಟಾ ಸಿಯೆರಾ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಎಲೆಕ್ಟ್ರಿಕ್ ಆವೃತ್ತಿಯು ನಂತರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ಇದು ಪನೋರಮಿಕ್ ಸನ್‌ರೂಫ್, ಡಿಜಿಟಲ್ ಡ್ಯಾಶ್‌ಬೋರ್ಡ್ ಮತ್ತು ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಆಧುನಿಕ ಶೈಲಿಯನ್ನು ಹೊಂದಿದೆ. ಸುರಕ್ಷತೆಯು ಒಂದು ಪ್ರಮುಖ ಅಂಶವಾಗಿದ್ದು, ಆರು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ನಂತಹ ಸುಧಾರಿತ ಫೀಚರ್ಸ್ ಒಳಗೊಂಡಿದೆ. ಐಕಾನಿಕ್ ಡಿಸೈನ್, ಆಧುನಿಕ ತಂತ್ರಜ್ಞಾನ ಮತ್ತು ಬಲವಾದ ಸುರಕ್ಷತಾ ಫೀಚರ್ಸ್ ಹುಡುಕುವ ಖರೀದಿದಾರರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.

tata-motors-launched-iconic-sierra-suv-at-11-49-lakh

ಇಂಟೀರಿಯರ್‌ನಲ್ಲಿ ಟಾಟಾ ಸಿಯೆರಾ ಮೂರು ಡ್ಯಾಶ್‌ಬೋರ್ಡ್ ಡಿಸ್ಪ್ಲೇಗಳಿಂದ ಹೈಲೈಟ್ ಮಾಡಲಾದ ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ. ನಾಲ್ಕು-ಸ್ಪೋಕ್ ಸ್ಟೀರಿಂಗ್ ವೀಲ್ ಪ್ರಕಾಶಿತ ಟಾಟಾ ಲೋಗೋ ಮತ್ತು ಟಚ್ ಕಂಟ್ರೋಲ್‌ಗಳನ್ನು ಹೊಂದಿದೆ. 12-ಸ್ಪೀಕರ್ JBL ಸೌಂಡ್ ಸಿಸ್ಟಮ್, ಸೋನಿಕ್‌ಶಾಫ್ಟ್ ಸೌಂಡ್‌ಬಾರ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ (ಭಾರತದಲ್ಲಿ ಅತಿ ದೊಡ್ಡದು) ನೀಡಲಾಗಿದೆ.

ಇವಿಷ್ಟೇ ಅಲ್ಲದೆ ವೈರ್‌ಲೆಸ್ ಚಾರ್ಜರ್, ಹಿಂಭಾಗದ ಸನ್‌ಶೇಡ್ ‌ಗಳು, ಪವರ್ಡ್ ಫ್ರಂಟ್ ಸೀಟ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ. ಸೌಕರ್ಯವನ್ನು ಹೆಚ್ಚಿಸುವ ಸಿಯೆರಾ ಒಳಾಂಗಣದಾದ್ಯಂತ ಸಾಫ್ಟ್-ಟಚ್ ಪ್ಯಾನೆಲ್‌ಗಳನ್ನು ಮತ್ತು ಆಧುನಿಕ, ಉನ್ನತ ಮಟ್ಟದ ಭಾವನೆಗಾಗಿ ಫ್ಲೋಟಿಂಗ್ ಆರ್ಮ್‌ರೆಸ್ಟ್ ಅನ್ನು ಸಹ ನೀಡಲಾಗಿದೆ.

tata-motors-launched-iconic-sierra-suv-at-11-49-lakh

ಟಾಟಾ ಸಿಯೆರಾ ಬಿಡುಗಡೆಯಾದ ನಂತರ, ಹುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಮತ್ತು ಇನ್ನೂ ಹೆಚ್ಚಿನ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಟಾಟಾ ಸಿಯೆರಾ ಮೂರು ಎಂಜಿನ್ ಆಯ್ಕೆಗಳನ್ನು ಪಡೆದಿದ್ದು, 1.5-ಲೀಟರ್ ಕ್ರಯೋಜೆಟ್ ಡೀಸೆಲ್ ಎಂಜಿನ್, ಹೊಚ್ಚ ಹೊಸ 1.5 - ಲೀಟರ್ TGDi ಹೈಪರಿಯನ್ ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ 1.5-ಲೀಟರ್ NA ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

1.5-ಲೀಟರ್ ಕ್ರಯೋಜೆಟ್ ಟರ್ಬೊ ಡೀಸೆಲ್ ಎಂಜಿನ್ 118 PS ಪವರ್ ಮತ್ತು 260 Nm (MT) ಟಾರ್ಕ್ ಮತ್ತು 280 Nm (AT) ಗರಿಷ್ಠ ಪವರ್ ಹೊರಹಾಕುತ್ತದೆ. ಹಾಗೆಯೇ 1.5-ಲೀಟರ್ NA ರೆವೊಟ್ರಾನ್ 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಇದು 106 PS ಪವರ್ ಮತ್ತು 145 Nm ಟಾರ್ಕ್ ಹೊರಹಾಕುತ್ತದೆ. ಕೊನೆಯದಾಗಿ 1.5-ಲೀಟರ್ ಟರ್ಬೋಚಾರ್ಜ್ಡ್ ಹೈಪರಿಯನ್ ಎಂಜಿನ್ 160 PS ಪವರ್ ಮತ್ತು 255 Nm ಟಾರ್ಕ್ ಹೊರಹಾಕುತ್ತದೆ.

tata-motors-launched-iconic-sierra-suv-at-11-49-lakh

ಸುರಕ್ಷತೆಯ ವಿಷಯದಲ್ಲಿ, ಟಾಟಾ ಸಿಯೆರಾದ ಲೆವೆಲ್ 2 ADAS ಸೂಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್ ಬ್ಲೈಂಡ್ ಸ್ಪಾಟ್ ಡಿಟೆಕ್ಟರ್‌ಗಳು, 21 ಕಾರ್ಯಗಳನ್ನು ಹೊಂದಿರುವ ESP ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ. ಇದು ಕಾರಿಗೆ ಅತ್ಯಾಧುನಿಕ ಸೇಫ್ಟಿ ಫೀಚರ್ಸ್ ಅನ್ನು ಒದಗಿಸುವುದಲ್ಲದೆ ಪ್ರಯಾಣಿಕರಿಗೆ ಸಂಭವನೀಯ ಅಪಘಾತಗಳಿಂದ ರಕ್ಷಣೆ ಒದಗಿಸುತ್ತದೆ.

ಇನ್ನು ಇವು ಮಾತ್ರವಲ್ಲದೆ ಹೊಸ ಟಾಟಾ ಸಿಯೆರಾ 6-ಏರ್‌ಬ್ಯಾಗ್‌ಗಳು, ಸೀಟ್‌ಬೆಲ್ಟ್ ಆಂಕರ್ ಪ್ರಿ-ಟೆನ್ಶನ್, ಮಕ್ಕಳ ಸುರಕ್ಷತೆಗಾಗಿ ಐಸೊಫಿಕ್ಸ್ ಟೆಥರ್‌ಗಳು, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಒಟ್ಟಾರೆ ಹೊಸ ಟಾಟಾ ಸಿಯೆರಾ ಆಕರ್ಷಕ ಐಷಾರಾಮಿ ಪ್ಯಾಕೇಜ್ ನೊಂದಿಗೆ ಬಿಡುಗಡೆಯಾಗಿದೆ.

More from DriveSpark

Article Published On: Tuesday, November 25, 2025, 14:17 [IST]
English summary
Tata motors launched iconic sierra suv at 11 49 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+