Tata: ಟಾಟಾ ಕಾರುಗಳ ಮೇಲೆ ಕೇವಲ 4,999 EMI ಘೋಷಣೆ: ವರ್ಷಾಂತ್ಯ ಕೊಡುಗೆ, ಮುಗಿಬಿದ್ದ ಜನ!

ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors) ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (TMPV) ಡಿಸೆಂಬರ್ ತಿಂಗಳಿಗೆ ಆಕರ್ಷಕ ಮಾಸಿಕ EMI ಯೋಜನೆಗಳನ್ನು ಪ್ರಕಟಿಸಿದೆ. ಟಿಯಾಗೊ ಕಾರಿಗೆ ಈಗ ತಿಂಗಳಿಗೆ ಕೇವಲ ರೂ. 4,999 ರಿಂದ EMI ಗಳು ಪ್ರಾರಂಭವಾಗುತ್ತಿದ್ದು, ವರ್ಷಾಂತ್ಯದ ಮೊದಲು ನಿಮ್ಮ ನೆಚ್ಚಿನ ಟಾಟಾ ವಾಹನವನ್ನು ಮನೆಗೆ ತರಲು ಇದು ನಿಸ್ಸಂದೇಹವಾಗಿ ಉತ್ತಮ ಸಮಯವಾಗಿದೆ. ಟಾಟಾ ಟಿಯಾಗೊ, ಟಿಗೊರ್, ಪಂಚ್, ಆಲ್ಟ್ರೋಜ್, ನೆಕ್ಸಾನ್, ಕರ್ವ್ ಸಹ ಕಡಿಮೆ EMI ಆಯ್ಕೆಗಳನ್ನು ಹೊಂದಿದ್ದು, ಅವುಗಳ ವಿವರ ಇಲ್ಲಿದೆ.

ಟಾಟಾ ಟಿಯಾಗೊ: ಇದು ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದ್ದು, ಬೆಲೆಯು ರೂ. 4.57 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈಗ ವರ್ಷಾಂತ್ಯದ ಕೊಡುಗೆಯಾಗಿ ತಿಂಗಳಿಗೆ ಕೇವಲ ರೂ. 4,999 ರಿಂದ EMI ಗಳು ಪ್ರಾರಂಭವಾಗುತ್ತಿವೆ. ಈ ಕಾರಿನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 10.25-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 4-ಸ್ಟಾರ್ GNCAP ರೇಟಿಂಗ್ ಮತ್ತು ಹೊಸ LED DRL ಗಳನ್ನು ಹೊಂದಿದೆ.

tata-motors-passenger-vehicles-launches-special-december-emi-offers

ಟಾಟಾ ಟಿಗೊರ್: ಟಾಟಾ ಟಿಗೋರ್ ಒಂದು ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು, ಬೆಲೆಯು ರೂ. 5.48 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈಗ ವರ್ಷಾಂತ್ಯದ ಕೊಡುಗೆಯಾಗಿ ತಿಂಗಳಿಗೆ ಕೇವಲ ರೂ. 5999 ರಿಂದ EMI ಗಳು ಪ್ರಾರಂಭವಾಗುತ್ತಿವೆ. ಈ ಕಾರಿನಲ್ಲಿ ದೊಡ್ಡ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು ಸಂಪರ್ಕಿತ ಕಾರು ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಸುರಕ್ಷತಾ ರೇಟಿಂಗ್‌ಗಳಲ್ಲಿ 4-ಸ್ಟಾರ್ ಗಳಿಸಿದೆ.

ಟಾಟಾ ಪಂಚ್: ಪಂಚ್ ಮಾರುಕಟ್ಟೆಯಲ್ಲಿ ಟಾಟಾದ ಪವರ್‌ಫುಲ್ ಸಬ್-ಕಾಂಪ್ಯಾಕ್ಟ್ SUV ಆಗಿದೆ. ಬೆಲೆಯು ರೂ. 5.49 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈಗ ವರ್ಷಾಂತ್ಯದ ಕೊಡುಗೆಯಾಗಿ ತಿಂಗಳಿಗೆ ಕೇವಲ ರೂ. 5999 ರಿಂದ EMI ಗಳು ಪ್ರಾರಂಭವಾಗುತ್ತಿವೆ. ಕಾರಿನಲ್ಲಿ ವಿಶಾಲವಾದ ಕ್ಯಾಬಿನ್ ಮತ್ತು ಆಧುನಿಕ ವೈಶಿಷ್ಟ್ಯಗಳ ಜೊತೆಗೆ 5-ಸ್ಟಾರ್ GNCAP ಸುರಕ್ಷತಾ ರೇಟಿಂಗ್ ಅನ್ನು ಸಹ ಹೊಂದಿದೆ. ಇದು ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

tata-motors-passenger-vehicles-launches-special-december-emi-offers

ಟಾಟಾ ಆಲ್ಟ್ರೋಜ್: 2025 ರ ಟಾಟಾ ಆಲ್ಟ್ರೋಜ್ 5-ಸ್ಟಾರ್ GNCAP ಸುರಕ್ಷತಾ ರೇಟಿಂಗ್ ಗಳಿಸಿದೆ. ಇದರ ಬೆಲೆಯು ರೂ. 6.30 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈಗ ವರ್ಷಾಂತ್ಯದ ಕೊಡುಗೆಯಾಗಿ ತಿಂಗಳಿಗೆ ಕೇವಲ ರೂ. 6777 ರಿಂದ EMI ಗಳು ಪ್ರಾರಂಭವಾಗುತ್ತಿವೆ. ಕಾರು ಹೊಸ DRL ಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಬಂಪರ್, ಪುನರ್ನಿರ್ಮಿಸಿದ 3D ಗ್ರಿಲ್, ಡ್ಯುಯಲ್ 10.25 ಇಂಚಿನ ಸ್ಕ್ರೀನ್‌ಗಳು ಮತ್ತು 360-ಡಿಗ್ರಿ ಸರೌಂಡ್ ಸಿಸ್ಟಮ್ ಹೊಂದಿದೆ.

ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಉತ್ತಮ ಕಾಂಪ್ಯಾಕ್ಟ್ SUV ಆಗಿದ್ದು, ಇದರ ಬೆಲೆಯು ರೂ. 7.99 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈಗ ವರ್ಷಾಂತ್ಯದ ಕೊಡುಗೆಯಾಗಿ ತಿಂಗಳಿಗೆ ಕೇವಲ ರೂ. 7666 ರಿಂದ EMI ಗಳು ಪ್ರಾರಂಭವಾಗುತ್ತಿವೆ. ಕಾರಿನಲ್ಲಿ ಪನೋರಮಿಕ್ ಸನ್‌ರೂಫ್ ಮತ್ತು JBL ಸೌಂಡ್ ಸಿಸ್ಟಮ್ ಸೇರಿದಂತೆ ಹಲವಾರು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಐದು-ಸ್ಟಾರ್ BNCAP ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಿದೆ.

tata-motors-passenger-vehicles-launches-special-december-emi-offers

ಟಾಟಾ ಕರ್ವ್: ಟಾಟಾ ಕರ್ವ್ವ್ ಒಂದು ಸೊಗಸಾದ ಕೂಪ್-ಎಸ್‌ಯುವಿ ಆಗಿದ್ದು, ಇದರ ಬೆಲೆಯು ರೂ. 9.65 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈಗ ವರ್ಷಾಂತ್ಯದ ಕೊಡುಗೆಯಾಗಿ ತಿಂಗಳಿಗೆ ಕೇವಲ ರೂ. 9999 ರಿಂದ EMI ಗಳು ಪ್ರಾರಂಭವಾಗುತ್ತಿವೆ. ಇದು ಲೆವೆಲ್ 2 ADAS, ಪನೋರಮಿಕ್ ಸನ್‌ರೂಫ್, 5-ಸ್ಟಾರ್ ಬಿಎನ್‌ಸಿಎಪಿ ರೇಟಿಂಗ್ ಮತ್ತು ವೈವಿಧ್ಯಮಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಮೇಲು ವಿಶೇಷ EMI ಆಫರ್ ನೀಡುತ್ತಿದ್ದು, ಟಿಯಾಗೋ ಇವಿ ಈಗ ರೂ. 5999 EMI, ಪಂಚ್ ಇವಿ ರೂ. 7999, ನೆಕ್ಸಾನ್ ಇವಿ ರೂ. 10,999 ಹಾಗೂ ಕರ್ವ್ ಇವಿ ರೂ. 14,555 ಆರಂಭಿಕ EMI ಹೊಂದಿದೆ. ಈ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಿಮ್ಮ ಹತ್ತಿರದ ಟಾಟಾ ಮೋಟಾರ್ಸ್ ಶೋರೂಂಗೆ ಭೇಟಿ ನೀಡಬಹುದು.

More from DriveSpark

Article Published On: Friday, December 19, 2025, 12:41 [IST]
English summary
Tata motors passenger vehicles launches special december emi offers
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+