ಇದಕ್ಕೆ ಅಲ್ಲವೆ ಟಾಟಾ ದೇಶದ ಹೆಮ್ಮೆ: ಮಹಿಳಾ ಕ್ರಿಕೆಟ್ ತಂಡದ ಪ್ರತಿಯೊಬ್ಬರಿಗೆ ದುಬಾರಿ ಸಿಯೆರಾ!

ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಚ್ಚ ಹೊಸ ಟಾಟಾ ಸಿಯೆರಾ ಎಸ್‌ಯುವಿಗಳನ್ನು ಉಡುಗೊರೆಯಾಗಿ ನೀಡುವುದಾಗಿ ಟಾಟಾ ಮೋಟಾರ್ಸ್ ಈ ಹಿಂದೆ ಘೋಷಿಸಿತ್ತು. ಅದರಂತೆ ಇಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (TMPVL) ಅಧ್ಯಕ್ಷ ಎನ್.ಚಂದ್ರಶೇಖರನ್ ಮತ್ತು TMPVL ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ ಅವರ ಸಮ್ಮುಖದಲ್ಲಿ ಆಟಗಾರ್ತಿಯರಿಗೆ ಹೊಚ್ಚಹೊಸ ಟಾಟಾ ಸಿಯೆರಾವನ್ನು ನೀಡಲಾಯಿತು.

ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ತನ್ನ ಚೊಚ್ಚಲ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ಮೆಚ್ಚುಗೆಯ ಸಂಕೇತವಾಗಿ, ಮಹಿಳಾ ಕ್ರಿಕೆಟ್ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಟಾಟಾ ಸಿಯೆರಾದ ವಿಶೇಷ ಮೊದಲ ಲಾಟ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಟಾಟಾ ಮೋಟಾರ್ಸ್ ಹೇಳಿತ್ತು. ಅದರಂತೆ ಈಗ ತಂಡದ ಪ್ರತಿ ಸದಸ್ಯರಿಗೆ ಅವರ ಆಯ್ಕೆಯ (ಟಾಪ್ ವೇರಿಯೆಂಟ್) ಟಾಟಾ ಸಿಯೆರಾವನ್ನು ನೀಡಿದೆ.

tata-motors-presents-sierra-suv-to-indian-women-s-cricket-team

ಟಾಟಾ ಸಿಯೆರಾ ವಿಶೇಷತೆಗಳು: ಹೊಚ್ಚ ಹೊಸ 'ಟಾಟಾ ಸಿಯೆರಾ' ಎಸ್‌ಯುವಿಯು ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಬೆಲೆ ವಿಷಯಕ್ಕೆ ಬಂದರೆ ರೂ. 11.49 ಲಕ್ಷ (ಎಕ್ಸ್-ಶೋರೂಂ) ದಿಂದ ಟಾಪ್ ವೇರಿಯೆಂಟ್ ರೂ. 21.29 ಲಕ್ಷ (ಎಕ್ಸ್-ಶೋರೂಂ) ದವರೆಗೆ ಇದೆ.

ಹೊಸ ಟಾಟಾ ಸಿಯೆರಾದಲ್ಲಿ ಡಾಲ್ಬಿ ಅಟ್ಮಾಸ್ ಸರೌಂಡ್ ಸೌಂಡ್ ತಂತ್ರಜ್ಞಾನ, ಆಂಬಿಯೆಂಟ್ ಲೈಟ್‌ಗಳು, ಡ್ಯುಯಲ್ - ಜೋನ್ AC, ವೈರ್‌ಲೆಸ್ ಫೋನ್ ಚಾರ್ಜರ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು ಡ್ರೈವರ್ ಸೀಟಿಗೆ ಪವರ್ಡ್ ಹೊಂದಾಣಿಕೆ, ಎರಡು ಡ್ರೈವ್ ಮೋಡ್‌ಗಳು ಮತ್ತು ಮೂರು ಟೆರೈನ್ ಮೋಡ್‌ಗಳಂತಹ ವೈಶಿಷ್ಟ್ಯಗಳ ದೀರ್ಘ ಪಟ್ಟಿಯನ್ನು ಹೊಂದಿದೆ.

tata-motors-presents-sierra-suv-to-indian-women-s-cricket-team

ಇವಿಷ್ಟೇ ಅಲ್ಲದೆ 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12.3 - ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್, ವೈರ್‌ಲೆಸ್ ಹೆಡ್‌ಫೋನ್‌ಗಳೊಂದಿಗೆ 12.3 - ಇಂಚಿನ ಪ್ಯಾಸೆಂಜರ್ ಸ್ಕ್ರೀನ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹೆಡ್-ಅಪ್ ಡಿಸ್ಪ್ಲೇ, 12-ಸ್ಪೀಕರ್ JBL ಸೌಂಡ್ ಸಿಸ್ಟಮ್ ಮತ್ತು ಡ್ಯಾಶ್‌ಬೋರ್ಡ್-ಮೌಂಟೆಡ್ ಸೌಂಡ್ ಬಾರ್ ಅನ್ನು ಒಳಗೊಂಡಿದೆ.

ಎಂಜಿನ್ ವಿಷಯಕ್ಕೆ ಬಂದರೆ ಇದರ 1.5-ಲೀಟರ್ 4-ಸಿಲಿಂಡರ್ ಡೈರೆಕ್ಟ್-ಇಂಜೆಕ್ಷನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 160hp ಪವರ್ ಹಾಗೂ 255Nm ಟಾರ್ಕ್ ಹೊರಹಾಕುತ್ತದೆ. ಇದನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಜೊತೆಗೆ ಇದರ 1.5-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 106hp ಪವರ್ ಹಾಗೂ 145Nm ಟಾರ್ಕ್ ಹೊರಹಾಕುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ಗೆ ಜೋಡಿಸಲಾಗಿದೆ.

tata-motors-presents-sierra-suv-to-indian-women-s-cricket-team

ಮೂರನೇ ಎಂಜಿನ್ ಆಯ್ಕೆಯಾಗಿರುವ ಸಿಯೆರಾ ಡೀಸೆಲ್ ಪರಿಚಿತ 1.5-ಲೀಟರ್ ಎಂಜಿನ್ ಆಗಿದ್ದು, 118hp ಪವರ್ ಹಾಗೂ 260Nm ಟಾರ್ಕ್ ಹೊರಹಾಕುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಬರುತ್ತದೆ. ಒಟ್ಟಾರೆ ಮೂರು ಪವರ್‌ಫುಲ್ ಎಂಜಿನ್‌ಗಳೊಂದಿಗೆ ಗ್ರಾಹಕರಿಗೆ ತಮ್ಮಿಷ್ಟದಂತೆ ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ.

ಹೊಸ ಟಾಟಾ ಸಿಯೆರಾ ಸುರಕ್ಷತೆಯಲ್ಲ ಉತ್ತಮವಾಗಿದ್ದು, ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ನೀಡಲಾಗಿದೆ.

More from DriveSpark

Article Published On: Tuesday, December 16, 2025, 18:05 [IST]
English summary
Tata motors presents sierra suv to indian women s cricket team
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+