TATA: ಸ್ವದೇಶಿ ಟಾಟಾ ವಿದೇಶಕ್ಕೆ ಎಂಟ್ರಿ.. ಗಟ್ಟಿಮುಟ್ಟಾದ ಈ 4 ಕಾರುಗಳು ಮಾರಾಟಕ್ಕೆ!

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿ ಎಂದೇ ಎಂದೇ ಹೆಸರುವಾಸಿಯಾಗಿದೆ. ದೇಶಿಯವಾಗಿ ಪ್ರಯಾಣಿಕ ವಾಹನ (Passenger Vehicle) ವಿಭಾಗದಲ್ಲಿ ಸಫಾರಿ, ಹ್ಯಾರಿಯರ್, ನೆಕ್ಸಾನ್, ಪಂಚ್, ಕರ್ವ್, ಟಿಯಾಗೊ ಹಾಗೂ ಟಿಗೂರ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದೇ ಟಾಟಾ ಕಂಪನಿಯು ವಿದೇಶಕ್ಕೂ ಲಗ್ಗೆ ಇಡಲು ಹಣಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಸದ್ಯ, ದಕ್ಷಿಣ ಆಫ್ರಿಕಾ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲು ಟಾಟಾ ಮೋಟಾರ್ಸ್ ಸರ್ವ ರೀತಿಯಲ್ಲೂ ಸಿದ್ದಗೊಂಡಿದೆ. ಈ ಬಗ್ಗೆ ವರ್ಷಾರಂಭದಲ್ಲೇ ಕಂಪನಿಯು ಘೋಷಣೆ ಮಾಡಿತ್ತು. ಆದರಿದು ಹಿಂತಿರುಗುವಿಕೆಯಾಗಿದೆ. 2019ರಲ್ಲಿ ಟಾಟಾ ಹಲವು ಕಾರಣಗಳಿಗೆ ಅಲ್ಲಿ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿತ್ತು.

Tata Motors Re Enter South Africa Expected To Launch Harrier Curvv Punch And Tiago Cars Details

ಆಗಸ್ಟ್ 19 ರಂದು ಏರ್ಪಡಿಸಿರುವ ಅದ್ದೂರಿ ಸಮಾರಂಭದೊಂದಿಗೆ ಟಾಟಾ ಕಂಪನಿಯು ದಕ್ಷಿಣ ಆಫ್ರಿಕಾ ಮಾರುಕಟ್ಟೆಗೆ ಮರು ಪ್ರವೇಶಿಸಲಿದೆ. ಅಂದು 4 ಜನಪ್ರಿಯ ಕಾರುಗಳಾದ ಹ್ಯಾರಿಯರ್, ಕರ್ವ್, ಪಂಚ್ ಹಾಗೂ ಟಿಯಾಗೊವನ್ನು ಅನಾವರಣಗೊಳಿಸಲಿದೆ ಎಂದು ವರದಿಯಾಗಿದೆ. ನೂತನ ಕಾರುಗಳನ್ನು ಸ್ಥಳೀಯವಾಗಿ ಮಾರಾಟಗೊಳಿಸಲು ಮೋಟಸ್ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮಹಾರಾಷ್ಟ್ರದ ಪುಣೆ ಸಮೀಪದ ಚಕನ್‌ನಲ್ಲಿರುವ ಟಾಟಾ ಉತ್ಪಾದನಾ ಘಟಕದಲ್ಲಿ ಸಿದ್ದಗೊಳ್ಳುವ ಕಾರುಗಳನ್ನು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಿದೆ ಎಂದು ಹೇಳಲಾಗಿದೆ. ಈ ಹಿಂದೆ ಟಾಟಾ ಇಂಡಿಕಾ ಹ್ಯಾಚ್‌ಬ್ಯಾಕ್, ಅಲ್ಲಿನ ಖರೀದಿದಾರನ್ನು ಸೆಳೆದಿತ್ತು. ಜೊತೆಗೆ ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿತ್ತು.

Tata Motors Re Enter South Africa Expected To Launch Harrier Curvv Punch And Tiago Cars Details

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಗೊಳ್ಳಲಿವೆ ಎನ್ನಲಾದ ಟಾಟಾ ಕಾರುಗಳ ವಿಶೇಷತೆಗಳೇನು?

ಟಾಟಾ ಹ್ಯಾರಿಯರ್ (Tata Harrier):

ಈ ಎಸ್‌ಯುವಿಯು ದೇಶೀಯವಾಗಿ ರೂ.15 ಲಕ್ಷದಿಂದ ರೂ.26.69 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದೆ. ಕೋರಲ್ ರೆಡ್, ಪೆಬಲ್ ಗ್ರೇ, ಲೂನಾರ್ ವೈಟ್, ಒಬೆರಾನ್ ಬ್ಲ್ಯಾಕ್, ಸನ್‌ಲಿಟ್ ಯೆಲ್ಲೋ ಹಾಗೂ ಸೀವೀಡ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಹ್ಯಾರಿಯರ್ ಕಾರಿನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. 2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದ್ದು, 14 ರಿಂದ 16 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೊರೊಮಿಕ್ ಸನ್‌ರೂಫ್ ಹಾಗೂ 7-ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Tata Motors Re Enter South Africa Expected To Launch Harrier Curvv Punch And Tiago Cars Details

ಟಾಟಾ ಕರ್ವ್ (Tata Curvv):

ಇದೊಂದು ಕೂಪೆ ಎಸ್‌ಯುವಿಯಾಗಿದೆ. ರೂ.10 ಲಕ್ಷದಿಂದ ರೂ.19.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಪಡೆದಿದೆ. ಫ್ಲೇಮ್ ರೆಡ್, ಪ್ರಿಸ್ಟೈನ್ ವೈಟ್, ಡೇಟೋನಾ ಗ್ರೇ, ಒಪೇರಾ ಬ್ಲೂ, ಪ್ಯೂರ್ ಗ್ರೇ ಹಾಗೂ ಗೋಲ್ಡ್ ಎಸೆನ್ಸ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 5 ಆಸನಗಳನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್/ ಡೀಸೆಲ್ ಎಂಜಿನ್ ಎಂಜಿನ್‌ನ್ನು ಒಳಗೊಂಡಿದೆ. 12.3-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಪಂಚ್ (Tata Punch):

ಈ ಮೈಕ್ರೋ ಎಸ್‌ಯುವಿಯು ರೂ.6.20 ಲಕ್ಷದಿಂದ ರೂ.10.32 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ.18 ರಿಂದ 26.99 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. 5-ಆಸನಗಳನ್ನು ತನ್ನದಾಗಿಸಿಕೊಂಡಿದೆ. 10.25-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ಗಳು ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

Tata Motors Re Enter South Africa Expected To Launch Harrier Curvv Punch And Tiago Cars Details

ಟಾಟಾ ಟಿಯಾಗೊ (Tata Tiago):

ಇದು ಹ್ಯಾಚ್‌ಬ್ಯಾಕ್ ಆಗಿದೆ. ರೂ.5 ಲಕ್ಷದಿಂದ ರೂ.8.55 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್/ ಸಿಎನ್‌ಜಿ ಎಂಜಿನ್ ಪಡೆದಿದ್ದು, 19.43 ರಿಂದ 28 ಕಿ.ಮೀ ವರೆಗೆ ಮೈಲೇಜ್ ಕೊಡಬಲ್ಲದು. 5-ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. 10.25-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್ ಹಾಗೂ ಯುಎಸ್‌‍ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Thursday, August 14, 2025, 11:10 [IST]
English summary
Tata motors re enter south africa expected to launch harrier curvv punch and tiago cars details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+