Tata: ಟಾಟಾ ಖ್ಯಾತಿ ಖಂಡಗಳನ್ನು ದಾಟಿ: ಭಾರತದ ಗಟ್ಟಿಮುಟ್ಟಾದ ಕಾರುಗಳು ಆಫ್ರಿಕಾದಲ್ಲಿ ಅನಾವರಣ
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors), ದಕ್ಷಿಣ ಆಫ್ರಿಕಾ (South Africa)ದ ಪ್ರಯಾಣಿಕ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ. ಇಲ್ಲಿನ ಜೋಹಾನ್ಸ್ ಬರ್ಗ್‌ನ ಸ್ಯಾಂಡ್‌ಟನ್‌ನಲ್ಲಿರುವ ದಿ ಗ್ಯಾಲೇರಿಯಾದಲ್ಲಿ ನಾಲ್ಕು ಹೊಸ ಮಾಡಲ್‌ಗಳನ್ನು ಅನಾವರಣಗೊಳಿಸಿದೆ. ಭಾರತದಲ್ಲಿ ಈಗಾಗಲೇ ತುಂಬಾ ಹೆಸರು ಮಾಡಿರುವ ಟಾಟಾ ಹ್ಯಾರಿಯರ್, ಕರ್ವ್ವ್, ಪಂಚ್ ಮತ್ತು ಟಿಯಾಗೊ ಮಾಡಲ್‌ಗಳನ್ನು ದಕ್ಷಿಣ ಆಫ್ರಿಕಾ ಗ್ರಾಹಕರ ವೈವಿಧ್ಯಮಯ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.
ಟಾಟಾ ದಕ್ಷಿಣ ಆಫ್ರಿಕಾ ದೇಶಾದ್ಯಂತ 40 ಡೀಲರ್‌ಶಿಪ್‌ಗಳ ಮೂಲಕ ಕಾರ್ಯನಿರ್ವಹಿಸಲಿದ್ದು, 2026 ರ ವೇಳೆಗೆ ದಕ್ಷಿಣ ಆಫ್ರಿಕಾದಾದ್ಯಂತ ವಿಶಾಲ ಪ್ರವೇಶ ಮತ್ತು ಬಲವಾದ ಗ್ರಾಹಕ ಬೆಂಬಲವನ್ನು ಖಚಿತಪಡಿಸಿಕೊಳ್ಳುವ ಯೋಜನೆಯೊಂದಿಗೆ 60 ಡೀಲರ್‌ಶಿಪ್‌ಗಳಿಗೆ ವಿಸ್ತರಿಸುವ ಯೋಜನೆ ಇದೆ. ದಕ್ಷಿಣ ಆಫ್ರಿಕಾದ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗುವ ಗುರಿ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಟಾಟಾ ಕಾರುಗಳು
ಟಾಟಾ ಹ್ಯಾರಿಯರ್: ಟಾಟಾ ಹ್ಯಾರಿಯರ್ ಪೂರ್ಣ ಗಾತ್ರದ SUV ಆಗಿದ್ದು, ಗಮನಾರ್ಹ ವಿನ್ಯಾಸ, ಕಮಾಂಡಿಂಗ್ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಸೌಕರ್ಯವನ್ನು ಒದಗಿಸುತ್ತದೆ. ಇದು 2.0-ಲೀಟರ್ ಕ್ರಯೋಟೆಕ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದೆ, ಈ ಎಂಜಿನ್ 125kW ಪವರ್ ಮತ್ತು 350Nm ಟಾರ್ಕ್ ಅನ್ನು ಹೊರಹಾಕುತ್ತದೆ.
ಹ್ಯಾರಿಯರ್ ಆಧುನಿಕ ತಂತ್ರಜ್ಞಾನದೊಂದಿಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಅಲೆಕ್ಸಾ ಕಾರ್ 2 ಹೋಮ್ ಸಂಪರ್ಕದೊಂದಿಗೆ ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ESP, EBD ಜೊತೆಗೆ ABS, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಲೆವೆಲ್ 2 ADAS ಜೊತೆಗೆ ವಾಯಿಸ್-ಎನೇಬಲ್ಡ್ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳನ್ನು ಹೊಂದಿದೆ.

ಟಾಟಾ ಕರ್ವ್ವ್: ಟಾಟಾ ಕರ್ವ್ವ್ ಆಕರ್ಷಕ ಕೂಪ್ SUV ಆಗಿದ್ದು, 1.2-ಲೀಟರ್ ರೆವೊಟ್ರಾನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 88kW ಪವರ್ ಮತ್ತು 170Nm ಟಾರ್ಕ್ ಅನ್ನು ಹೊರ ಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCA ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.
ಟಾಟಾ ಕರ್ವ್ವ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಸ್ಟಮೈಸ್ ಮಾಡಬಹುದಾದ ಮೂಡ್ ಲೈಟಿಂಗ್ ಅನ್ನು ಒಳಗೊಂಡಿದೆ. ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಶ್ರೇಣಿಯಾದ್ಯಂತ ನೀಡಲಾಗುತ್ತದೆ.

ಟಾಟಾ ಪಂಚ್: ಟಾಟಾ ಪಂಚ್ ಕಾಂಪ್ಯಾಕ್ಟ್ SUV ಆಗಿದ್ದು, 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದು 65kW ಪವರ್ ಮತ್ತು 115Nm ಟಾರ್ಕ್ ಉತ್ಪಾದಿಸುತ್ತದೆ. ವೇರಿಯೆಂಟ್ ಅವಲಂಬಿಸಿ, ಏಳು-ಇಂಚಿನ ಹರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಥವಾ ಫ್ಲೋಟಿಂಗ್ 10.5-ಇಂಚಿನ ಡಿಸ್ಪ್ಲೇಯನ್ನು ನೀಡುತ್ತದೆ. ಎರಡು ಕೂಡ Apple CarPlay ಮತ್ತು Android Auto ಅನ್ನು ಬೆಂಬಲಿಸುತ್ತವೆ.
ಇದರಲ್ಲಿ ಇಎಸ್‌ಪಿ, ಎಬಿಎಸ್ ಜೊತೆಗೆ ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳು ಸೇರಿದಂತೆ ಪ್ರಮುಖ ವೈಶಿಷ್ಟ್ಯಗಳಿವೆ. ಗಾತ್ರದಲ್ಲಿ ಕಾಂಪ್ಯಾಕ್ಟ್ ಆದರೂ ವಿಶಾಲವಾದ ಇಂಟೀರಿಯರ್ ಹೊಂದಿದೆ. ಇದು ಎಸ್‌ಯುವಿ ಡಿಸೈನ್, ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ದೈನಂದಿನ ಪ್ರಾಯೋಗಿಕತೆಯನ್ನು ಬಯಸುವ ಆಫ್ರಿಕಾ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಟಾಟಾ ಹೇಳಿದೆ.
ಟಾಟಾ ಟಿಯಾಗೊ: ಟಾಟಾ ಟಿಯಾಗೊ ಕೂಡ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದ್ದು, 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 63 ಕಿ.ವ್ಯಾ ಪವರ್ ಹಾಗೂ 113 ಎನ್ಎಂ ಟಾರ್ಕ್ ನೀಡುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ.
ಟಾಟಾ ಟಿಯಾಗೊದಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ (ಹೆಚ್ಚಿನ ಉತ್ಪನ್ನಗಳಲ್ಲಿ) ಹೊಂದಿರುವ 7.0-ಇಂಚಿನ ಅಥವಾ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಚ್‌ಡಿ ರಿವರ್ಸ್ ಕ್ಯಾಮೆರಾ, ವೈರ್‌ಲೆಸ್ ಸಂಪರ್ಕ ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್ ಸೇರಿವೆ. ಸುರಕ್ಷತೆಗಾಗಿ ABS, EBD, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳು ಶ್ರೇಣಿಯಾದ್ಯಂತ ಲಭ್ಯವಿದೆ.


Click it and Unblock the Notifications








