ಟಾಟಾ ಹೈಬ್ರಿಡ್ ಕಾರುಗಳ ಪರೀಕ್ಷೆ ಜೋರು: ಶೀಘ್ರದಲ್ಲೆ ದೊಡ್ಡ ಎಸ್‌ಯುವಿಗಳಲ್ಲಿ CNG ಆಯ್ಕೆ
ಟಾಟಾ ಮೋಟಾರ್ಸ್ ತನ್ನ ದೊಡ್ಡ ಎಸ್‌ಯುವಿಗಳಿಗೆ CNG ಮತ್ತು ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳನ್ನು ನೀಡಲು ಜೋರು ಪರೀಕ್ಷೆಗಳನ್ನು ನಡೆಸುಡುತ್ತಿದೆ. ಈಗಾಗಲೇ ಎಲೆಕ್ಟ್ರಿಕ್ ವಾಹನಗಳು ಮತ್ತು ಸಿಎನ್‌ಜಿ ಕಾರುಗಳ ಪ್ರಬಲ ಉಪಸ್ಥಿತಿಯನ್ನು ಹೊಂದಿರುವ ಟಾಟಾ ಮೋಟಾರ್ಸ್, ಈಗ 4 - ಮೀಟರ್ ಗಿಂತ ದೊಡ್ಡ ಎಸ್‌ಯುವಿಗಳಿಗೆ ಸಿಎನ್‌ಜಿ ಆಯ್ಕೆಯನ್ನು ಪರಿಗಣಿಸುತ್ತಿದೆ. ಇದಕ್ಕಾಗಿ ಕಂಪನಿಯ 4 ಮೀಟರ್ ಗಿಂತ ಹೆಚ್ಚು ಉದ್ದದ ಎಸ್‌ಯುವಿಗಳನ್ನು ನೋಡುವುದಾದ್ರೆ ಕರ್ವ್, ಹ್ಯಾರಿಯರ್, ಸಫಾರಿ ಮತ್ತು ಮುಂಬರುವ ಸಿಯೆರಾ ಕಾರುಗಳಿವೆ.
ಟಾಟಾ ಈಗಾಗಲೇ ತನ್ನ ಸಬ್ - 4 ಮೀಟರ್ ಮಾಡಲ್‌ಗಳಾದ ಟಿಯಾಗೊ, ಟಿಗೋರ್, ಆಲ್ಟ್ರೋಜ್, ಪಂಚ್ ಮತ್ತು ನೆಕ್ಸಾನ್‌ನಂತಹ ಕಾರುಗಳಲ್ಲಿ CNG ಆಯ್ಕೆಯನ್ನು ನೀಡುತ್ತಿದೆ. 2024 ರಲ್ಲಿ 1.2 ಲಕ್ಷಕ್ಕೂ ಹೆಚ್ಚು CNG ವಾಹನಗಳು ಮಾರಾಟವಾಗಿವೆ, 2025 ರಲ್ಲಿ 1.5 ಲಕ್ಷ ದಾಟುವ ನಿರೀಕ್ಷೆಯಿದೆ. ಬೇಡಿಕೆಯನ್ನು ಪರಿಗಣಿಸಿ ಟಾಟಾ ಈಗ ತನ್ನ ದೊಡ್ಡ ಎಸ್‌ಯುವಿಗಳಲ್ಲಿಯೂ CNG ಆಯ್ಕೆ ನೀಡಲು ಮುಂದಾಗುತ್ತಿದೆ.

ಮೂಲಗಳ ಪ್ರಕಾರ ಟಾಟಾ ಕರ್ವ್ CNG ಆಯ್ಕೆಯನ್ನು ಪಡೆಯುವ ಮೊದಲ ದೊಡ್ಡ SUV ಆಗುವ ನಿರೀಕ್ಷೆಯಿದೆ. ಇದು ಬಹುಶಃ ಟಾಟಾದ ಕಾರ್ಖಾನೆಯಲ್ಲಿ ಅಳವಡಿಸಲಾದ ಟರ್ಬೊ - ಪೆಟ್ರೋಲ್ CNG ಸಂರಚನೆಯನ್ನು ಪಡೆಯಲಿದೆ. ಟಾಟಾ 4.3 - ಮೀಟರ್‌ಗಿಂತ ಹೆಚ್ಚಿನ SUV ವಿಭಾಗವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ವಿಭಾಗದಲ್ಲಿ CNG ಯ ಭವಿಷ್ಯದ ಅಳವಡಿಕೆ ಬೇಡಿಕೆ ಮತ್ತು ಮಾರುಕಟ್ಟೆ ಪ್ರತಿಕ್ರಿಯೆಯನ್ನು ಅವಲಂಬಿಸಿ ಮುನ್ನುಗ್ಗಲಿದೆ.
ಗ್ರಾಹಕರ ಬೇಡಿಕೆ ಸ್ಥಿರವಾಗಿ ಹೆಚ್ಚುತ್ತಿರುವುದರಿಂದ ಮತ್ತು ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಮತ್ತು ಟೊಯೊಟಾ ಈಗಾಗಲೇ 4.3 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಗ್ರ್ಯಾಂಡ್ ವಿಟಾರಾ, ವಿಕ್ಟೋರಿಸ್, ಹೈರೈಡರ್ ಕಾರುಗಳಿಗೆ ಸಿಎನ್‌ಜಿಯನ್ನು ನೀಡುತ್ತಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಮುಂದುವರಿಯಲು ಟಾಟಾ ಈಗ ಅದೇ ಜಾಗದಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದು, ಕಂಪನಿಯು 4.3 ಮೀಟರ್ ಎಸ್‌ಯುವಿ ವಿಭಾಗವನ್ನು ಬಹಳ ನಿಕಟವಾಗಿ ಗಮನಿಸುತ್ತಿದೆ.

ಬೇಡಿಕೆ ಬಲಗೊಂಡರೆ ತನ್ನ ಸಿಎನ್‌ಜಿ ಕಾರುಗಳನ್ನು ವಿಸ್ತರಿಸಬಹುದು. ಕರ್ವ್ ಇದರಲ್ಲಿ ಮೊದಲ ಸಿಎನ್‌ಜಿ ಆಯ್ಕೆ ಪಡೆಯುವ ನಿರೀಕ್ಷೆಯಿದೆ. ನೆಕ್ಸಾನ್‌ನ ಟರ್ಬೊ - ಪೆಟ್ರೋಲ್ ಸಿಎನ್‌ಜಿ ಸಂರಚನೆಯನ್ನು ಅಳವಡಿಸಿಕೊಳ್ಳಬಹುದು, ಇದು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ವಿಶಿಷ್ಟವಾದ ಸೆಟಪ್ ಆಗಿದ್ದು, ಟರ್ಬೋಚಾರ್ಜ್ಡ್ ಎಂಜಿನ್ ನೊಂದಿಗೆ ಫ್ಯಾಕ್ಟರಿ ಸಿಎನ್‌ಜಿ ಆಯ್ಕೆಯನ್ನು ಒದಗಿಸುವ ಏಕೈಕ ಕಂಪನಿ ಟಾಟಾ ಆಗಿದೆ.
ಹೈಬ್ರಿಡ್ - ಪವರ್‌ಟ್ರೇನ್ ಯೋಜನೆಗಳು: ಹೈಬ್ರಿಡ್ ತಂತ್ರಜ್ಞಾನವು ಟಾಟಾದ ಹ್ಯಾರಿಯರ್, ಸಫಾರಿ ಮತ್ತು ಮುಂಬರುವ ಸಿಯೆರಾದಂತಹ ದೊಡ್ಡ ಎಸ್‌ಯುವಿಗಳಿಗೆ ಈ ತಂತ್ರಜ್ಞಾನವು ಸಕ್ರಿಯ ಪರಿಶೀಲನೆಯಲ್ಲಿದೆ. ಆದರೆ ಕಂಪನಿಯು ಸಿಎನ್‌ಜಿಗೆ ಹೋಲಿಸಿದರೆ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸಲು ಹೆಚ್ಚು ಎಚ್ಚರಿಕೆಯ ವಿಧಾನವನ್ನು ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಟಾಟಾ ಕಾರುಗಳಲ್ಲಿ ತಾಂತ್ರಿಕವಾಗಿ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳನ್ನು ಪರಿಚಯಿಸಲು ಸಿದ್ಧವಾಗಿದೆ. ದಕ್ಷತೆ, ಕಾರ್ಯಕ್ಷಮತೆ ಅಥವಾ ನಿಯಂತ್ರಕ ಅನುಸರಣೆಗಾಗಿ ಅಗತ್ಯವಿದ್ದರೆ ತ್ವರಿತವಾಗಿ ಪರಿಚಯಿಸಬಹುದು. ಯಾವುದೇ ಹೈಬ್ರಿಡ್ ಕಾರು ಬಿಡುಗಡೆಗಳು ಮೊದಲು ದೊಡ್ಡ ಮಾಡಲ್‌ಗಳ ಮೇಲೆ (ಹ್ಯಾರಿಯರ್, ಸಫಾರಿ, ಸಿಯೆರಾ) ಆಧರಿಸಿರುತ್ತವೆ, ಹೆಚ್ಚು ಮುಂದುವರಿದ ತಂತ್ರಜ್ಞಾನ ಅಳವಡಿಕೆಗಾಗಿ ತಮ್ಮ ವೇದಿಕೆಯನ್ನು ಬಳಸಿಕೊಳ್ಳುವುದಾಗಿ ಟಾಟಾ ತಿಳಿಸಿದೆ.
ಪ್ರಸ್ತುತ ಸಿಎನ್‌ಜಿ ಅಥವಾ ಹೈಬ್ರಿಡ್ - ನಿರ್ದಿಷ್ಟ ಬ್ಯಾಡ್ಜಿಂಗ್ ಹೊಂದಿರುವ ಟಾಟಾದ ದೊಡ್ಡ ಎಸ್‌ಯುವಿಗಳ ಅಧಿಕೃತ ಚಿತ್ರಗಳು ಇನ್ನೂ ಹೊರಬಂದಿಲ್ಲ, ಇವು ಇನ್ನೂ ಮೌಲ್ಯಮಾಪನ ಹಂತದಲ್ಲಿವೆ. ಟಾಟಾ ತನ್ನ ದೊಡ್ಡ SUV ಶ್ರೇಣಿಗಾಗಿ CNG ಮತ್ತು ಸಂಭಾವ್ಯವಾಗಿ ಹೈಬ್ರಿಡ್ ಪವರ್‌ಟ್ರೇನ್‌ಗಳಿಗೆ ವಿಸ್ತರಿಸುವುದು ಮುಂಬರುವ ವರ್ಷಗಳಲ್ಲಿ ಪರ್ಯಾಯ ಇಂಧನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಕಠಿಣ ಹೊರಸೂಸುವಿಕೆ ಮಾನದಂಡಗಳಿಂದ ಮಟ್ಟಿನಿಲ್ಲುವುದನ್ನು ಪ್ರತಿಬಿಂಬಿಸುತ್ತದೆ.


Click it and Unblock the Notifications








