Tata: 8 ಲಕ್ಷ ಬೆಲೆ... 24 ಕಿ.ಮೀ ಮೈಲೇಜ್... ಬಲಿಷ್ಠ ಟಾಟಾ ಕಾರಿಗೆ ಭಾರೀ ಡಿಮ್ಯಾಂಡ್!
ಭಾರತೀಯ ಕಾರು ಮಾರುಕಟ್ಟೆಯಲ್ಲಿ ಟಾಟಾ ಕಾರುಗಳಿಗೆ ಭಾರೀ ಬೇಡಿಕೆ ಇದೆ. ನಿರ್ಮಾಣ ಗುಣಮಟ್ಟ, ಆಕರ್ಷಕ ಡಿಸೈನ್, ಅತ್ಯಾಕರ್ಷಕ ಫೀಚರ್ಸ್‌ನೊಂದಿಗೆ ಟಾಟಾ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿವೆ. ಅದರಲ್ಲೂ ಟಾಟಾ ನೆಕ್ಸಾನ್ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ತನ್ನ ವಿಭಾಗದಲ್ಲಿಯೇ ಬೆಸ್ಟ್ ಕಾರಾಗಿ ಪ್ರತಿ ತಿಂಗಳ ಮಾರಾಟದಲ್ಲಿ ಸಾಭೀತುಪಡಿಸುತ್ತಿದೆ. ಟಾಟಾ ನೆಕ್ಸಾನ್ (Tata Nexon) ಈ ಬಾರಿಯೂ ಉತ್ತಮ ಮಾರಾಟ ಅಂಕಿಅಂಶಗಳನ್ನು ದಾಖಲು ಮಾಡಿದೆ. ಕೇವಲ ಫೆಬ್ರವರಿ ತಿಂಗಳಿನಲ್ಲೆ ಬರೋಬ್ಬರಿ 15 ಸಾವಿರ ಕಾರುಗಳ ಮಾರಾಟವನ್ನು ದಾಟಿದೆ.
ಹೌದು, ಫೆಬ್ರವರಿ 2025 ರಲ್ಲಿ ಟಾಟಾ ನೆಕ್ಸಾನ್‌ನ 15,349 ಯೂನಿಟ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಮಾರಾಟವಾದ ಕಾರುಗಳಿಗೆ ಹೋಲಿಸಿಕೊಂಡರೆ ಶೇ7 ರಷ್ಟು ಬೆಳವಣಿಗೆ ದಾಖಲಿಸಿದೆ. ಅಂದರೆ ಫೆಬ್ರವರಿ 2024 ರಲ್ಲಿ 14,395 ಯೂನಿಟ್ ಟಾಟಾ ನೆಕ್ಸಾನ್ ಕಾರುಗಳು ಮಾರಾಟವಾಗಿದ್ದವು. ಇದು ವರ್ಷದಿಂದ ವರ್ಷಕ್ಕೆ ಕಾರಿನ ಜನಪ್ರಿಯತೆ ಹೆಚ್ಚಾಗುವುದನ್ನು ಸೂಚಿಸುತ್ತದೆ.

ಟಾಟಾ ನೆಕ್ಸಾನ್ ವಿಶೇಷತೆಗಳು: ರೂ. 8.10 ಲಕ್ಷದಿಂದ ರೂ. 15.50 ಲಕ್ಷದವರೆಗೆ ಬೆಲೆ ಶ್ರೇಣಿಯನ್ನು ಹೊಂದಿರುವ ಈ ಕಾರು ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಖರೀದಿಗೆ ಲಭ್ಯವಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ತನ್ನ ಆಕರ್ಷಣೆಗೆ ಹೆಚ್ಚುವರಿಯಾಗಿ, ನೆಕ್ಸಾನ್ ಇವಿ ಭಾರತದ ಅತ್ಯುತ್ತಮ ಮಾರಾಟವಾಗುವ ಎಲೆಕ್ಟ್ರಿಕ್ ವಾಹನವಾಗಿಯೂ ಗುರ್ತಿಸಿಕೊಂಡಿದೆ.
ಗ್ರಾಹಕರಿಗೆ ಸಿಹಿ ಸುದ್ದಿಯೇನೆಂದರೆ ಈ ಕಾರಿನಲ್ಲಿ ಸಿಎನ್‌ಜಿ ಆಯ್ಕೆ ಕೂಡ ಇದ್ದು, ಇದರ ಬೆಲೆಯು ರೂ. 8.99 ಲಕ್ಷ (ಎಕ್ಸ್ ಶೋರೂಂ)ಗಳಿಂದ 14.59 ಲಕ್ಷ ರೂ. (ಎಕ್ಸ್ ಶೋರೂಂ)ಗಳವರೆಗೆ ಇದೆ. ಈ ಕಾರಿನ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್ ಇವೆ.

ಟಾಪ್ ಸ್ಪೆಕ್ ವೇರಿಯೆಂಟ್‌ಗಳು ಬ್ಲೈಂಡ್ ವ್ಯೂ ಮಾನಿಟರ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತವೆ. ಇತ್ತೀಚೆಗೆ ಈ ಕಾರು ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಕೂಡ ಗಳಿಸಿದೆ. ಸಣ್ಣ ಕುಟುಂಬಕ್ಕೆ ಇದು ಬೆಸ್ಟ್ ಕಾರಾಗಿದ್ದು, ಐದು ಮಂದಿ ಪ್ರಯಾಣಕ್ಕೆ ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ.
ಫೀಚರ್ಸ್ ಬಗ್ಗೆ ಹೇಳುವುದಾದ್ರೆ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್), ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ, , ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ (ಕ್ರಿಯೇಟಿವ್ +), ಕನೆಕ್ಟೆಡ್ ಕಾರ್ ಟೆಕ್ನಾಲಜಿಯನ್ನು ಹೊಂದಿದೆ.

ಕಂಪನಿಯ ಪ್ರಕಾರ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮ್ಯಾನುವಲ್‌ನಲ್ಲಿ 17.44 ಕಿ.ಮೀ ಮೈಲೇಜ್, ಆಟೋಮ್ಯಾಟಿಕ್‌ನಲ್ಲಿ 17.18 ಕಿ.ಮೀ ಮೈಲೇಜ್, ಸಿಎನ್‌ಜಿನಲ್ಲಿ ಕೆ.ಜಿಗೆ 24 ಕಿ.ಮೀ ಮೈಲೇಜ್ ನೀಡುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಮ್ಯಾನುವಲ್‌ನಲ್ಲಿ 23.23 ಕಿ.ಮೀ ಮೈಲೇಜ್, ಆಟೋಮ್ಯಾಟಿಕ್‌ನಲ್ಲಿ 24.08 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಆದ್ರೆ ನಿಜವಾದ ಮೈಲೇಜ್‌ನಲ್ಲಿ ಕಂಪನಿ ಹೇಳಿಕೊಂಡಿರುವುದಕ್ಕಿಂತ ಸುಮಾರು 4 ರಿಂದ 5 ಕಿ.ಮೀ ಕಡಿಮೆ ಇರಬಹುದು. ಭಾರತದಲ್ಲಿ ಸದ್ಯ ಮಧ್ಯಮ ವರ್ಗದ ಕುಟುಂಬಕ್ಕೆ ಫೆವರೆಟ್ ಆಗಿರುವ ಈ ಕಾರು, ಫೆಬ್ರವರಿ ತಿಂಗಳಲ್ಲಿ 15,349 ಯೂನಿಟ್‌ಗಳು ಮಾರಾಟವಾಗಿರುವುದು ಕಂಪನಿಗೆ ಉತ್ತಮ ಲಾಭವನ್ನು ತಂದುಕೊಟ್ಟಿದೆ. ನೆಕ್ಸಾನ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications