Tata: ಕರ್ನಾಟಕಕ್ಕೆ ರತನ್ ಟಾಟಾ ಕಂಪನಿಯ ಗೌರವ.. 'ಬಂಡೀಪುರ' ಹೆಸರಿನಲ್ಲಿ 3 ಹೊಸ ಕಾರುಗಳು, ಶೀಘ್ರ ಬಿಡುಗಡೆ!

ದಿವಂಗತ ರತನ್ ಟಾಟಾ (Ratan Tata) ಮಾಲೀಕತ್ವದ ಟಾಟಾ ಮೋಟಾರ್ಸ್ (Tata Motors), ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ನವದೆಹಲಿಯಲ್ಲಿ ಅದ್ದೂರಿಯಾಗಿ ಆಯೋಜಿಸಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ಸಿಯೆರಾ ಮತ್ತು ಹ್ಯಾರಿಯರ್ ಇವಿ ಸೇರಿದಂತೆ ವಿವಿಧ ಕಾರುಗಳನ್ನು ಅನಾವರಣಗೊಳಿಸಿದೆ. ಸದ್ಯ ಟಾಟಾ, ಕರ್ನಾಟಕಕ್ಕೆ ಗೌರವ ಸಲ್ಲಿಸಲು ಮುಂದಾಗಿದೆ. 3 ಹೊಸ ಕಾರುಗಳಿಗೆ ರಾಜ್ಯದಲ್ಲಿರುವ ರಾಷ್ಟ್ರೀಯ ಉದ್ಯಾನದ ಹೆಸರನ್ನು ಇಡಲು ತೀರ್ಮಾನ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟಾಟಾ ಮೋಟಾರ್ಸ್, ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ನೆಕ್ಸಾನ್ (Nexon), ಹ್ಯಾರಿಯರ್ (Harrier) ಮತ್ತು ಸಫಾರಿ (Safari) ಕಾರುಗಳ ಬಂಡೀಪುರ ಎಡಿಷನ್ (Bandipur Edition) ಮಾಡೆಲ್‌ನ್ನು ಅನಾವರಣ ಮಾಡಿದೆ. 'ಸ್ಪೆಷಲ್ ಎಡಿಷನ್'ಗೆ ರಾಜ್ಯದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗೌರವಾರ್ಥ ಈ ಹೆಸರನ್ನು ನಾಮಕರಣ ಮಾಡಿದೆ.

Tata Nexon Safari Harrier Suv Bandipur Edition Unveiled At Auto Expo Details

ನೂತನ ಬಂಡೀಪುರ ಎಡಿಷನ್ ಮಾಡೆಲ್‌ಗಳು ವಿನ್ಯಾಸದಲ್ಲಿ ಒಂದಷ್ಟು ಸಣ್ಣ-ಪುಟ್ಟ ಬದಲಾವಣೆಯನ್ನು ಪಡೆದಿವೆ. ಡುಯಲ್-ಟೋನ್ ಕಲರ್ ಆಯ್ಕೆಯನ್ನು ಹೊಂದಿವೆ. ಮುಂಭಾಗದ ಫೆಂಡರ್‌ನಲ್ಲಿ ಆನೆಯ ಬ್ಯಾಡ್ಜ್‌ಗಳನ್ನು ಒಳಗೊಂಡಿವೆ. ಒಳಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಪಡೆದಿವೆ. ಹಾಗೆಯೇ ಇವುಗಳ ಪವರ್‌ಟ್ರೇನ್‌ನಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ.

ಸದ್ಯಕ್ಕೆ ನೂತನ ಕಾರುಗಳ ಬೆಲೆ ಹಾಗೂ ಬಿಡುಗಡೆ ದಿನಾಂಕದ ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸಾಮಾನ್ಯ ಟಾಟಾ ನೆಕ್ಸಾನ್ ಎಸ್‌ಯುವಿ, ರೂ.8 ಲಕ್ಷದಿಂದ ರೂ.15.60 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ.

Tata Nexon Safari Harrier Suv Bandipur Edition Unveiled At Auto Expo Details

ಟಾಟಾ ನೆಕ್ಸಾನ್ ಇವಿ ಬಗ್ಗೆ ಹೇಳುವುದಾದರೆ, ಇದು ರೂ.12.49 ಲಕ್ಷದಿಂದ ರೂ.17.19 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. 30 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 46.08 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 390 ರಿಂದ 489 ಕಿಲೋಮೀಟರ್‌ವರೆಗೂ ಓಡುತ್ತದೆ. ಇದರಲ್ಲಿ 5 ಮಂದಿ ಓಡಾಟ ನಡೆಸಬಹುದು.

ಟಾಟಾ ಹ್ಯಾರಿಯರ್ ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಈ ಕಾರು ರೂ.15 ಲಕ್ಷದಿಂದ ರೂ.25.89 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 14.60 ರಿಂದ 16.80 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Tata Nexon Safari Harrier Suv Bandipur Edition Unveiled At Auto Expo Details

ಕಡೆಯದಾಗಿ ಟಾಟಾ ಸಫಾರಿ ಎಸ್‌ಯುವಿ ಕುರಿತಂತೆ ಮಾತನಾಡುವುದಾದರೆ, ಇದು ರೂ.15.50 ಲಕ್ಷದಿಂದ ರೂ.27 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2-ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 6 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ . 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಒಳಗೊಂಡನಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 18, 2025, 19:00 [IST]
English summary
Tata nexon safari harrier suv bandipur edition unveiled at auto expo details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+