24 ಕಿ.ಮೀ ಮೈಲೇಜ್.. 8 ಲಕ್ಷ, 5-ಸೀಟರ್.. ಈ ಜನಪ್ರಿಯ 'Tata Suv'ಗೆ ಮನಸೋತ ಗ್ರಾಹಕರು!
ಟಾಟಾ ನೆಕ್ಸಾನ್ (Tata Nexon) ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಈ ಕಾರು ಹೆಚ್ಚು ಆಕರ್ಷಕವಾದ ವಿನ್ಯಾಸ & ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಖರೀದಿದಾರರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ ಏಪ್ರಿಲ್ ತಿಂಗಳಲ್ಲೂ ಇದೇ 'ನೆಕ್ಸಾನ್' ಎಸ್‌ಯುವಿ ಭಾರೀ ಪ್ರಮಾಣದಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಳೆದ ತಿಂಗಳು (ಏಪ್ರಿಲ್-2025) ಟಾಟಾ ಕಂಪನಿಯು ಸರಿ ಸುಮಾರು 15,457 ಯುನಿಟ್ ನೆಕ್ಸಾನ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಮಾರಾಟವಾದ ಪ್ರಮುಖ 10 ಕಾರುಗಳ ಪಟ್ಟಿಯಲ್ಲಿ 'ನೆಕ್ಸಾನ್' ಎಸ್‌ಯುವಿಯು 6ನೇ ಸ್ಥಾನದಲ್ಲಿದೆ.

ಇದೇ ವರ್ಷದ ಮೊದಲು 3 ತಿಂಗಳು ಸಹ 'ಟಾಟಾ ನೆಕ್ಸಾನ್' ಕಾರು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಮಾರ್ಚ್‌ನಲ್ಲಿ 16,366 ಯುನಿಟ್, ಫೆಬ್ರವರಿಯಲ್ಲಿ 15,349 ಯುನಿಟ್ ಹಾಗೂ ಜನವರಿ ತಿಂಗಳಲ್ಲಿ 15,397 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹಾಗೆಯೇ 2024ರ ನವೆಂಬರ್‌ನಲ್ಲಿ 13,536 ಯುನಿಟ್ ಮತ್ತು ಡಿಸೆಂಬರ್‌ನಲ್ಲಿ 15,329 ಯುನಿಟ್‌ಗಳನ್ನು ಮಾರಲಾಗಿದೆ.
ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ತಿಂಗಳಿಗೆ ಸರಾಸರಿ 15,000 ಯುನಿಟ್ ನೆಕ್ಸಾನ್ ಎಸ್‌ಯುವಿಗಳನ್ನು ಮಾರಾಟ ಮಾಡುವಲ್ಲಿ ಟಾಟಾ ಕಂಪನಿಯು ಸಫಲತೆಯನ್ನು ಕಂಡಿದೆ. ನೆಕ್ಸಾನ್ ಕಾರು ಬಜೆಟ್ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.. ಜೊತೆಗೆ ಸಾಕಷ್ಟು ಅತ್ಯಾಧುನಿಕವಾಗಿದ್ದು, ಮಧ್ಯಮ ವರ್ಗದ ಜನರ ಕುಟುಂಬದ ಆಯ್ಕೆಯ ವಾಹನವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಟಾಟಾ ನೆಕ್ಸಾನ್ ವಿಶೇಷತೆಗಳೇನು..
ಈ ಕಾರು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ರೂ.8 ಲಕ್ಷದಿಂದ ರೂ.16 ಲಕ್ಷವರೆಗೆ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೊರಭಾಗದಲ್ಲಿ ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ಪ್ರಿಸ್ಟೈನ್ ವೈಟ್, ಡೇಟೋನಾ ಗ್ರೇ, ಗ್ರಾಸ್‌ಲ್ಯಾಂಡ್ ಬೀಜ್, ಪ್ಯೂರ್ ಗ್ರೇ ಮತ್ತು ಓಷನ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ ನೆಕ್ಸಾನ್ ಎಸ್‌ಯುವಿಯು ಬೆಲೆಗೆ ತಕ್ಕಂತೆ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 1.2-ಲೀ. ಟರ್ಬೊ ಪೆಟ್ರೋಲ್, 1.5-ಲೀ. ಡೀಸೆಲ್ & 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 17.01 ರಿಂದ 24 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ.
ಟಾಟಾ ನೆಕ್ಸಾನ್ ಇವಿಯೂ ಖರೀದಿಗೆ ಲಭ್ಯ: ಈ ಕಾರು ರೂ.13 ಲಕ್ಷದಿಂದ ರೂ.17 ಲಕ್ಷ (ಎಕ್ಸ್-ಶೋರೂಂ) ಬೆಲೆವನ್ನು ಹೊಂದಿದೆ. 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 46.08 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 275 ರಿಂದ 489 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications