ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು! 24 ಕಿ.ಮೀ ಮೈಲೇಜ್.. 8 ಲಕ್ಷ, ಈ ಟಾಟಾ ಕಾರಿಗೆ ಫುಲ್ ಡಿಮ್ಯಾಂಡ್
ಟಾಟಾ ನೆಕ್ಸಾನ್ (Tata Nexon) ಜನಮೆಚ್ಚಿದ ಕಾರೆಂದು ಹೆಸರುವಾಸಿಯಾಗಿದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಆಗಸ್ಟ್ ತಿಂಗಳು 'ನೆಕ್ಸಾನ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 14,004 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 12,289 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 14% ಪ್ರಗತಿಯಾಗಿದೆ.
ಸ್ಟ್ಯಾಂಡರ್ಡ್ ಟಾಟಾ ನೆಕ್ಸಾನ್ ವಿಶೇಷತೆಗಳೇನು:
ಸದ್ಯ ಈ ಎಸ್‌ಯುವಿಯು ರೂ.8 ಲಕ್ಷದಿಂದ ರೂ.15.60 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಕೇಂದ್ರ ಸರ್ಕಾರವು ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಪರಿಷ್ಕರಿಸಿದೆ. ಅದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಟಾಟಾ ಮೋಟಾರ್ಸ್ ತೀರ್ಮಾನಿಸಿದೆ. ಹೀಗಾಗಿ 'ನೆಕ್ಸಾನ್' ಬೆಲೆಯೂ ರೂ. 1.55 ಲಕ್ಷವರೆಗೆ ಕಡಿಮೆಯಾಗಿದೆ. ನೂತನ ದರಗಳು ಸೆಪ್ಟೆಂಬರ್ 22 ರಿಂದ ಅನ್ವಯವಾಗಲಿದೆ.

ಇದು ಸ್ಮಾರ್ಟ್, ಪ್ಯೂರ್ ಪ್ಲಸ್, ಪ್ಯೂರ್ ಪ್ಲಸ್ ಎಸ್, ಕ್ರಿಯೇಟಿವ್, ಕ್ರಿಯೇಟಿವ್ ಪ್ಲಸ್ ಮತ್ತು ಫಿಯರ್‌ಲೆಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ನೋಡಲು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಪಡೆದಿದೆ. ಪ್ಯೂರ್ ಗ್ರೇ, ಡೇಟೋನಾ ಗ್ರೇ, ಪ್ರಿಸ್ಟೈನ್ ವೈಟ್, ಕಾರ್ಬನ್ ಬ್ಲ್ಯಾಕ್, ಗ್ರಾಸ್‌ಲ್ಯಾಂಡ್ ಬೀಜ್, ರಾಯಲ್ ಬ್ಲೂ ಹಾಗೂ ಓಷನ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ 'ನೆಕ್ಸಾನ್' ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಹೊಂದಿದೆ. 17 ರಿಂದ 24 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 44 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.

ಈ ಎಸ್‌ಯುವಿಯು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 382 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು 9 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.
ಟಾಟಾ ನೆಕ್ಸಾನ್ ಇವಿಯೂ ಸಿಗುತ್ತದೆ:
ಇದು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ಕನಿಷ್ಠ ರೂ.12.49 ಲಕ್ಷ ಹಾಗೂ ಗರಿಷ್ಠ ರೂ.17.19 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 30 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 45 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 489 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಈ ಕಾರು ಉತ್ತಮವಾಗಿರುವ ವಿನ್ಯಾಸವನ್ನು ಪಡೆದಿದೆ. ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಫ್ಲೇಮ್ ರೆಡ್, ಡೇಟೋನಾ ಗ್ರೇ, ಫಿಯರ್‌ಲೆಸ್ ಪರ್ಪಲ್, ಇಂಟೆನ್ಸಿ ಟೀಲ್, ಕ್ರಿಯೇಟಿವ್ ಓಷನ್ ಹಾಗೂ ಕಾರ್ಬನ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮಾಯಕವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 350 ಲೀಟರ್‌ನಷ್ಟು ಬೂಟ್ ಸ್ಪೇನ್‌ನ್ನು ಒಳಗೊಂಡಿದೆ.
ಹೊಸ ನೆಕ್ಸಾನ್ ಇವಿಯು 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360 ಡಿಗ್ರಿ ಕ್ಯಾಮೆರಾನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








