ಜಿಎಸ್‌ಟಿ ಕಡಿತದ ಬಳಿಕ Tata ಬಿಗ್ ಗಿಫ್ಟ್.. ಕಾರುಗಳ ಬೆಲೆ ರೂ.65,000 ರಿಂದ ರೂ.1.45 ಲಕ್ಷವರೆಗೆ ಇಳಿಕೆ, ಯಾವುದಕ್ಕೆ ಎಷ್ಟು?

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಕಾರುಗಳ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಶುಕ್ರವಾರ ಕಂಪನಿಯು ಅಧಿಕೃತವಾಗಿ ಘೋಷಣೆ ಮಾಡಿದೆ. ಇದು ಸೆಪ್ಟೆಂಬರ್ 22 ರಿಂದ ಅನ್ವಯವಾಗಲಿದೆ. ಅಂದರೆ ಜಿಎಸ್‌ಟಿ ಪರಿಷ್ಕೃತ ದರಗಳು ಜಾರಿಗೆ ಬರುವ ದಿನದಿಂದಲೇ ಮಾನ್ಯವಾಗಲಿದೆ.

ಟಾಟಾದ ಬಹುತೇಕ ಎಲ್ಲ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳು ಜಿಎಸ್‌ಟಿ ಕಡಿತದ ಪ್ರಯೋಜನವನ್ನು ಪಡೆಯಲಿವೆ. ಬಹುಮುಖ್ಯವಾಗಿ ಮಧ್ಯಮ ಹಾಗೂ ಶ್ರೀಮಂತ ವರ್ಗದವರ ನೆಚ್ಚಿನ ಟಿಯಾಗೊ, ಟಿಗೊರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಕರ್ವ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳ ಬೆಲೆಯು ಭಾರೀ ಇಳಿಕೆಯಾಗಿದೆ.

Tata Price Cut Tiago Tigor Altroz Punch nexon Curvv Harrier Safari Details

ಯಾವುದಕ್ಕೆ ಎಷ್ಟು:

ಟಿಯಾಗೊ - ರೂ.75,000
ಟಿಗೊರ್ - ರೂ.80,000
ಆಲ್ಟ್ರೋಜ್ - ರೂ.1.10 ಲಕ್ಷ
ಪಂಚ್ - ರೂ.85,000
ನೆಕ್ಸಾನ್ - ರೂ. 1.55 ಲಕ್ಷ
ಕರ್ವ್ - ರೂ.65,000
ಹ್ಯಾರಿಯರ್ - ರೂ.1.40 ಲಕ್ಷ
ಸಫಾರಿ - ರೂ.1.45 ಲಕ್ಷ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಶೈಲೇಶ್ ಚಂದ್ರ ಅವರು, 'ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸಲಾಗುವುದು. ಇದರಿಂದ ಮೊದಲ ಬಾರಿಗೆ ಕಾರು ಖರೀದಿ ಮಾಡಬೇಕೆಂದಿರುವ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ' ಎಂದು ಹೇಳಿದ್ದಾರೆ.

Tata Price Cut Tiago Tigor Altroz Punch nexon Curvv Harrier Safari Details

ಇದೇ ಬುಧವಾರ ನಡೆದ ಸರಕು ಮತ್ತು ಸೇವಾ ತೆರಿಗೆ (GST) ಸಮಿತಿ ಸಭೆ ನಂತರ, ಕೇಂದ್ರ ಸರ್ಕಾರ ಕಾರು, ಟ್ರ್ಯಾಕ್ಟರ್ ಹಾಗೂ ಬೈಕ್‌ಗಳ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ಇಳಿಸಿದೆ. 1200 ಸಿಸಿ ವರೆಗಿನ ಪೆಟ್ರೋಲ್, ಸಿಎನ್‌ಜಿ ಹಾಗೂ 1500 ಸಿಸಿ ವರೆಗಿನ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳ ಮೇಲಿನ ಜಿಎಸ್‌ಟಿ ಶೇಕಡ 28% ರಿಂದ 18%ಗೆ ಕಡಿಮೆಯಾಗಿದೆ.

ಐಷಾರಾಮಿ ಸೆಡಾನ್‌ಗಳು, ಎಸ್‌ಯುವಿಗಳು ಮತ್ತು ಎಂಪಿವಿಗಳಿಗೆ ವಿಶೇಷವಾಗಿ ಯಾವುದೇ ಸೆಸ್ ಇಲ್ಲದೆ ಶೇಕಡ 40% ಜಿಎಸ್‌ಟಿ ವಿಧಿಸಲು ತೀರ್ಮಾನಿಸಿದೆ. ಪ್ರಸ್ತುತ ಜಿಎಸ್‌ಟಿ ಮತ್ತು ಸೆಸ್ ಸೇರಿ ಒಟ್ಟು ತೆರೆಗೆ ಶೇಕಡ 45 ರಿಂದ 50% ಇದೆ. ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿ ಮೇಲೆ ಹಾಕುತಿದ್ದ ಜಿಎಸ್‌ಟಿ ಪ್ರಮಾಣವನ್ನು ಯಥಾಸ್ಥಿತಿಯಲ್ಲಿ ಇಡಲಾಗಿದ್ದು, ಶೇಕಡ 5% ಮದುವರಿಯಲಿದೆ.

Tata Price Cut Tiago Tigor Altroz Punch nexon Curvv Harrier Safari Details

ಅದೇ ರೀತಿಯಲ್ಲಿ 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವಿರುವ ಸಾಮಾನ್ಯ ದ್ವಿಚಕ್ರ ವಾಹನಗಳ (ಸ್ಕೂಟರ್ ಮತ್ತು ಬೈಕ್‌ಗಳು) ಖರೀದಿ ಮೇಲೆ ಶೇಕಡ 28% ರಿಂದ 18%ಗೆ ಜಿಎಸ್‌ಟಿ ಪ್ರಮಾಣವನ್ನು ಇಳಿಸಲಾಗಿದೆ. 350 ಸಿಸಿಗಿಂತ ಹೆಚ್ಚು ಮತ್ತು ಐಷಾರಾಮಿ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ಶೇಕಡ 40% ಹೆಚ್ಚಳಗೊಂಡಿದೆ.

ಸದ್ಯದ ಟಾಟಾ ಕಾರುಗಳ ಎಕ್ಸ್-ಶೋರೂಂ ಬೆಲೆ ವಿವರಗಳು:

ಟಿಯಾಗೊ ರೂ.5 ಲಕ್ಷದಿಂದ ರೂ.8.55 ಲಕ್ಷ, ಟಿಗೊರ್ ರೂ.6 ಲಕ್ಷದಿಂದ ರೂ.9.55 ಲಕ್ಷ, ಆಲ್ಟ್ರೋಜ್ ರೂ.6.89 ಲಕ್ಷದಿಂದ ರೂ.11.49 ಲಕ್ಷ, ಪಂಚ್ ರೂ.6.20 ಲಕ್ಷದಿಂದ 10.32 ಲಕ್ಷ, ನೆಕ್ಸಾನ್ ರೂ.8 ಲಕ್ಷದಿಂದ ರೂ.15.60 ಲಕ್ಷ, ಕರ್ವ್ ರೂ.10 ಲಕ್ಷದಿಂದ ರೂ.19.52 ಲಕ್ಷ, ಹ್ಯಾರಿಯರ್ ರೂ.15 ಲಕ್ಷದಿಂದ ರೂ.26.69 ಲಕ್ಷ ಹಾಗೂ ಸಫಾರಿ ರೂ.15.50 ಲಕ್ಷದಿಂದ ರೂ.27.44 ಲಕ್ಷ ದರವನ್ನು ಪಡೆದಿದೆ.

ಒಟ್ಟಾರೆಯಾಗಿ, ಜಿಎಸ್‌ಟಿ ಕಡಿತದ ಬಳಿಕ ಟಾಟಾ ಕಂಪನಿಯು ಕಾರುಗಳ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಇದರಿಂದ ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಬೇಕೆಂಬುವವರ ಕನಸು ಕೂಡ ಸುಲಭವಾಗಿ ನನಸಾಗಲಿದೆ.

Article Published On: Saturday, September 6, 2025, 8:35 [IST]
English summary
Tata price cut tiago tigor altroz punch nexon curvv harrier safari details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+