ಮಾರಾಟದಲ್ಲಿ ಹೊಸ ಮೈಲಿಗಲ್ಲು: ರತನ್‌ ಟಾಟಾ ರೀತಿಯಲ್ಲೇ ಜನಮೆಚ್ಚಿದ ಈ ಟಾಟಾ ಕಾರು

ಟಾಟಾ ಪಂಚ್ 2024ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಕಾರ್ ಆಗಿದೆ. ಇದು ಮಾರುತಿ ಸುಜುಕಿಯ ನಾಲ್ಕು ದಶಕಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು. ಪಂಚ್ ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕರ ಎಂಟ್ರಿ ಲೆವೆಲ್ ಎಸ್‍ಯುವಿ ಆಗಿದೆ. 2021ರ ಟಾಟಾ ಪಂಚ್ ಮೈಕ್ರೋ ಎಸ್‍ಯುವಿ ಬಿಡುಗಡೆ ಮಾಡಿತು. ಹ್ಯಾಚ್‌ಬ್ಯಾಕ್ ಬೆಲೆಯಲ್ಲಿ ಅತ್ಯುತ್ತಮ ಸುರಕ್ಷತೆ ಮತ್ತು ಬೆರಳೆಣಿಕೆಯ ವೈಶಿಷ್ಟ್ಯಗಳೊಂದಿಗೆ ಬಂದ ಈ ಕಾರು ಭಾರತೀಯರ ಗಮನ ಸೆಳೆಯಿತು. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ಆದ ನಂತರ, ಪಂಚ್ ಈಗ ಹೊಸ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ.

ಟಾಟಾ ಪಂಚ್ ಮಾರುಕಟ್ಟೆಗೆ ಪ್ರವೇಶಿಸಿದ 38 ತಿಂಗಳೊಳಗೆ 5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಮೈಲಿಗಲ್ಲನ್ನು ದಾಟಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಾರ್ ಸಾಧಿಸಿರುವ ಅಗಾಧ ಬೆಳವಣಿಗೆಯನ್ನು ಸೂಚಿಸುತ್ತದೆ. ಕಳೆದ ಕ್ಯಾಲೆಂಡರ್ ವರ್ಷವೊಂದರಲ್ಲೇ ಟಾಟಾ 2.02 ಲಕ್ಷ ಪಂಚ್ ಕಾರುಗಳನ್ನು ಮಾರಾಟ ಮಾಡಿದೆ. ಇನ್ನು 2024ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 1.48 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

Tata Punch

ಟಾಟಾ ಇದುವರೆಗೆ 5,04,447 ಪಂಚ್‌ಗಳನ್ನು ಮಾರಾಟ ಮಾಡಿದೆ. ಬಿಡುಗಡೆಯಾದ ಕೇವಲ 10 ತಿಂಗಳಲ್ಲೇ ಪಂಚ್ 1 ಲಕ್ಷ ಯೂನಿಟ್ ಮಾರಾಟದ ಮೈಲಿಗಲ್ಲನ್ನು ದಾಟಿತ್ತು. 2 ಲಕ್ಷ ಯೂನಿಟ್ ತಲುಪಲು ಕೇವಲ 20 ತಿಂಗಳು ಮತ್ತು 3 ಲಕ್ಷ ಯೂನಿಟ್ ತಲುಪಲು 28 ತಿಂಗಳು ಬೇಕಾಯಿತು. ಇದು ಕಳೆದ ವರ್ಷ ಜೂನ್‌ನಲ್ಲಿ 4 ಲಕ್ಷ ಯೂನಿಟ್ ಗಡಿಯನ್ನು ತಲುಪಿತ್ತು. ಕೇವಲ 6 ತಿಂಗಳಲ್ಲಿ 4 ಲಕ್ಷದಿಂದ 5 ಲಕ್ಷಕ್ಕೆ ತಲುಪಿದೆ.

ಗರಿಷ್ಟ ಗುಣಮಟ್ಟದ ಕಾರುಗಳ ನಿರ್ಮಾಣ ಕಂಪನಿಯಾಗಿ ಜನಪ್ರಿಯತೆ ಗಳಿಸಿರುವ ಟಾಟಾ ಮೋಟಾರ್ಸ್ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ತನ್ನ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಗಳು ಹೆಚ್ಚಾಗಿರುವ ಕಾರಣ 2024ರ ನವೀಕೃತ ಪಂಚ್ (Tata Punch Facelift) ಎಸ್‌ಯುವಿಯನ್ನು ಪರಿಚಯಿಸಿದೆ. ಇತ್ತೀಚೆಗೆ ಮೈಕ್ರೋ ಎಸ್‌ಯುವಿ ಸೆಗ್ಮೆಂಟಿನಲ್ಲಿ ಸಿಟ್ರನ್ ಸಿ3 ಮತ್ತು ಹ್ಯುಂಡೈ ಎಕ್ಸ್‌ಟರ್ ಕಾರುಗಳು ಸುಧಾರಿತ ಫೀಚರ್‌ಗಳೊಂದಿಗೆ ಪೈಪೋಟಿ ನೀಡುತ್ತಿವೆ.

Tata Punch

ಅಲ್ಲದೇ ಪಂಚ್ ಕೂಡ ನವೀಕರಣಗೊಂಡು ಸುಧೀರ್ಘ ಸಮಯವಾದ್ದರಿಂದ ಟಾಟಾ ಪಂಚ್‌ಗೆ ಅಪ್‌ಡೇಟ್‌ಗಳನ್ನು ನೀಡಿ ಬಿಡುಗಡೆ ಮಾಡಲಾಗಿದೆ. ಮೊದಲಿನಿಂದಲು ಟಾಟಾ ಪಂಚ್ ತನ್ನ ವಿಭಾಗದಲ್ಲಿ ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಉತ್ತಮ ನಿರ್ಮಾಣ ಗುಣಮಟ್ಟ, ಯೋಗ್ಯ ವೈಶಿಷ್ಟ್ಯಗಳು, ಕಡಿಮೆ ಬೆಲೆ ಸೇರಿದಂತೆ ತನ್ನ ಘಾತ್ರಕ್ಕೆ ತಕ್ಕಂತೆ ಎಂಜಿನ್‌ ಪವರ್‌ನೊಂದಿಗೆ ಗ್ರಾಹಕರ ಮೆಚ್ಚುಗೆ ಪಡೆದಿದೆ. ಹಾಗಾದ್ರೆ 2024ರ ನವೀಕೃತ ಟಾಟಾ ಪಂಚ್ ಎಸ್‌ಯುವಿ ಮಧ್ಯಮ ವರ್ಗದ ಜನರಿಗೆ ಉತ್ತಮ ಆಯ್ಕೆಯಾಗಿದೆ.

ಸಿಫೀಚರ್ ಸೆಟ್‌ನಿಂದ ಪ್ರಾರಂಭಿಸಿ, 2024ರ ಪಂಚ್ ಈಗ ಸೆಂಟರ್ ಕನ್ಸೋಲ್‌ನಲ್ಲಿ USB ಟೈಪ್-ಸಿ ಚಾರ್ಜಿಂಗ್ ಪೋರ್ಟ್, ವೈರ್‌ಲೆಸ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಹಿಂಭಾಗದಲ್ಲಿ ಎಸಿ ವೆಂಟ್‌ಗಳನ್ನು ಹೊಂದಿದೆ. ಇದರೊಂದಿಗೆ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಹೊಸ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಮುಂಭಾಗದಲ್ಲಿ ಆರ್ಮ್ ರೆಸ್ಟ್ ನೀಡಲಾಗಿದೆ.

Tata Punch

ಇನ್ನು ಟಾಟಾ ಪಂಚ್ ಪ್ಯೂರ್, ಪ್ಯೂರ್ (O), ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಡ್ವೆಂಚರ್ S, ಅಡ್ವೆಂಚರ್ ಪ್ಲಸ್ ಎಸ್, ಅಕಾಂಪ್ಲಿಶ್ಡ್ ಪ್ಲಸ್, ಅಕಾಂಪ್ಲಿಶ್ಡ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್, ಕ್ರಿಯೇಟಿವ್ ಪ್ಲಸ್ ಎಸ್ ಎಂಬ ವೇರಿಯೆಂಟ್‌ಗಳನ್ನು ಒಳಗೊಂಡಿದೆ. ಟಾಟಾ ಪಂಚ್ ಕಾರಿನಲ್ಲಿ 1.2 - ಲೀಟರ್, ಮೂರು ಸಿಲಿಂಡರ್, NA ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ. ಒಟ್ಟು ಏಳು ಆವೃತ್ತಿಗಳಲ್ಲಿ ನೀಡಲಾಗುವ ಸಿಎನ್‌ಜಿ ಟ್ರಿಮ್ ಕೂಡ ಆಫರ್ ನಲ್ಲಿದೆ. ಟಾಟಾ ಪಂಚ್ ಫೇಸ್‌ಲಿಫ್ಟ್ ಕಾರು ಹಳೆಯ ಪಂಚ್‌ನಂತೆ ಅದೇ 87 ಬಿಹೆಚ್‍ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದೆಡೆ ಹಳೆಯ ಪಂಚ್ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Article Published On: Wednesday, January 15, 2025, 17:23 [IST]
English summary
Tata punch 5 lakh unit sales milestone details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+