ಮಾರುತಿ ಸುಜುಕಿಯ ಸುದೀರ್ಘ 40 ವರ್ಷಗಳ ದಾಖಲೆ ಉಡೀಸ್.. ನಂಬರ್ 1 ಸ್ಥಾನಕ್ಕೇರಿದ ಟಾಟಾ ಕಾರು!

ಮಾರುತಿ ಸುಜುಕಿ ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಪ್ರಮುಖ 5 ಕಾರುಗಳ ಪಟ್ಟಿಯಲ್ಲಿ ಕಂಪನಿಯ ಯಾವುದಾದರೊಂದು ಕಾರು ಪ್ರಥಮ ಸ್ಥಾನದಲ್ಲಿ ಇದ್ದೇ ಇರುತ್ತದೆ. ಆದರೆ, '2024'ರಲ್ಲಿ ಈ ಮಾರುತಿ ಸುಜುಕಿ ಸೇರಿದಂತೆ ಎಲ್ಲ ಕಂಪನಿ ಕಾರುಗಳನ್ನು ಹಿಂದಿಕ್ಕಿ, ಟಾಟಾದ ಜನಪ್ರಿಯ 'ಪಂಚ್' ಎಸ್‌ಯುವಿ ನಂಬರ್ 1 ಸ್ಥಾನಕ್ಕೆ ಬಂದಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡಿದ್ದಾರೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿವನ್ನು ತಿಳಿಯೋಣ.

ಕಳೆದ ವರ್ಷ (2024) ಟಾಟಾ ಪಂಚ್ (Tata Punch) ಮೈಕ್ರೋ ಎಸ್‌ಯುವಿ ದೊಡ್ಡ ಸಂಖ್ಯೆಯಲ್ಲಿ ಮಾರಲ್ಪಟ್ಟ ಕಾರಾಗಿ ಹೊರಹೊಮ್ಮಿದೆ. ಈ ಮೂಲಕ ಮೊದಲ ಸ್ಥಾನಕ್ಕೂ ಬಂದಿದೆ. ಸರಿ ಸುಮಾರು 2,02,030 ಯುನಿಟ್ ಪಂಚ್ ಕಾರುಗಳು ಮಾರಾಟವಾಗಿವೆ. ಇದರೊಂದಿಗೆ ಮಾರುತಿ ಸುಜುಕಿಯ ಸುದೀರ್ಘ 40 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿಸಿದೆ.

Tata Punch Become Number 1 Overtake Maruti Suzuki Company 40 Years Record

ಆದರೂ ಎರಡರಿಂದ ನಾಲ್ಕನೇ ಸ್ಥಾನದಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿ ಕಾರುಗಳೇ ಇವೆ. 2ನೇ ಸ್ಥಾನದಲ್ಲಿ 190,091 ಯುನಿಟ್‌ಗಳೊಂದಿಗೆ ವ್ಯಾಗನ್ಆರ್ (WagonR) ಹ್ಯಾಚ್‌ಬ್ಯಾಕ್, 3ನೇ ಸ್ಥಾನದಲ್ಲಿ 190, 091 ಯುನಿಟ್‌ಗಳೊಂದಿಗೆ ಎರ್ಟಿಗಾ (Ertiga) ಎಂಪಿವಿ ಮತ್ತು 1,88,160 ಯುನಿಟ್‌ಗಳೊಂದಿಗೆ 4ನೇ ಸ್ಥಾನದಲ್ಲಿ ಬ್ರೆಜಾ (Brezza) ಎಸ್‌ಯುವಿ ಇದೆ. ಜೊತೆಗೆ 5ನೇ ಸ್ಥಾನವನ್ನು 186,919 ಯುನಿಟ್‌ಗಳೊಂದಿಗೆ ಹ್ಯುಂಡೈ ಕ್ರೆಟಾ (Hyundai Creta) ತನ್ನದಾಗಿಸಿಕೊಂಡಿದೆ.

ಟಾಟಾ ಪಂಚ್ ವಿಶೇಷತೆಗಳೇನು: ಈ ಕಾರು, ಕನಿಷ್ಠ ರೂ.6.13 ಲಕ್ಷ ಮತ್ತು ಗರಿಷ್ಠ ರೂ.10.15 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 18.8 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Tata Punch Become Number 1 Overtake Maruti Suzuki Company 40 Years Record

ಈ ಪಂಚ್ ಎಸ್‌ಯುವಿಯಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 4-ಸ್ಪೀಕರ್‌ಗಳು, ಸನ್‌ರೂಫ್‌ ಮತ್ತು ರೇರ್ ಎಸಿ ವೆಂಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಏರ್‌ಬ್ಯಾಗ್‌ಗಳು ಮತ್ತು ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಹೊಂದಿದೆ.

ಟಾಟಾ ಪಂಚ್ ಇವಿಯೂ ಲಭ್ಯ: ಇದೊಂದು ಎಲೆಕ್ಟ್ರಿಕ್ ಕಾರು ಆಗಿದ್ದು, ರೂ.9.99 ಲಕ್ಷದಿಂದ ರೂ.14.29 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು 25 ಮತ್ತು 35 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 265 ರಿಂದ 365 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.

Tata Punch Become Number 1 Overtake Maruti Suzuki Company 40 Years Record

ಇದರಲ್ಲಿಯೂ 5 ಮಂದಿ ಪ್ರಯಾಣ ಮಾಡಬಹುದು. ಇನ್ಫೋಟೈನ್‌ಮೆಂಟ್ & ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಡಿಸ್ಪ್ಲೇಗಳು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 6, 2025, 21:44 [IST]
English summary
Tata punch become number 1 overtake maruti suzuki company 40 years record
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+