Tata: ಕೇವಲ 6.20 ಲಕ್ಷ ಬೆಲೆ... 5-ಸ್ಟಾರ್ ರೇಟಿಂಗ್ ಕಾರು ಖರೀದಿಸಲು ಮುಗಿಬಿದ್ದ ಜನ!

ಟಾಟಾ ಮೋಟಾರ್ಸ್ (Tata Motors) ಇಂದು ತನ್ನ ಕ್ರಾಂತಿಕಾರಿ ಕಾಂಪ್ಯಾಕ್ಟ್ SUV ಆಗಿರುವ ಪಂಚ್ (Punch) ನ ಐತಿಹಾಸಿಕ ಮೈಲಿಗಲ್ಲನ್ನು ಘೋಷಿಸಿದೆ. ಇದು ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 6 ಲಕ್ಷ ಕಾರುಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ. ಅಕ್ಟೋಬರ್ 2021 ರಲ್ಲಿ ಬಿಡುಗಡೆಯಾದ ನಂತರ, ಟಾಟಾ ಪಂಚ್ ತನ್ನ ವಿಶಿಷ್ಟ ವಿನ್ಯಾಸ, ದೃಢವಾದ ಪರ್ಫಾಮೆನ್ಸ್ ಮತ್ತು 5 - ಸ್ಟಾರ್ ಸುರಕ್ಷತಾ ರೇಟಿಂಗ್‌ ನೊಂದಿಗೆ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಮುನ್ನುಗ್ಗುತ್ತಿದೆ.

ಅಂದಹಾಗೆ 2024 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರೆಂದು ಇತಿಹಾಸ ನಿರ್ಮಿಸಿದೆ. ನಗರ ಬೀದಿಗಳಲ್ಲಿ ಸಂಚರಿಸುತ್ತಿರಲಿ ಅಥವಾ ಗ್ರಾಮೀಣ ಹಾದಿಗಳಲ್ಲಿ ಸಂಚರಿಸುತ್ತಿರಲಿ, ಮೊದಲ ಬಾರಿಯ ಖರೀದಿದಾರರು, ಯುವ ವೃತ್ತಿಪರರು ಅಥವಾ ಬೆಳೆಯುತ್ತಿರುವ ಕುಟುಂಬಗಳು ಹೀಗೆ ಹಲವು ವಿಭಾಗಗಳ ಗ್ರಾಹಕರನ್ನು ಟಾಟಾ ಪಂಚ್ ಆಕರ್ಷಿಸುತ್ತಿದೆ. ಇದರ ಆರಂಭಿಕ ಬೆಲೆಯು 6.20 ಲಕ್ಷವಿದ್ದು, ಟಾಪ್ ವೇರಿಯೆಂಟ್ 10.32 (ಎಕ್ಸ್‌ ಶೋರೂಂ) ಲಕ್ಷವಿದೆ.

tata-punch-becomes-india-s-fastest-suv-to-cross-6-lakh-milestone

ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಪಂಚ್ ಅತ್ಯುತ್ತಮ ಆಯ್ಕೆಯಾಗಿದ್ದು, ಅನುಕೂಲತೆ, ಸುರಕ್ಷತೆ ಮತ್ತು SUV ನಿಲುವಿನ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ಪಂಚ್ ಮಾಲೀಕರಲ್ಲಿ ಸುಮಾರು 70% ರಷ್ಟು ಮಂದಿ ಮೊದಲ ಬಾರಿಗೆ ಕಾರು ಖರೀದಿಸಿದವರಾಗಿದ್ದಾರೆ. ಹಾಗೆಯೇ ಪಂಚ್ ಮಹಿಳಾ ಚಾಲಕರಲ್ಲಿಯೂ ಬಲವಾದ ಆಕರ್ಷಣೆಯನ್ನು ಗಳಿಸಿದೆ ಎಂದು ಕಂಪನಿ ತಿಳಿಸಿದೆ.

ನಿರ್ವಿವಾದ ನಾಯಕ

ಟಾಟಾ ಪಂಚ್‌ನ ಇಂಧನ ಚಾಲಿತ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳೆರಡೂ 5 -ಸ್ಟಾರ್ ಸುರಕ್ಷತಾ ರೇಟಿಂಗ್ (ಕ್ರಮವಾಗಿ ಜಾಗತಿಕ NCAP ಮತ್ತು ಭಾರತ್ NCAP) ಪಡೆದುಕೊಂಡಿವೆ. ಪೆಟ್ರೋಲ್, CNG ಮತ್ತು EV ಪವರ್‌ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಟಾಟಾ ಮೋಟಾರ್ಸ್‌ನ ಒಟ್ಟಾರೆ ಪ್ರಯಾಣಿಕ ವಾಹನ ಮಾರಾಟದಲ್ಲಿ ಪಂಚ್ ಆಕ್ರಮಣವು 36% ರಷ್ಟಿದೆ ಎಂದು ಕಂಪನಿ ತಿಳಿಸಿದೆ.

tata-punch-becomes-india-s-fastest-suv-to-cross-6-lakh-milestone

ಪಂಚ್‌ನ ಆಕರ್ಷಣೆಯು ಭಾರತದ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ವ್ಯಾಪಿಸಿದೆ. ಟೈಯರ್ 1 ನಗರಗಳಿಂದ 24%, ಟೈಯರ್ 2 ರಿಂದ 42% ಮತ್ತು ಟೈಯರ್ 3 ಪಟ್ಟಣಗಳಿಂದ 34% ರಷ್ಟು ಮಂದಿ ಟಾಟಾ ಪಂಚ್ ಕಾರುಗಳನ್ನು ಹೊಂದಿದ್ದಾರೆ. ಇದು ದೇಶಾದ್ಯಂತ ಗ್ರಾಹಕರೊಂದಿಗೆ ಅದರ ಆಳವಾದ ಬೇರೂರಿರುವ ಸಂಪರ್ಕವನ್ನು ಎತ್ತಿ ತೋರಿಸುತ್ತದೆ ಎಂದು ಟಾಟಾ ಹೇಳಿಕೊಂಡಿದೆ.

ಪಂಚ್ ಮಹಿಳಾ ಚಾಲಕಿಯರಲ್ಲಿಯೂ ಬಲವಾದ ಆಕರ್ಷಣೆಯನ್ನು ಗಳಿಸಿದೆ. ಇದರ ಸ್ಮಾರ್ಟ್ ವಿನ್ಯಾಸ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಕಮಾಂಡಿಂಗ್ ರಸ್ತೆ ವೀಕ್ಷಣೆಯನ್ನು ಮಹಿಳೆಯರು ಹೆಚ್ಚಾಗಿ ಇಷ್ಟಪಟ್ಟಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯಾಗಿ 25% Punch.ev ಮಾಲೀಕರು ಮಹಿಳೆಯರು ಎಂಬ ಅಂಶದಲ್ಲಿ ಹೆಚ್ಚು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.

tata-punch-becomes-india-s-fastest-suv-to-cross-6-lakh-milestone

ಸಬ್ - ಕಾಂಪ್ಯಾಕ್ಟ್ SUV ವಿಭಾಗದಲ್ಲಿ (FY25) ಪ್ರಬಲವಾದ 38% ಮಾರುಕಟ್ಟೆ ಪಾಲನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ 15% ರಷ್ಟು ಬಲವಾದ ಬೆಳವಣಿಗೆಯನ್ನು ನೋಂದಾಯಿಸಲಾಗಿದೆ. 20 ಕ್ಕೂ ಹೆಚ್ಚು ಪ್ರಸಿದ್ಧ ಆಟೋಮೋಟಿವ್ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದೆ. ಈ ಅಸಾಧಾರಣ ಪ್ರಯಾಣವನ್ನು ಸ್ಮರಿಸಲು, ಟಾಟಾ ಮೋಟಾರ್ಸ್ "ಇಂಡಿಯಾ ಕಿ ಎಸ್‌ಯುವಿ" ಎಂಬ ಹೊಸ ರಾಷ್ಟ್ರವ್ಯಾಪಿ ಅಭಿಯಾನವನ್ನು ಸಹ ಪ್ರಾರಂಭಿಸಿದೆ.

6 ಲಕ್ಷಕ್ಕೂ ಹೆಚ್ಚು ಟಾಟಾ ಪಂಚ್ ಕಾರುಗಳು ರಸ್ತೆಗಿಳಿದಿರುವುದು ಕೇವಲ ಒಂದು ಮೈಲಿಗಲ್ಲನ್ನು ಮಾತ್ರವಲ್ಲ, ಅದನ್ನು ಇಲ್ಲಿಗೆ ತಂದ ವೈವಿಧ್ಯಮಯ ಪ್ರಯಾಣಗಳನ್ನು ಗೌರವಿಸುತ್ತದೆ. ಪ್ರತಿಯೊಂದೂ ಉದ್ದೇಶ, ಹೆಮ್ಮೆ ಮತ್ತು ಸಾಧ್ಯತೆಯಿಂದ ನಡೆಸಲ್ಪಡುತ್ತದೆ. ಇಂಡಿಯಾ ಕಿ ಎಸ್‌ಯುವಿ ಮುಂದೆ, ಧೈರ್ಯದಿಂದ ಮತ್ತು ಒಟ್ಟಿಗೆ ಚಲಿಸುವ ರಾಷ್ಟ್ರದ ಚೈತನ್ಯಕ್ಕೆ ಗೌರವವಾಗಿದೆ ಎಂದು ಟಾಟಾ ಹೇಳಿದೆ.

More from DriveSpark

Article Published On: Thursday, July 17, 2025, 16:29 [IST]
English summary
Tata punch becomes india s fastest suv to cross 6 lakh milestone
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+