ಟಾಟಾ ಪಂಚ್ EV VS ಸಿಟ್ರನ್ eC3: ಯಾವುದು ಬೆಸ್ಟ? ನಗರ ಬಳಕೆಗೆ ಈ ಹ್ಯಾಚ್‌ಬ್ಯಾಕ್ ಸೂಕ್ತ!

ಟಾಟಾ ಪಂಚ್ ಇವಿ ಮತ್ತು ಸಿಟ್ರನ್ ಇಸಿ3 ಕಾರುಗಳು ಸದ್ಯ ಎಲೆಕ್ಟ್ರಿಕ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಯೋಗ್ಯವಾದ ರೇಂಜ್ ಮತ್ತು ದೈನಂದಿನ ನಗರ ಪ್ರಯಾಣಕ್ಕೆ ಬೆಸ್ಟ್ ಆಯ್ಕೆಯಾಗಿವೆ. ಎರಡೂ ಕಾಂಪ್ಯಾಕ್ಟ್ ಎಸ್‌ಯುವಿಗಳು ಒಮ್ಮೆ ಚಾರ್ಜ್ ಮಾಡಿದರೆ 240 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ನೀಡುತ್ತವೆ. ಆದರೆ ಎರಡರಲ್ಲಿ ಯಾವುದು ಉತ್ತಮ ಎಂಬುದನ್ನು ಪರಿಗಣಿಸಲು ಗೊಂದಲವಿದ್ದವರಿಗಾಗಿಯೇ ಈ ಎರಡೂ ಕಾರುಗಳನ್ನು ಹೋಲಿಕೆ ಮಾಡಿದ್ದೇವೆ. ಯಾವುದು ನಿಮಗೆ ಹೆಚ್ಚು ಸೂಕ್ತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇಲ್ಲಿ ತ್ವರಿತ ಹೋಲಿಕೆ ಇದೆ.

ಬೆಲೆ: ಟಾಟಾ ಪಂಚ್ ಇವಿ ಬೆಲೆಯು ರೂ.9.99 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಟಾಟಾ ಪಂಚ್ ಟಾಪ್ ಎಂಡ್ ಮಾಡೆಲ್ ಬೆಲೆಯು ರೂ. 14.44 ಲಕ್ಷ (ಎಕ್ಸ್‌ ಶೋರೂಂ) ಇದೆ. ಇನ್ನು ಸಿಟ್ರೊಯೆನ್ eC3 ಬೆಲೆ ವಿಷಯಕ್ಕೆ ಬಂದರೆ ರೂ. 12.90 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಎಂಡ್ ಮಾಡಲ್ ಬೆಲೆಯು ರೂ. 13.41 ಲಕ್ಷ (ಎಕ್ಸ್‌ ಶೋರೂಂ) ಇದೆ.

tata-punch-ev-vs-citroen-ec3-which-is-the-best

ಬ್ಯಾಟರಿ ಮತ್ತು ರೇಂಜ್: ಸಿಟ್ರನ್ ಇಂಡಿಯಾ 29.2 kWh ಏರ್-ಕೂಲ್ಡ್ ಬ್ಯಾಟರಿ ಪ್ಯಾಕ್‌ನೊಂದಿಗೆ eC3 ಅನ್ನು ನೀಡುತ್ತಿದೆ, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 246 ಕಿ.ಮೀ ಓಡಬಲ್ಲದು ಎಂದು ಕಂಪನಿ ಕ್ಲೈಮ್ ಮಾಡಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 56.88 hp ಪವರ್ ಮತ್ತು 143 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಲೆಕ್ಟ್ರಿಕ್ SUV ಗಂಟೆಗೆ 107 kmph ಗರಿಷ್ಠ ವೇಗವನ್ನು ತಲುಪಬಲ್ಲದು.

ಟಾಟಾ ಪಂಚ್ 25 kWh ಮತ್ತು 35 kWh ಎಂಬ ಎರಡು ಬ್ಯಾಟರಿ ಸಾಮರ್ಥ್ಯದ ಆಯ್ಕೆಗಳನ್ನು ನೀಡುತ್ತದೆ. 35 kWh ಬ್ಯಾಟರಿಯು ಒಮ್ಮೆ ಚಾರ್ಜ್ ಮಾಡಿದರೆ 290 ಕಿ.ಮೀ ಓಡುತ್ತದೆ. ಇದರ ಮೋಟಾರ್ 88.77 hp ಪವರ್ ಮತ್ತು 190 Nm ಟಾರ್ಕ್ ಉತ್ಪಾದಿಸುತ್ತದೆ. ಬ್ಯಾಟರಿ ವಾರೆಂಟಿ ವಿಷಯದಲ್ಲಿ, ಸಿಟ್ರನ್ 7 ವರ್ಷ ಅಥವಾ 1.40 ಲಕ್ಷ ಕಿಲೋಮೀಟರ್ ಮತ್ತು ಪಂಚ್ EV 8 ವರ್ಷ ಅಥವಾ 1.60 ಲಕ್ಷ ಕಿಲೋಮೀಟರ್ ವಾರೆಂಟಿ ಹೊಂದಿವೆ.

tata-punch-ev-vs-citroen-ec3-which-is-the-best

ಫೀಚರ್ಸ್: ಹೊಸ ಟಾಟಾ ಪಂಚ್ ಇವಿ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಏರ್ ಪ್ಯೂರಿಫೈಯರ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಇನ್ಫೋಟೈನ್‌ಮೆಂಟ್ & ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಡಿಸ್ಪ್ಲೇಗಳು (10.25-ಇಂಚು), ಆಂಡ್ರಾಯ್ಡ್ ಆಟೋ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ.

ಸಿಟ್ರನ್ ಇಸಿ3 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಮ್ಯಾನುವಲ್ ಎಸಿ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಹಿಂಭಾಗದ ಕ್ಯಾಮೆರಾ, ಪಾರ್ಕಿಂಗ್ ಸೆನ್ಸರ್‌ಗಳು, ಸುಧಾರಿತ ಇಂಟರ್ನೆಟ್ ವೈಶಿಷ್ಟ್ಯಗಳು ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

tata-punch-ev-vs-citroen-ec3-which-is-the-best

ಡಿಸೈನ್: ವಿನ್ಯಾಸದ ವಿಷಯದಲ್ಲಿ, ಎರಡೂ SUV ಗಳು ಉತ್ತಮವಾಗಿವೆ, ಪಂಚ್ EV ತನ್ನ ಸ್ಮಾರ್ಟ್ ಡಿಜಿಟಲ್ LED DRL ಗಳು ಮತ್ತು ಹೆಡ್‌ಲ್ಯಾಂಪ್‌ಗಳೊಂದಿಗೆ ಆಕರ್ಷಕ ನೋಟವನ್ನು ಹೊಂದಿದೆ. ಸಿಟ್ರೊಯೆನ್ eC3 ಸ್ಪ್ಲಿಟ್ LED DRL ಗಳು ಸಿಗ್ನೇಚರ್ ವಿನ್ಯಾಸವಾಗಿದ್ದು, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಪಂಚ್ EV ಗೆ ಹೋಲಿಸಿದರೆ eC3 ಹೆಚ್ಚು ಸಂಯಮದ ಡಿಸೈನ್ ಹೊಂದಿದೆ.

ಬಹು ಮುಖ್ಯವಾಗಿ, ಪಂಚ್ ಇವಿ ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಹೊಂದಿದೆ. ಇಸಿ3 ಗ್ಲೋಬಲ್ ಎನ್‌ಸಿಎಪಿಯ ಸೇಫರ್‌ಕಾರ್ಸ್‌ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ 0 ಸ್ಟಾರ್ ರೇಟಿಂಗ್ ಗಳಿಸಿದೆ. ಈ ಎರಡೂ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ. ಹೆಚ್ಚಿನ ಆಟೋಮೋಟಿವ್ ಸುದ್ದಿಗಳಿಗಾಗಿ ಡ್ರೈವ್‌ಸ್ಪಾರ್ಕ್ ಅನ್ನು ಫಾಲೋ ಮಾಡಿ.

More from DriveSpark

Article Published On: Wednesday, December 31, 2025, 17:11 [IST]
English summary
Tata punch ev vs citroen ec3 which is the best
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+