TATA: ಜನ ಸಾಲು ಕಟ್ಟುವರು.. ಡಿ.9ಕ್ಕೆ ಈ ಜನಪ್ರಿಯ ಟಾಟಾ ಕಾರುಗಳು ಹೊಸ ರೂಪದಲ್ಲಿ ಬಿಡುಗಡೆ!

ಟಾಟಾ ಮೋಟಾರ್ಸ್ (Tata Motors) ನಂಬಿಕಾರ್ಹ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೃಹದಾಕಾರದ ಸಫಾರಿ ಹಾಗೂ ಹ್ಯಾರಿಯರ್ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೂ ಮಾರಾಟ ಪ್ರಮಾಣವು ಸಾಧಾರಣ ಮಟ್ಟದಲ್ಲಿದೆ. ಅದಕ್ಕೆ ಇವೆರಡು ಕಾರುಗಳು 'ಡೀಸೆಲ್' ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತಿರುವುದು ಬಹುಮುಖ್ಯವಾದ ಕಾರಣವಾಗಿದೆ. ಸದ್ಯ, ಕಂಪನಿಯು ಈ ಎಸ್‌ಯುವಿಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಹಣಿಯಾಗಿದೆ.

ಡಿಸೆಂಬರ್ 9ರಂದು ಸಫಾರಿ ಮತ್ತು ಹ್ಯಾರಿಯರ್ ಕಾರುಗಳು ನೂತನ ಎಂಜಿನ್‌ನೊಂದಿಗೆ ಮಾರಾಟಕ್ಕೆ ಬರಲಿವೆ. ಇವುಗಳು 1.5-ಲೀಟರ್ ಟರ್ಬೊ 4-ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಪವರ್‌ಟ್ರೇನ್‌ನ್ನು ಪಡೆಯಲಿವೆ. ಅದು 170 ಪಿಎಸ್ ಅಶ್ವ ಶಕ್ತಿ (ಹಾರ್ಸ ಪವರ್) ಹಾಗೂ 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Tata Safari And Harrier Suv Petrol Version Launch On 9th December Details

ಪ್ರಸ್ತುತ ಖರೀದಿಗೆ ಲಭ್ಯವಿರುವ ಟಾಟಾ ಸಫಾರಿ (Tata Safari) ವಿಶೇಷತೆಗಳೇನು:

ಇದು ದೊಡ್ಡ ಗಾತ್ರದ ಕಾರಾಗಿದೆ. ಕನಿಷ್ಠ ರೂ.14.66 ಲಕ್ಷ ಹಾಗೂ ಗರಿಷ್ಠ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಸೂಪರ್ನೋವಾ ಕಾಪರ್, ಕಾಸ್ಮಿಕ್ ಗೋಲ್ಡ್, ಫ್ರಾಸ್ಟ್ ವೈಟ್, ಫ್ರಾಸ್ಟ್ ರಾಯಲ್ ಬ್ಲೂ, ಪ್ಯೂರ್ ಗ್ರೇ, ಡೇಟೋನಾ ಗ್ರೇ & ಕಾರ್ಬನ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,741 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ಸಫಾರಿ' 2-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 14 ರಿಂದ 16 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 175 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 4.1 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಈ ಕಾರು 6/ 7 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 420 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.3 ಇಂಚು), ಡಿಜಿಟಲ್ ಡ್ರೈವರ್ ಡಿಸ್​ಪ್ಲೇ (10.25 ಇಂಚು), ಸನ್‌ರೂಫ್ ಮತ್ತು ಆಟೋಮೆಟಿಕ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಈಗಿರುವ ಟಾಟಾ ಹ್ಯಾರಿಯರ್ (Tata Harrier) ಹೇಗಿದೆ:

ಇದು ರೂ.14 ಲಕ್ಷದಿಂದ ರೂ.25.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಉತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಸೀವೀಡ್ ಗ್ರೀನ್, ಡೇಟೋನಾ ಗ್ರೇ, ಫಿಯರ್‌ಲೆಸ್ ರೆಡ್, ಪ್ಯೂರ್ ಗ್ರೇ, ಪ್ರಿಸ್ಟೈನ್ ವೈಟ್, ಕಾರ್ಬನ್ ಬ್ಲ್ಯಾಕ್, ಆಶ್ ಗ್ರೇ, ಕೋರಲ್ ರೆಡ್ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2741 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ 'ಹ್ಯಾರಿಯರ್' 2-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 17 ಕಿಮೀವರೆಗೆ ಮೈಲೇಜ್ ಕೊಡುತ್ತದೆ. 190 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 9.8 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 445 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.3 ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ, ಸನ್‌ರೂಫ್‌ ಮತ್ತು ಕೀಲೆಸ್ ಎಂಟ್ರಿಯಂತಹ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

More from DriveSpark

Article Published On: Friday, November 14, 2025, 11:14 [IST]
English summary
Tata safari and harrier suv petrol version launch on 9th december details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+