TATA: ಟಾಟಾದ ಹೊಚ್ಚ ಹೊಸ ಕಾರಿನ ವಿತರಣೆ ಶುರು, ಸಂಭ್ರಮದಲ್ಲಿ ಗ್ರಾಹಕ..!
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರಖ್ಯಾತ ಎಸ್‌ಯುವಿಗಳಾದ ಹ್ಯಾರಿಯರ್ & ಸಫಾರಿಯ 'ಸ್ಟೆಲ್ತ್ ಎಡಿಷನ್'ನ್ನು ಅನಾವರಣಗೊಳಿಸಿತ್ತು. ಫೆಬ್ರವರಿ 13ರಂದು ಈ ಕಾರುಗಳನ್ನು ಅದ್ದೂರಿಯಾಗಿಯೂ ಬಿಡುಗಡೆಗೊಳಿಸಿತ್ತು. ಸದ್ಯ ದೇಶಾದ್ಯಂತ ನೂತನ ಸಫಾರಿ ಸ್ಟೆಲ್ತ್ ಎಡಿಷನ್ ಮಾಡೆಲ್‌ನ ವಿತರಣೆಯನ್ನು ಕಂಪನಿಯು ಶುರು ಮಾಡಿದೆ ಎಂದು ವರದಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮುಂಬೈನಲ್ಲಿ ನೂತನ ಟಾಟಾ ಸಫಾರಿ ಸ್ಟೆಲ್ತ್ ಎಡಿಷನ್ (Tata Safari Stealth Edition) ಎಸ್‌ಯುವಿಯನ್ನು ಗ್ರಾಹಕರೊಬ್ಬರಿಗೆ ವಿತರಣೆ ಮಾಡಲಾಗಿದೆ. ಅವರು ಕೂಡ ಹೊಸ ಕಾರನ್ನು ಖುಷಿಯಿಂದಲೇ ಮನೆಗೆ ಕೊಂಡೊಯ್ದಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿವೆ.

ಹೊಸ ಟಾಟಾ ಸಫಾರಿ ಸ್ಟೆಲ್ತ್ ಎಡಿಷನ್ ಕಾರು, ರೂ.25.30 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಇದು ಸಾಮಾನ್ಯ ಸಫಾರಿ ಎಸ್‌ಯುವಿಯ 'ಅಕಂಪ್ಲಿಶ್ಡ್ ಪ್ಲಸ್' ರೂಪಾಂತರಕ್ಕೆ ಬಹುತೇಕ (ವೇರಿಯೆಂಟ್) ಹೋಲಿಕೆಯಾಗುತ್ತದೆ. ಆದರೆ, ಸ್ಪೆಷಲ್ ಎಡಿಷನ್ ಆಗಿರುವುದರಿಂದ ವಿನ್ಯಾಸದಲ್ಲಿ ಒಂದಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ.
ಈ ಟಾಟಾ ಸಫಾರಿ ಸ್ಟೆಲ್ತ್ ಎಡಿಷನ್, ಹೊರಭಾಗದಲ್ಲಿ ಮ್ಯಾಟ್ ಬ್ಲ್ಯಾಕ್ ಪೇಂಟ್ ಸ್ಕೀಮ್ ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. 'ಸ್ಟೆಲ್ತ್' ಬ್ಯಾಡ್ಜಿಂಗ್‌ನ್ನು ಪಡೆದಿದೆ. ಒಳಭಾಗವು ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದ್ದು, ಫುಲ್ ಬ್ಲ್ಯಾಕ್ ಲೆದರೆಟ್ ಇಂಟೀರಿಯರ್‌ನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ ಸಹ 7 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಜೊತೆಗೆ ದೊಡ್ಡ ಗಾತ್ರದ ಬೂಟ್ ಸ್ಪೇಸ್‌ನ್ನು ಹೊಂದಿದೆ.

ನೂತನ ಸಫಾರಿ ಸ್ಟೆಲ್ತ್ ಎಡಿಷನ್ ಪವರ್‌ಟ್ರೇನ್‌ನಲ್ಲಿಯೂ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಈಗಿರುವ ಮಾಡೆಲ್‌ನಂತೆಯೇ 2.0-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 168 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 350 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿವೆ. 15 ರಿಂದ 16 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೊಸ ಟಾಟಾ ಸಫಾರಿ ಸ್ಟೆಲ್ತ್ ಎಡಿಷನ್ ಎಸ್‌ಯುವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.3-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (10.25-ಇಂಚು), ವೈರ್‌ಲೆಸ್ ಫೋನ್ ಚಾರ್ಜಿಂಗ್, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಡುಯಲ್ ಜೋನ್ ಆಟೋಮೆಟಿಕ್ ಎಸಿ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಟಾಟಾ ಹ್ಯಾರಿಯರ್ ಸ್ಟೆಲ್ತ್ ಎಡಿಷನ್ (Tata Harrier Stealth Edition) ಕೂಡ ಖರೀದಿಗೆ ಲಭ್ಯ: ಈ ಕಾರು ರೂ.24.85 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಇದು ಸಾಮಾನ್ಯ ಹ್ಯಾರಿಯರ್‌ನ 'ಫಿಯರ್‌ಲೆಸ್ ಪ್ಲಸ್' ರೂಪಾಂತರದಂತೆ ಇದ್ದು, ಸಫಾರಿ ಸ್ಟೆಲ್ತ್ ಎಡಿಷನ್ ಮಾಡೆಲ್‌ನಂತೆಯೇ ಎಲ್ಲ ರೀತಿಯ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications