6-ಸೀಟರ್.. ಪೂರ್ತಿ ತಾಕತ್ತಿನ TATA ಕಾರಿದು, ಆದ್ರೂ ಗ್ರಾಹಕರು ಖರೀದಿಸಿಲ್ಲ.. ಯಾಕೆ?

ಟಾಟಾ ಸಫಾರಿ (Tata Safari) ಜಗಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಆದರೂ ಈ ಆಗಸ್ಟ್ ತಿಂಗಳು 'ಸಫಾರಿ' ಮಾರಾಟವು ಕುಸಿತವಾಗಿದೆ. ಒಟ್ಟು 1,489 ಯುನಿಟ್‌ಗಳನ್ನು ಮಾತ್ರ ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲಿ 1,951 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -23.68% ಕುಸಿತವಾಗಿದೆ.

ನೂತನ ಟಾಟಾ ಸಫಾರಿ ಮಾರಾಟ ಪ್ರಮಾಣವು ಇಳಿಮುಖವಾಗಲು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಬಹುಮುಖ್ಯವಾಗಿ ಆಗಸ್ಟ್‌ನಲ್ಲಿಯೇ ಕೇಂದ್ರ ಸರ್ಕಾರವು ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ತಗ್ಗಿಸಲಿದೆ ಎಂಬ ಸುಳಿವು ಗ್ರಾಹಕರಿಗೆ ಲಭ್ಯವಾಗಿತ್ತು. ಜೊತೆಗಿದು ಡೀಸೆಲ್ ಎಸ್‌ಯುವಿಯಾಗಿದೆ. ಹಲವು ಗ್ರಾಹಕರು ಪೆಟ್ರೋಲ್ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ 'ಸಫಾರಿ' ಮಾರಾಟವು ಕುಂಠಿತವಾಗಿದೆ ಎಂದು ಹೇಳಲಾಗಿದೆ.

Tata Safari Suv August Sales 2025 Report

ಟಾಟಾ ಸಫಾರಿ ವಿಶೇಷತೆಗಳೇನು:

ಪ್ರಸ್ತುತ ಈ ಎಸ್‌ಯುವಿಯು ಕನಿಷ್ಠ ರೂ.15.50 ಲಕ್ಷ ಹಾಗೂ ಗರಿಷ್ಠ ರೂ.27.44 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಈ ಕಾರಿನ ಮೇಲೆಯೂ ಜಿಎಸ್‌ಟಿ ಕಡಿತಗೊಳಿಸಲಾಗಿದ್ದು, ರೂ.1.45 ಲಕ್ಷವರೆಗೆ ಬೆಲೆಯನ್ನು ಇಳಿಕೆ ಮಾಡಲಾಗಿದೆ. ನೂತನ ಪರಿಷ್ಕೃತ ದರಗಳು ಸೆಪ್ಟೆಂಬರ್ 22 ರಿಂದ ಅನ್ವಯವಾಗಲಿದೆ.

ಇದು ಸ್ಮಾರ್ಟ್, ಸ್ಮಾರ್ಟ್ (ಒ), ಅಡ್ವೆಂಚರ್ ಎಕ್ಸ್ ಪ್ಲಸ್, ಅಡ್ವೆಂಚರ್ ಎಕ್ಸ್ ಪ್ಲಸ್ ಡಾರ್ಕ್, ಅಕಂಪ್ಲಿಶ್ಡ್ ಎಕ್ಸ್ ಹಾಗೂ ಅಕಂಪ್ಲಿಶ್ಡ್ ಎಕ್ಸ್ ಪ್ಲಸ್ ಒಳಗೊಂಡಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಕನೆಕ್ಟ್ಡ್ ಡಿಆರ್‌ಎಲ್‌ಗ‌ಳು, ಎಲ್ಇಡಿ ಟೈಲ್‌ ಲ್ಯಾಂಪ್‌ಗಳು ಮತ್ತು ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

Tata Safari Suv August Sales 2025 Report

ಈ ಎಸ್‌ಯುವಿಯು ಒಬೆರಾನ್ ಬ್ಲ್ಯಾಕ್, ಸ್ಟಾರ್‌ಡಸ್ಟ್ ಆಶ್, ಸ್ಟೆಲ್ಲರ್ ಫ್ರಾಸ್ಟ್ ಮತ್ತು ಸೂಪರ್‌ನೋವಾ ಕಾಪರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 4,668 ಎಂಎಂ ಉದ್ದ, 1,922 ಎಂಎಂ ಅಗಲ & 1,795 ಎಂಎಂ ಎತ್ತರವಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,741 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.1,825 ಕೆಜಿ ತೂಕವು ಇದೆ.

ನೂತನ ಸಫಾರಿ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 2-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 16 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 50 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 11.2 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಇದರಲ್ಲಿ 6/ 7 ಆಸನ ಆಯ್ಕೆ ವ್ಯವಸ್ಥೆಯಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 420 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಕ್ಯಾಬಿನ್ ವಿನ್ಯಾಸವು ಒಳ್ಳೆಯ ರೀತಿಯಲ್ಲಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, 10 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಸನ್‌ರೂಫ್ ಮತ್ತು ಡುಯಲ್ ಜೋನ್ ಆಟೋಮೆಟಿಕ್ ಎಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್​​ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

More from DriveSpark

Article Published On: Tuesday, September 16, 2025, 8:30 [IST]
English summary
Tata safari suv august sales 2025 report
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+