6-ಸೀಟರ್: ಕಲ್ಲು ಬಂಡೆಯಂತಹ Tata ಕಾರಿದು.. 1.45 ಲಕ್ಷ ಬೆಲೆ ಇಳಿಕೆ, ಹೊಸ ದರವೆಷ್ಟು.. EMI ಏನು?
ಟಾಟಾ ಸಫಾರಿ (Tata Safari) ವಿಶ್ವಾಸಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಸೆ.22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಈ ಕಾರಿನ ಬೆಲೆಯು ರೂ.1.45 ಲಕ್ಷ ಇಳಿಕೆಯಾಗಿದೆ. ಕನಿಷ್ಠ ರೂ.14.66 ಲಕ್ಷ ಹಾಗೂ ಗರಿಷ್ಠ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ನೂತನ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ 'ಸಫಾರಿ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಸ್‌ಯುವಿಯ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಕುರಿತಂತೆ ಒಂದಷ್ಟು ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಈ ಕಾರು ಹಲವು ವಿಧದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದರ ಸ್ಮಾರ್ಟ್ (ಡೀಸೆಲ್) ರೂಪಾಂತರ, ರೂ.18.16 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.5 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ.13.16 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.27,000 ವರೆಗೆ ಇಎಂಐ ಕಟ್ಟಬೇಕು.

ಮತ್ತೊಂದು ಪ್ಯೂರ್ ಎಕ್ಸ್ (ಡೀಸೆಲ್) ರೂಪಾಂತರ, ರೂ.21.61 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.5 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಕೊಂಡುಕೊಂಡರೆ, ರೂ.16.61 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.34,000 ವರೆಗೆ ಇಎಂಐ ಪಾವತಿ ಮಾಡಬೇಕು.
ಇನ್ನೊಂದು ಅಡ್ವೆಂಚರ್ ಎಕ್ಸ್ ಪ್ಲಸ್ (ಡೀಸೆಲ್) ರೂಪಾಂತರ, ರೂ.23.34 ಲಕ್ಷವರೆಗೆ ಆನ್-ರೋಡ್ ದರವನ್ನು ಹೊಂದಿದೆ. ರೂ.5 ಲಕ್ಷ ಡೌನ್-ಪೇಮೆಂಟ್ ಕಟ್ಟಿ ತೆಗೆದುಕೊಂಡರೆ, ರೂ.18.34 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.37,000 ವರೆಗೆ ಇಎಂಐ ಕಟ್ಟಬೇಕು.

ಇದೇ ಕಾರಿನ ಅಕಾಂಪ್ಲಿಶ್ಡ್ ಎಕ್ಸ್ ಡಾರ್ಕ್ (ಡೀಸೆಲ್) ರೂಪಾಂತರ, ರೂ.27.77 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.5 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.22.77 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.46,000 ವರೆಗೆ ಇಎಂಐ ಪಾವತಿಸಬೇಕು.
ಹಾಗೆಯೇ ಈ ಸಫಾರಿಯ ಅಕಾಂಪ್ಲಿಶ್ಡ್ ಎಕ್ಸ್ ಪ್ಲಸ್ 6-ಸೀಟರ್ ಡಾರ್ಕ್ ಆಟೋಮೆಟಿಕ್ (ಡೀಸೆಲ್) ರೂಪಾಂತರ, ರೂ.31.72 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.5 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ.26.72 ಲಕ್ಷವರೆಗೆ ಸಾಲವಿರುತ್ತದೆ. 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.54,000 ವರೆಗೆ ಇಎಂಐ ಕಟ್ಟಬೇಕು.

ಟಾಟಾ ಸಫಾರಿ ವಿಶೇಷತೆಗಳೇನು:
ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಕನೆಕ್ಟ್ಡ್ ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಕಾಸ್ಮಿಕ್ ಗೋಲ್ಡ್, ಸ್ಟಾರ್‌ಡಸ್ಟ್ ಆಶ್, ಸ್ಟೆಲ್ಲರ್ ಫ್ರಾಸ್ಟ್ ಮತ್ತು ಸೂಪರ್‌ನೋವಾ ಕಾಪರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,741 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಈ ಕಾರು 6/7 ಆಸನ (ಸೀಟ್‌ಗಳು) ಆಯ್ಕೆ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ. 2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 14 ರಿಂದ 16 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಈ ಸಫಾರಿಯ ಕೆಲವೇ ರೂಪಾಂತರಗಳ (ವೇರಿಯೆಂಟ್) ಆನ್-ರೋಡ್ ಬೆಲೆಯ ಬಗ್ಗೆ ಮಾತ್ರ ವಿವರಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








