Tata: 11.49 ಲಕ್ಷ.. ಹೊಸ ಟಾಟಾ ಸಿಯೆರಾ ಕಾರಿನ ಆನ್-ರೋಡ್ ದರವೆಷ್ಟು, EMI ಏನು?

ಈಚೆಗೆ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರೂ.11.49 ಲಕ್ಷದಿಂದ ರೂ.18.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ 'ಸಿಯೆರಾ' ಬೆಸ್ಟ್ ಚಾಯ್ಸ್ ಆಗಲಿದೆ. ನಾವಿಲ್ಲಿ ಈ ಕಾರಿನ ಆನ್-ರೋಡ್ ದರ (On Road Price) ಹಾಗೂ ಇಎಂಐ (EMI) ಕುರಿತಂತೆ ಸಂಕ್ಷಿಪ್ತ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಈ 'ಟಾಟಾ ಸಿಯೆರಾ' ಹಲವು ವಿಧದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದರ ಸ್ಮಾರ್ಟ್ ಪ್ಲಸ್ 'ಪೆಟ್ರೋಲ್' ರೂಪಾಂತರ, ರೂ.13.30 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.3 ಲಕ್ಷವರೆಗೆ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.10.30 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.21,000 ವರೆಗೆ ಇಎಂಐ ಕಟ್ಟಬೇಕು.

Tata Sierra Car On-Road Price And Emi Details

ಇನ್ನೊಂದು ಸ್ಮಾರ್ಟ್ ಪ್ಲಸ್ 'ಡೀಸೆಲ್' ರೂಪಾಂತರ, ರೂ.15.35 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.3 ಲಕ್ಷವರೆಗೆ ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.12.35 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.25,000 ವರೆಗೆ ಇಎಂಐ ಪಾವತಿಸಬೇಕು.

ಮತ್ತೊಂದು ಪ್ಯೂರ್ 'ಡೀಸೆಲ್' ರೂಪಾಂತರ, ರೂ.17.11 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.3 ಲಕ್ಷವರೆಗೆ ಡೌನ್-ಪೇಮೆಂಟ್ ಪಾವತಿಸಿ ತೆಗೆದುಕೊಂಡರೆ, ರೂ.14.11 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.28,500 ವರೆಗೆ ಇಎಂಐ ಕಟ್ಟಬೇಕು.

ಇದೇ ಕಾರಿನ ಅಡ್ವೆಂಚರ್ 'ಡೀಸೆಲ್' ರೂಪಾಂತರ, ರೂ.19.45 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.3 ಲಕ್ಷವರೆಗೆ ಡೌನ್-ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.16.45 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.34,500 ವರೆಗೆ ಇಎಂಐ ಪಾವತಿ ಮಾಡಬೇಕು.

'ಟಾಟಾ ಸಿಯೆರಾ' ವಿಶೇಷತೆಗಳೇನು:

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಅಂಡಮಾನ್ ಅಡ್ವೆಂಚರ್, ಬೆಂಗಾಲ್ ರೂಜ್, ಕೂರ್ಗ್ ಕ್ಲೌಡ್ಸ್, ಮುನ್ನಾರ್ ಮಿಸ್ಟ್, ಮಿಂಟಲ್ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2730 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

ನೂತನ 'ಸಿಯೆರಾ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 622 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. ಟ್ರಿಪಲ್ ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಪ್ಯಾಸೆಂಜರ್ ಸೈಡ್ ಡಿಸ್​ಪ್ಲೇ), ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್‌ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ನಿಮ್ಮ ಗಮನಕ್ಕೆ.. ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Sunday, December 7, 2025, 22:50 [IST]
English summary
Tata sierra car on road price and emi details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+