ಹೊಸ ಯುಗಕ್ಕೆ ಕಾಲಿಟ್ಟಿದೆ ಟಾಟಾ... ಸಿಯೆರಾ ಬಗ್ಗೆ ತಿಳಿಯದ ಅದೆಷ್ಟೋ ವಿಷಯಗಳಿವೆ ಬನ್ನಿ ನೋಡೋಣ

ಭಾರತದ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾದ ಟಾಟಾ ಸಿಯೆರಾ ಮೊನ್ನೆಯಷ್ಟೆ ಬಿಡುಗಡೆಯಾಗಿ ದೇಶದಲ್ಲಿ ಭಾರೀ ಚರ್ಚಿಸಲ್ಪಡುತ್ತಿದೆ. ಇದು ಮೊದಲ ಬಾರಿಗೆ 1991 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು, ಅದರ ಪ್ರಗತಿಪರ ವಿನ್ಯಾಸ ಮತ್ತು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿತ್ತು. ಭಾರತೀಯರನ್ನು ಅಂದಿನ ಕಾಲಕ್ಕೆ ತನ್ನ ಆಕರ್ಷಕ ಲುಕ್‌ನೊಂದಿಗೆ ಸೆಳೆದಿತ್ತು, ಅದೇ ಡಿಸೈನ್‌ನೊಂದೆಗೆ ಈಗ ಹೊಸ ಯುಗಕ್ಕೆ ಕಾಲಿಟ್ಟು ತಂತ್ರಜ್ಞಾನ, ಸುರಕ್ಷತೆ, ಕರಕುಶಲತೆ ಮತ್ತು ವಿನ್ಯಾಸದೊಂದಿಗೆ ಜನರ ಮನಗೆದ್ದಿದೆ. ಅಷ್ಟಕ್ಕೂ ಸಿಯೆರಾ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ನೋಡೋಣ.

ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಹಾಗೂ 19 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಅಂಡಮಾನ್ ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ & ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳೊಂದಿಗೆ ಲಭ್ಯವಿದೆ.

tata-sierra-enters-a-new-era-best-in-its-class

ಟಾಟಾ ಸಿಯೆರಾ ಎಸ್‌ಯುವಿ ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲನೇಯದು 1.5 ಲೀ. ಹೈಪೀರಿಯಡ್ ಟಿಜಿಡಿಐ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 157 ಬಿಹೆಚ್ ಪವರ್ ಮತ್ತು 255 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಕೇವಲ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

ಇದು ಪನೋರಮಿಕ್ ಸನ್‌ರೂಫ್, ಡಿಜಿಟಲ್ ಡ್ಯಾಶ್‌ಬೋರ್ಡ್ ಮತ್ತು ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಆಧುನಿಕ ಶೈಲಿಯನ್ನು ಹೊಂದಿದೆ. ಸುರಕ್ಷತೆಯು ಒಂದು ಪ್ರಮುಖ ಅಂಶವಾಗಿದ್ದು, ಆರು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ನಂತಹ ಸುಧಾರಿತ ಫೀಚರ್ಸ್ ಒಳಗೊಂಡಿದೆ. ಐಕಾನಿಕ್ ಡಿಸೈನ್, ಆಧುನಿಕ ತಂತ್ರಜ್ಞಾನ ಮತ್ತು ಬಲವಾದ ಸುರಕ್ಷತಾ ಫೀಚರ್ಸ್ ಹುಡುಕುವ ಖರೀದಿದಾರರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.

tata-sierra-enters-a-new-era-best-in-its-class

ಹೊಚ್ಚ ಹೊಸ 'ಟಾಟಾ ಸಿಯೆರಾ' ಎಸ್‌ಯುವಿಯನ್ನು ರೂ.11.49 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ತರಲಾಗಿದೆ. ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಹೊಸ ಸಿಯೆರಾ ಆರಂಭಿಕ ಬೆಲೆ ಹೆಚ್ಚಾಗಿದ್ದರೂ, ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಪ್ರೀಮಿಯಂ, ವೈಶಿಷ್ಟ್ಯ ಭರಿತ ಕಾರಾಗಿದೆ. ಇದರ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ ರೂ.10.73 ಲಕ್ಷ, ಕಿಯಾ ಸೆಲ್ಟೋಸ್ ರೂ.10.79 ಲಕ್ಷ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ರೂ.10.76 ಲಕ್ಷವಿದ್ದು, ಇವುಗಳಿಗಿಂತ ಸಿಯೆರಾ ಬೇಸ್ ವೇರಿಯೆಂಟ್ ಬೆಲೆ ಹೆಚ್ಚಾಗಿದೆ.

tata-sierra-enters-a-new-era-best-in-its-class

ಇಂಟೀರಿಯರ್‌ನಲ್ಲಿ ಟಾಟಾ ಸಿಯೆರಾ ಮೂರು ಡ್ಯಾಶ್‌ಬೋರ್ಡ್ ಡಿಸ್ಪ್ಲೇಗಳಿಂದ ಹೈಲೈಟ್ ಮಾಡಲಾದ ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ. ನಾಲ್ಕು-ಸ್ಪೋಕ್ ಸ್ಟೀರಿಂಗ್ ವೀಲ್ ಪ್ರಕಾಶಿತ ಟಾಟಾ ಲೋಗೋ ಮತ್ತು ಟಚ್ ಕಂಟ್ರೋಲ್‌ಗಳನ್ನು ಹೊಂದಿದೆ. 12-ಸ್ಪೀಕರ್ JBL ಸೌಂಡ್ ಸಿಸ್ಟಮ್, ಸೋನಿಕ್‌ಶಾಫ್ಟ್ ಸೌಂಡ್‌ಬಾರ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ (ಭಾರತದಲ್ಲಿ ಅತಿ ದೊಡ್ಡದು) ನೀಡಲಾಗಿದೆ.

ಇವಿಷ್ಟೇ ಅಲ್ಲದೆ ವೈರ್‌ಲೆಸ್ ಚಾರ್ಜರ್, ಹಿಂಭಾಗದ ಸನ್‌ಶೇಡ್ ‌ಗಳು, ಪವರ್ಡ್ ಫ್ರಂಟ್ ಸೀಟ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ. ಸೌಕರ್ಯವನ್ನು ಹೆಚ್ಚಿಸುವ ಸಿಯೆರಾ ಒಳಾಂಗಣದಾದ್ಯಂತ ಸಾಫ್ಟ್-ಟಚ್ ಪ್ಯಾನೆಲ್‌ಗಳನ್ನು ಮತ್ತು ಆಧುನಿಕ, ಉನ್ನತ ಮಟ್ಟದ ಭಾವನೆಗಾಗಿ ಫ್ಲೋಟಿಂಗ್ ಆರ್ಮ್‌ರೆಸ್ಟ್ ಅನ್ನು ಸಹ ನೀಡಲಾಗಿದೆ.

ಸುರಕ್ಷತೆಯ ವಿಷಯದಲ್ಲಿ, ಟಾಟಾ ಸಿಯೆರಾದ ಲೆವೆಲ್ 2 ADAS ಸೂಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್ ಬ್ಲೈಂಡ್ ಸ್ಪಾಟ್ ಡಿಟೆಕ್ಟರ್‌ಗಳು, 21 ಕಾರ್ಯಗಳನ್ನು ಹೊಂದಿರುವ ESP ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ. ಇದು ಕಾರಿಗೆ ಅತ್ಯಾಧುನಿಕ ಸೇಫ್ಟಿ ಫೀಚರ್ಸ್ ಅನ್ನು ಒದಗಿಸುವುದಲ್ಲದೆ ಪ್ರಯಾಣಿಕರಿಗೆ ಸಂಭವನೀಯ ಅಪಘಾತಗಳಿಂದ ರಕ್ಷಣೆ ಒದಗಿಸುತ್ತದೆ.

More from DriveSpark

Article Published On: Saturday, November 29, 2025, 14:49 [IST]
English summary
Tata sierra enters a new era best in its class
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+