Tata Sierra: ವಿಶ್ವಕಪ್ ವಿಜೇತ ವನಿತೆಯರಿಗೆ ಟಾಟಾ ಗೌರವ.. ಹೊಸ ಸಿಯೆರಾ ಗಿಫ್ಟ್ ನೀಡುವುದಾಗಿ ಘೋಷಣೆ!

ನವಿ ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯ ಅದ್ದೂರಿಯಾಗಿ ಮುಕ್ತಾಯಗೊಂಡಿತು. ದಕ್ಷಿಣ ಆಫ್ರಿಕಾ ವಿರುದ್ಧ ಹರ್ಮನ್‌ಪ್ರೀತ್ ಕೌರ್ ಪಡೆ ಗೆದ್ದು ಬೀಗಿತು. ಈ ಮೂಲಕ ಟೀಂ ಇಂಡಿಯಾ ವನಿತೆಯರು ಚೊಚ್ಚಲ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ ಸದ್ಯ, ವಿಜೇತ ಮಹಿಳಾ ತಂಡಕ್ಕೆ ಜನಪ್ರಿಯ ವಾಹನ ತಯಾರಕ ಕಂಪನಿ 'ಟಾಟಾ ಮೋಟಾರ್ಸ್' ಬಿಗ್ ಗಿಫ್ಟ್ ಘೋಷಣೆ ಮಾಡಿದೆ.

ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಭಾರತದ ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ ಹೊಚ್ಚ ಹೊಸ' ಸಿಯೆರಾ' ಎಸ್‌ಯುವಿ ಉಡುಗೊರೆಯಾಗಿ ನೀಡವುದಾಗಿ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಹೇಳಿದೆ. ಅತಿ ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗಲಿದೆ. ಮೊದಲ ಬ್ಯಾಚ್‍ನ ಟಾಪ್ ಎಂಡ್ ಮಾಡೆಲ್‌ಗಳು ವೀರ ವನಿತೆಯರಿಗೆ ಲಭ್ಯವಾಗಲಿವೆ.

Tata Sierra Suv Gift For Women World Cup Winning Team Details

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಸಿಇಒ ಶೈಲೇಶ್ ಚಂದ್ರ ಅವರು, 'ಭಾರತದ ಮಹಿಳಾ ಕ್ರಿಕೆಟ್ ತಂಡವು ಅದ್ಭುತ ಪ್ರದರ್ಶನದಿಂದ ಇಡೀ ರಾಷ್ಟ್ರ ಹೆಮ್ಮೆಪಡುವಂತೆ ಮಾಡಿದೆ. ಅವರ ದೃಢನಿಶ್ಚಯ ಹಾಗೂ ನಂಬಿಕೆಯ ಶಕ್ತಿ ಪ್ರತಿಯೊಬ್ಬರಿಗೂ ಸ್ಫೂರ್ತಿ. ಈ ಸಾಧಕರಿಗೆ ಟಾಟಾ ಸಿಯೆರಾ ಉಡುಗೊರೆಯಾಗಿ ನೀಡುತ್ತಿರುವುದು ಸಂತಸ ತಂದಿದೆ' ಎಂದು ಹೇಳಿದ್ದಾರೆ.

ಟಾಟಾ ಸಿಯೆರಾ (Tata Sierra) ವಿಶೇಷತೆಗಳೇನು:

ಇದು ಪ್ರಮುಖ ಎಸ್‌ಯುವಿಯಾಗಿದ್ದು, ನವೆಂಬರ್ 25 ರಂದು ಮಾರಾಟಕ್ಕೆ ಬರಲಿದೆ. ಈ ಕಾರು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ರೂ.11 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಮೊದಲಿಗೆ ಐಸಿಇ (ಪೆಟ್ರೋಲ್/ ಡೀಸೆಲ್), ಆ ಬಳಿಕ ಎಲೆಕ್ಟ್ರಿಕ್ ಚಾಲಿತ ಪವರ್‌ಟ್ರೇನ್ ಆಯ್ಕೆಯಲ್ಲಿ ಮಾರಾಟಕ್ಕೆ ಬರಲಿದೆ ಎನ್ನಲಾಗಿದೆ.

ನೂತನ ಸಿಯೆರಾ ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದೆ. ಅದು ಟೀಸರ್ ವಿಡಿಯೋ ಮೂಲಕ ದೃಢಪಟ್ಟಿದೆ. ಈ ಕಾರು ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ಈ ಕಾರು ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಟ್ರಿಪಲ್ ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಪ್ಯಾಸೆಂಜರ್-ಸೈಡ್ ಡಿಸ್​ಪ್ಲೇ) ಸ್ಟೀರಿಂಗ್ ವೀಲ್‌ನಲ್ಲಿ ಟಾಟಾ ಲೋಗೋ, ಟಚ್ ಬೇಸ್ಡ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಆಂಬಿಯೆಂಟ್ ಲೈಟಿಂಗ್‌ನ್ನು ಹೊಂದಿದೆ.

ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸುಲಭವಾಗಿ ಓಡಾಟ ನಡೆಸಬಹುದು. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ.

ಹೊಸ 'ಟಾಟಾ ಸಿಯೆರಾ'ಗೆ ಸಾಲು - ಸಾಲು ಪ್ರತಿಸ್ಪರ್ಧಿಗಳಿರಲಿವೆ. ಇದಕ್ಕೆ ಮಾರುತಿ ಸುಜುಕಿ ವಿಕ್ಟೋರಿಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಹ್ಯುಂಡೈ ಕ್ರೆಟಾ, ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್, ಹೋಂಡಾ ಎಲಿವೇಟ್‌, ಫೋಕ್ಸ್‌ವ್ಯಾಗನ್ ಟೈಗುನ್, ಎಂಜಿ ಹೆಕ್ಟರ್, ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್, ಸ್ಕೋಡಾ ಕುಶಾಕ್, ಮಹೀಂದ್ರಾ ಸ್ಕಾರ್ಪಿಯೋ ಎನ್ ಮತ್ತು ಎಂಜಿ ಆಸ್ಟರ್‌ ಸೇರಿದಂತೆ ಹಲವು ಕಾರುಗಳು ಪ್ರಬಲವಾದ ಎದುರಾಳಿಯಾಗಲಿವೆ.

More from DriveSpark

Article Published On: Wednesday, November 5, 2025, 22:57 [IST]
English summary
Tata sierra suv gift for women world cup winning team details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+