ಟಾಟಾ ಸಿಯೆರಾ SUV ಬಿಡುಗಡೆಗೆ ಕೇವಲ 5 ದಿನ ಬಾಕಿ: ಪ್ರಮುಖ ಮುಖ್ಯಾಂಶಗಳು, ವೈಶಿಷ್ಟ್ಯಗಳ ವಿವರ
ಟಾಟಾ ಸಿಯೆರಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಅನಾವರಣಗೊಂಡ ಈ SUV ವಿಶಿಷ್ಟ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್ ಮತ್ತು ಆಕರ್ಷಕ ಫೀಚರ್ಸ್ ಒಳಗೊಂಡಿದೆ. ಕಂಪನಿಯು ಇನ್ನೂ ಬಿಡುಗಡೆ ಮಾಡಿ SUV ಯ ಅಧಿಕೃತ ಬೆಲೆ ವಿವರಗಳನ್ನು ಘೋಷಿಸಬೇಕಿದೆ. ನವೆಂಬರ್ 25 ರಂದು ಬಿಡುಗಡೆಗೆ ಸಜ್ಜಾಗಿದ್ದು, ಬೆಲೆ ಸುಮಾರು 11 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕಾರು ಯಾವೆಲ್ಲಾ ಹೊಸ ವಿಷಯಗಳೊಂದಿಗೆ ಬರುತ್ತಿದೆ ನೋಡೋಣ ಬನ್ನಿ.
ಸುರಕ್ಷತೆ: ಟಾಟಾ ಮೋಟಾರ್ಸ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಮುಂಭಾಗದಲ್ಲಿ ಸಿಯೆರಾ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್-ಕೀಪ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸ್ವಯಂಚಾಲಿತ ತುರ್ತು ಬ್ರೇಕಿಂಗ್‌ನಂತಹ ಲೆವೆಲ್ 2 ADAS ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ.

ಎಂಜಿನ್: ಹೊಸ ಟಾಟಾ ಸಿಯೆರಾ ಬಹು ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಸಿಯೆರಾ 1.5-ಲೀಟರ್ ಟರ್ಬೊ-ಪೆಟ್ರೋಲ್ ಅನ್ನು ಸುಮಾರು 165 hp ಪವರ್ ಮತ್ತು 280 Nm ಟಾರ್ಕ್ ಅನ್ನು ನೀಡುತ್ತದೆ ಎಂದು ವರದಿಯಾಗಿದೆ, ಇದು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCT ಯೊಂದಿಗೆ ಜೋಡಿಯಾಗಿರುತ್ತದೆ. ಜೊತೆಗೆ 1.5-ಲೀಟರ್ ಡೀಸೆಲ್ ರೂಪಾಂತರವನ್ನು ಸಹ ನಿರೀಕ್ಷಿಸಲಾಗಿದೆ, ಇದು 118 hp ಪವರ್ ಮತ್ತು 260 Nm ಟಾರ್ಕ್ ಹೊರಹಾಕುತ್ತದೆ.
ವಿನ್ಯಾಸ: ಸಿಯೆರಾ SUV ಐದು ಬಾಗಿಲುಗಳು ಮತ್ತು ಹಲವಾರು ಆಧುನಿಕ ಸ್ಪರ್ಶಗಳೊಂದಿಗೆ ಡಿಸೈನ್ ಮಾಡಲಾಗಿದೆ. ಮುಂಭಾಗದಲ್ಲಿ ಪೂರ್ಣ-ಅಗಲದ LED ಲೈಟ್ ಬಾರ್, ಫ್ಲಶ್ ಡೋರ್ ಹ್ಯಾಂಡಲ್‌ಗಳು, ಫ್ಲೋಟಿಂಗ್-ರೂಫ್ ಪರಿಣಾಮವನ್ನು ಸೃಷ್ಟಿಸುವ ಬ್ಲಾಕ್-ಔಟ್ A, B ಮತ್ತು C-ಪಿಲ್ಲರ್‌ಗಳು ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ ಗಮನಾರ್ಹವಾದ 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಬರುತ್ತವೆ.

ಇಂಟೀರಿಯರ್: ತಂತ್ರಜ್ಞಾನ-ಭರಿತ ಕ್ಯಾಬಿನ್‌ನೊಂದಿಗೆ ಟ್ರಿಪಲ್-ಸ್ಕ್ರೀನ್ ವಿನ್ಯಾಸ ಹೊಂದಿದೆ. ಚಾಲಕನಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಮೀಸಲಾದ ಪ್ರಯಾಣಿಕರ ಪ್ರದರ್ಶನದ ಸ್ಕ್ರೀನ್ ನೀಡಲಾಗಿದೆ. ಪ್ರೀಮಿಯಂ ಸ್ಪರ್ಶಗಳಲ್ಲಿ ಪ್ರಕಾಶಿತ ಟಾಟಾ ಲೋಗೋ ಹೊಂದಿರುವ ನಾಲ್ಕು-ಸ್ಪೋಕ್ ಸ್ಟೀರಿಂಗ್ ವೀಲ್, ಸಾಪ್ಟ್-ಟಚ್ ಮೆಟೀರಿಯಲ್‌ಗಳೊಂದಿಗೆ ಸಂಯೋಜಿಸುವ ಡ್ಯಾಶ್‌ಬೋರ್ಡ್ ಸೇರಿವೆ.
ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್ಪ್ಲೇ ಮತ್ತು ಸೌಂಡ್‌ಬಾರ್ ನೊಂದಿಗೆ 12 - ಸ್ಪೀಕರ್ ಜೆಬಿಎಲ್ ಬ್ಲ್ಯಾಕ್ ಸೌಂಡ್ ಸಿಸ್ಟಮ್, ಪವರ್ರ್ಡ್ ಟೈಲ್ ಗೇಟ್, ಪವರ್ ಡ್ರೈವರ್ ಸೀಟ್, ರಿಯರ್ ವ್ಯೂ ಮಿರರ್ ಒಳಗೆ ಆಟೋ-ಡಿಮ್ಮಿಂಗ್ ಇನ್ ಸೈಡ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್ಲೆಸ್ ಚಾರ್ಜರ್, ರಿಯರ್ ಸನ್ ಶೇಡ್ಸ್, ಡ್ರೈವ್ ಮೋಡ್‌ಗಳು ಮತ್ತು ಆಂಬಿಯೆಂಟ್ ಲೈಟಿಂಗ್ ಒಳಗೊಂಡಿರುವ ಸಾಧ್ಯತೆಯಿದೆ.

ಲೆವೆಲ್-2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್): ಟಾಟಾ ಹ್ಯಾರಿಯರ್ ಹಾಗೂ ಸಫಾರಿಯಂತೆ 'ಸಿಯೆರಾ'ದಲ್ಲೂ ADAS ನೀಡಲಾಗಿದೆ. ಈ ಸೇಫ್ಟಿ ಪ್ಯಾಕೇಜ್ ಲೇನ್ ಕೀಪ್ ಅಸಿಸ್ಟ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ವಿವಿಧ ರಕ್ಷಣಾತ್ಮಕ ಅಂಶಗಳನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಸಂಭವನೀಯ ಅಪಾಯಗಳಿಂದ ರಕ್ಷಣೆ ನೀಡುತ್ತದೆ.
ಒಟ್ಟಾರೆ ಟಾಟಾ ಸಿಯೆರಾ ಭಾರತದ ಅತ್ಯಂತ ಪ್ರೀತಿಯ SUV ಪರಂಪರೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಹೊಸ ಪೀಳಿಗೆಗಾಗಿ ರೀ-ಡಿಸೈನ್ ಮಾಡಲಾದ ಹೊಸ ಟಾಟಾ ಸಿಯೆರಾ ತನ್ನ ಪರಂಪರೆ ಮತ್ತು ವಿಶಿಷ್ಟ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ಅನಾವರಣಗೊಂಡಿದೆ. ಹೊಸ ಟಾಟಾ ಸಿಯೆರಾಗಾಗಿ ಕಾತುರದಿಂದ ಕಾಯುತ್ತಿರುವವರಿಗೆ ನವೆಂಬರ್ 25, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಟಾಟಾ ಮೋಟಾರ್ಸ್ ತಿಳಿಸಿದೆ.


Click it and Unblock the Notifications








