TATA: ಶೋರೂಂ ಮುಂದೆ ಗ್ರಾಹಕರು ಕ್ಯೂ ನಿಲ್ಲುವರು, ಅತಿ ಶೀಘ್ರದಲ್ಲೇ ಹೊಸ ಟಾಟಾ ಕಾರು ಬಿಡುಗಡೆ.. ಬೆಲೆಯೂ ಅಗ್ಗ?

ಟಾಟಾ ಮೋಟಾರ್ಸ್ (Tata Motors) ಜಗಮೆಚ್ಚಿದ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ 1991 ರಿಂದ 2003 ರವರೆಗೆ 'ಸಿಯೆರಾ' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿತ್ತು. ಆದರೆ, ವಿವಿಧ ಕಾರಣಗಳಿಗೆ ಈ ಕಾರನ್ನು ಮಾರಾಟದಿಂದ ಸ್ಥಗಿತಗೊಳಿಸಲಾಗಿತ್ತು. ಸದ್ಯ, ಇದೇ 'ಸಿಯೆರಾ'ವನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ ಜನವರಿಯಲ್ಲಿ ಕೊನೆಗೊಂಡ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ'ದಲ್ಲೂ ಪ್ರದರ್ಶಿಲಾಗಿತ್ತು. ಈಗಾಗಲೇ, ನೂತನ 'ಟಾಟಾ ಸಿಯೆರಾ' ಹಲವು ಬಾರಿ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗಲೂ ಕಾಣಿಸಿಕೊಂಡಿದೆ.

ಎಲ್ಲವು ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳೇ (ನವೆಂಬರ್) ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿ ಅದ್ದೂರಿಯಾಗಿಯೂ ಮಾರಾಟಕ್ಕೆ ಬರಲಿದೆ ಎಂದು ವರದಿಯಾಗಿದೆ. ಆದರೆ, ಈ ಕುರಿತಂತೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

Tata Sierra Suv Likely Launch In November 2025 Expected Price Mileage And Features Details

ನೂತನ 'ಟಾಟಾ ಸಿಯೆರಾ' ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಈ ಕಾರಿನ ಇಂಧನ ಚಾಲಿತ ಮಾಡೆಲ್, ರೂ.10 ಲಕ್ಷ ದರವನ್ನು ಪಡೆದಿರಬಹುದು ಎನ್ನಲಾಗಿದೆ. ಹಾಗೆಯೇ ಎಲೆಕ್ಟ್ರಿಕ್ ಚಾಲಿತ ಮಾಡೆಲ್, ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ.

ನೂತನ 'ಟಾಟಾ ಸಿಯೆರಾ' ಎಸ್‌ಯುವಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿರಲಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಬಹುದು ಎನ್ನಲಾಗಿದೆ. ಜೊತೆಗಿದು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುವ ಸಾಧ್ಯತೆಯಿದೆ.

Tata Sierra Suv Likely Launch In November 2025 Expected Price Mileage And Features Details

ಈ ಕಾರು ಸ್ವಲ್ಪ ಮಟ್ಟಿಗೆ ಹೆಚ್ಚು ವಿಶಾಲವಾಗಿರಲಿದೆ. 4,300 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಹಾಗೂ 1,600 ಮಿ.ಮೀ ಎತ್ತರವು ಇರಲಿದೆ. 200 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,650 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಇಂಧನ ಚಾಲಿತ 'ಟಾಟಾ ಸಿಯೆರಾ' ಬಲಿಷ್ಠವಾದ 2 ಪವರ್‌ಟ್ರೇನ್‌ನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ. ಇದರ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 170 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದೆ ಎನ್ನಲಾಗಿದೆ.

Tata Sierra Suv Likely Launch In November 2025 Expected Price Mileage And Features Details

ಮತ್ತೊಂದು 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್, 170 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 350 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕಲಿದೆ ಎಂದು ಎಂದು ಹೇಳಲಾಗಿದೆ. ಈ ಕಾರು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಹೊಂದಿರುವ ನಿರೀಕ್ಷೆಯಿದೆ. ಸರಿ ಸುಮಾರು 20 ಕಿ.ಮೀ ವರೆಗೆ ಮೈಲೇಜ್ ಕೊಡಬಲ್ಲದು ಎಂದು ಅಂದಾಜಿಸಲಾಗಿದೆ.

ಹೊಸ 'ಟಾಟಾ ಸಿಯೆರಾ'ದ ಕ್ಯಾಬಿನ್ ವಿನ್ಯಾಸವು ಚೆನ್ನಾಗಿರಲಿದೆ. ಒಟ್ಟು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಜಾಸ್ತಿ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 450 ಲೀ. ಸಾಮರ್ಥ್ಯದ ಬೂಟ್ ಸ್ಪೇನ್‌ನ್ನು ಒಳಗೊಂಡಿರಬಹುದು ಎನ್ನಲಾಗಿದೆ. 14.5 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10 ಜೆಬಿಎಲ್ ಸ್ಪೀಕರ್ ಸೌಂಡ್ ಸಿಸ್ಟಮ್, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿರಲಿದೆ. ಪ್ರಯಾಣಿಕರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಲ್-ವೀಲ್ ಡಿಸ್ಕ್ ಬ್ರೇಕ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.

More from DriveSpark

Article Published On: Friday, October 10, 2025, 11:16 [IST]
English summary
Tata sierra suv likely launch in november 2025 expected price mileage and features details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+