Tata Sierra Suv: ಹೊಸ ಟಾಟಾ ಸಿಯೆರಾ ಕಾರಿನ ವೇರಿಯೆಂಟ್‌ವಾರು ಫೀಚರ್‌ಗಳ ಕುರಿತ ಪ್ರಮುಖ ವಿವರಗಳು!
ನಿನ್ನೆ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಇದು ಅತ್ಯಾಧುನಿಕ ವಿನ್ಯಾಸವನ್ನು ಒಳಗೊಂಡಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ರೂ.11.49 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಕಾಂಪ್ಲಿಶ್ಡ್ ಹಾಗೂ ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ. ಬನ್ನಿ.. ಈ ರೂಪಾಂತರಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಸ್ಮಾರ್ಟ್ ಪ್ಲಸ್ (Smart Plus):
ಇದು ವಿವಿಧ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಬಹುಮುಖ್ಯವಾಗಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, 17 ಇಂಚಿನ ಸ್ಟೀಲ್ ವೀಲ್‌ಗಳು, ಟಿಲ್ಟ್ - ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಕೀಲೆಸ್ ಎಂಟ್ರಿ ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಮ್ಯಾನುವಲ್ ಎಸಿ, ರೇರ್ ಎಸಿ ವೆಂಟ್‌ಗಳು, ಟೈಪ್-ಎ 45ಡಬ್ಲ್ಯೂ - ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳು ಹಾಗೂ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಪ್ಯೂರ್ (Pure):
ಈ ರೂಪಾಂತರವು 'ಸ್ಮಾರ್ಟ್ ಪ್ಲಸ್'ನಂತೆ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ. ಇದರೊಂದಿಗೆ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಶಾರ್ಕ್‌ಫಿನ್ ಆಂಟೆನಾ, ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್‌ಗಳು, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8-ಸ್ಪೀಕರ್ ಆಡಿಯೊ ಸಿಸ್ಟಮ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್-ಡಿಸೆಂಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ರೇರ್‌ವ್ಯೂ ಕ್ಯಾಮೆರಾವನ್ನು ಹೊಂದಿದೆ.
ಪ್ಯೂರ್ ಪ್ಲಸ್ (Pure Plus):
ಇದೊಂದು 'ಟಾಟಾ ಸಿಯೆರಾ'ದ ಪ್ರಮುಖ ರೂಪಾಂತರವಾಗಿದೆ. 'ಪ್ಯೂರ್'ನಂತೆಯೇ ಇದೆ. ಅದರೊಂದಿಗೆ 17 ಇಂಚಿನ ಅಲಾಯ್ ವೀಲ್‌ಗಳು, ಆಟೋಮೆಟಿಕ್ ಹೆಡ್‌ಲೈಟ್‌ಗಳು, ರೈನ್-ಸೆನ್ಸಿಂಗ್ ವಿಂಡ್‌ಶೀಲ್ಡ್ ವೈಪರ್‌ಗಳು, ಪನೋರಮಿಕ್ ಸನ್‌ರೂಫ್, ಡುಯಲ್ ಜೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ತನ್ನದಾಗಿಸಿಕೊಂಡಿದೆ.
ಅಡ್ವೆಂಚರ್ (Adventure):
ಈ ರೂಪಾಂತರವು 'ಪ್ಯೂರ್ ಪ್ಲಸ್'ನಂತೆ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಫ್ರಂಟ್ ಎಲ್ಇಡಿ ಫಾಗ್ ಲೈಟ್‌ಗಳು, ರೂಫ್ ರೈಲ್‌ಗಳು, ಸ್ಲೈಡಿಂಗ್ ರೇರ್ ಪಾರ್ಸೆಲ್ ಟ್ರೇ, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ ಸರೌಂಡ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.
ಅಡ್ವೆಂಚರ್ ಪ್ಲಸ್ (Adventure Plus):
ಇದು ಸಾಕಷ್ಟು ಚೆನ್ನಾಗಿದೆ. 'ಅಡ್ವೆಂಚರ್' ರೀತಿಯಲ್ಲಿಯೇ ಇದೆ. ಎಲ್ಇಡಿ ಮೂಡ್ ಲೈಟಿಂಗ್, ಕೋಲ್ಡ್ ಗ್ಲೋವ್ ಬಾಕ್ಸ್, 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡುಯಲ್ ಫ್ರಂಟ್ 65ಡಬ್ಲ್ಯೂ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು ಹಾಗೂ ಫ್ರಂಟ್ ಸೀಟ್-ಬ್ಯಾಕ್ ಪಾಕೆಟ್‌ಗಳನ್ನು ಹೊಂದಿದೆ.
ಅಕಾಂಪ್ಲಿಶ್ಡ್ & ಅಕಾಂಪ್ಲಿಶ್ಡ್ ಪ್ಲಸ್ (Accomplished & Accomplished Plus):
ಈ ರೂಪಾಂತರವು 'ಅಡ್ವೆಂಚರ್ ಪ್ಲಸ್'ನಂತೆಯೇ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್, 12-ಸ್ಪೀಕರ್ ಬಿಜಿಎಲ್ ಸೌಂಡ್ ಸಿಸ್ಟಮ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಹೆಡ್-ಅಪ್ ಡಿಸ್ಪ್ಲೇ, ಬೈ ಎಲ್ಇಡಿ ಹೆಡ್‌ಲೈಟ್‌ಗಳು ಹಾಗೂ ರೇರ್ ಫಾಗ್ ಲೈಟ್‌ಗಳನ್ನು ಒಳಗೊಂಡಿದೆ.
ಕಾರ್ಯಕ್ಷಮತೆ & ಆಸನ ಆಯ್ಕೆ:
ಹೊಸ 'ಟಾಟಾ ಸಿಯೆರಾ' 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊ ಪೆಟ್ರೋಲ್ ಮತ್ತು 1.5-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.


Click it and Unblock the Notifications








