ಹೊಸ ಟಾಟಾ ಸಿಯೆರಾ VS ಕಿಯಾ ಸೆಲ್ಟೋಸ್ 2026: ಯಾವುದು ಬೆಸ್ಟ್? ಇಲ್ಲಿದೆ ಹೋಲಿಕೆ..
ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿಗಳ ಅಬ್ಬರ ಜೋರಾಗಿದೆ, ಇತ್ತೀಚೆಗೆ ಟಾಟಾ ಮೋಟಾರ್ಸ್ ಸಿಯೆರಾ ಎಸ್‌ಯುವಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಿಯಾ ಇಂಡಿಯಾ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಅನ್ನು ಅನಾವರಣಗೊಳಿಸಿದೆ. ಹೊಸ ಸೆಲ್ಟೋಸ್ ರೂ.25,000 ಟೋಕನ್ ಮೊತ್ತಕ್ಕೆ ಬುಕಿಂಗ್ ಆರಂಭವಾಗಿದ್ದು, ಜನವರಿ 2, 2026 ರಂದು ಬೆಲೆ ಘೋಷಣೆಯಾಗಲಿದೆ. ನೀವು ಶೀಘ್ರದಲ್ಲೇ SUV ಖರೀದಿಸಲು ಯೋಜಿಸುತ್ತಿದ್ದರೆ, ಈ ಎರಡು ಮಾಡಲ್‌ಗಳನ್ನು ಅನ್ವೇಷಿಸುತ್ತಿದ್ದರೆ, ಹೊಸ ತಲೆಮಾರಿನ 2026 ಕಿಯಾ ಸೆಲ್ಟೋಸ್ ಮತ್ತು ಟಾಟಾ ಸಿಯೆರಾದ ಪ್ರಮುಖ ವಿಶೇಷಣಗಳ ಹೋಲಿಕೆ ಇಲ್ಲಿದೆ.
ಆಯಾಮಗಳು: ಹೊಸ ಟಾಟಾ ಸಿಯೆರಾ ದೊಡ್ಡ ಗಾತ್ರದಲ್ಲಿದ್ದು ಉತ್ತಮ ಕ್ಯಾಬಿನ್ ಸ್ಥಳಾವಕಾಶವನ್ನು ನೀಡುತ್ತದೆ. 4,340 ಎಂಎಂ ಉದ್ದ, 1,841 ಎಂಎಂ ಅಗಲ ಮತ್ತು 1,715 ಎಂಎಂ ಎತ್ತರವಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,730 ಎಂಎಂ ವೀಲ್ ಬೇಸ್‌ನ್ನು ಒಳಗೊಂಡಿದೆ. ಮಿಡ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಇದು ಅತ್ಯುತ್ತಮ ಆಯಾಮಗಳಾಗಿದ್ದರು 2026 ಕಿಯಾ ಸೆಲ್ಟೋಸ್ ಇದಕ್ಕಿಂದ ದೊಡ್ಡದಾಗಿದೆ.

2026 ಕಿಯಾ ಸೆಲ್ಟೋಸ್ ವಿಷಯಕ್ಕೆ ಬಂದರೆ ಕಾರಿನಲ್ಲಿ ಹೆಚ್ಚಿನ ಸ್ಥಳ, ಸೌಕರ್ಯ ವರ್ಧಿತ ಆಯಾಮಗಳೊಂದಿಗೆ ಹೊಸ ಸೆಲ್ಟೋಸ್ ಈಗ 4,460 ಮಿ.ಮೀ ಉದ್ದ ಮತ್ತು 1,830 ಮಿ.ಮೀ ಅಗಲವನ್ನು ಹೊಂದಿದೆ. 2,690 ಎಂಎಂ ವೀಲ್‌ಬೇಸ್‌ನೊಂದಿಗೆ ದೊಡ್ಡ ಕ್ಯಾಬಿನ್ ಸ್ಥಳವನ್ನು ಪಡೆದುಕೊಂಡಿದೆ. ಈ ವಿಭಾಗದಲ್ಲಿನ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿನ ಸೆಲ್ಟೋಸ್ ಎದ್ದು ಕಾಣುತ್ತದೆ.
ಎಂಜಿನ್: ಹೊಸ ಟಾಟಾ ಸಿಯೆರಾ ಎಸ್‌ಯುವಿ 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.5-ಲೀ. ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.5-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ & 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17 ರಿಂದ 20 ಕಿ.ಮೀವರೆಗೆ ಮೈಲೇಜ್ ಕೊಡಬಹುದು ಎಂದು ಹೇಳಲಾಗಿದೆ.

ಹೊಸ ಕಿಯಾ ಸೆಲ್ಟೋಸ್‌ನಲ್ಲಿ ಸ್ಮಾರ್ಟ್‌ಸ್ಟ್ರೀಮ್ G1.5 ಪೆಟ್ರೋಲ್ (115PS, 144Nm) ಎಂಜಿನ್, ಸ್ಮಾರ್ಟ್‌ಸ್ಟ್ರೀಮ್ G1.5 T-GDI ಪೆಟ್ರೋಲ್ (160PS, 253Nm) ಎಂಜಿನ್ ಅಥವಾ 1.5l CRDi VGT ಡೀಸೆಲ್ (116PS, 250Nm) ಎಂಜಿನ್‌ಗಳು ಆಯ್ಕೆಯಲ್ಲಿ ಸಿಗಲಿವೆ. ಚಾಲನಾ ನಮ್ಯತೆಗಾಗಿ 6- ಸ್ಪೀಡ್ MT, 6-ಸ್ಪೀಡ್ iMT, IVT, 7DCT ಮತ್ತು 6AT ಗೇರ್‌ಬಾಕ್ಸ್ ಆಯ್ಕೆಗಳು ಸೇರಿವೆ.
ಫೀಚರ್ಸ್: ಹೊಸ ಟಾಟಾ ಸಿಯೆರಾದಲ್ಲಿ ಟ್ರಿಪಲ್-ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಪ್ಯಾಸೆಂಜರ್-ಸೈಡ್ ಡಿಸ್ಪ್ಲೇ), ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್, 12-ಸ್ಪೀಕರ್ ಸೌಂಡ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ರೇರ್-ಎಸಿ ವೆಂಟ್‌ಗಳು, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ.

ಕಿಯಾ ಸೆಲ್ಟೋಸ್ ವಿಷಯಕ್ಕೆ ಬಂದರೆ ದೊಡ್ಡ 75.18 ಸೆಂ.ಮೀ (30-ಇಂಚಿನ) ಟ್ರಿನಿಟಿ ಪನೋರಮಿಕ್ ಡಿಸ್ಪ್ಲೇ ಪ್ಯಾನೆಲ್ ಹೊಂದಿದೆ. 10-ವೇ ಪವರ್ ಡ್ರೈವರ್ ಸೀಟ್, ORVM ಸೆಟ್ಟಿಂಗ್‌ಗಳೊಂದಿಗೆ ಸಿಂಕ್ ಮಾಡಲಾದ ಇಂಟಿಗ್ರೇಟೆಡ್ ಮೆಮೊರಿ ಡ್ರೈವರ್ ಸೀಟ್ ಮತ್ತು ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳನ್ನು ನೀಡಲಾಗಿದೆ. ಪ್ರಾಕ್ಸಿಮಿಟಿ ಅನ್‌ಲಾಕ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕಿಯಾ ಕನೆಕ್ಟ್ 2.0 ಸೂಟ್, ಓವರ್-ದಿ-ಏರ್ ಸಾಫ್ಟ್‌ವೇರ್ ನೀಡಲಾಗಿದೆ.
ಸುರಕ್ಷತೆ: ಹೊಸ ಟಾಟಾ ಸಿಯೆರಾದಲ್ಲಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಹೊಸ ಕಿಯಾ ಸೆಲ್ಟೋಸ್‌ನಲ್ಲಿ 6 ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕ್ ಸಿಸ್ಟಮ್ (ABS), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಬ್ಲೈಂಡ್ ವ್ಯೂ ಮಾನಿಟರ್, 360° ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರೋಲ್‌ಓವರ್ ಸೆನ್ಸರ್ ಮತ್ತು ರಿಯರ್ ಆಕ್ಯುಪೆಂಟ್ ಅಲರ್ಟ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಲೇನ್ ಕೀಪಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯಗಳೊಂದಿಗೆ ADAS ಲೆವೆಲ್ 2 ಸೂಟ್ ನೀಡಲಾಗಿದೆ.


Click it and Unblock the Notifications








