9-ಸೀಟರ್.. 8 ಲಕ್ಷ ಬೆಲೆ.. ಮತ್ತೆ ಹೊಸ ರೂಪದಲ್ಲಿ ಜನಮೆಚ್ಚಿದ ಟಾಟಾ ಸುಮೋ ಮಾರಾಟಕ್ಕೆ?

ಟಾಟಾ ಸುಮೋ (Tata Sumo) ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದೆ. 1994ರಲ್ಲಿ ಈ ಕಾರನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅಂದಿನಿಂದ 2019 ರವರೆಗೆ ದೇಶೀಯ ರಸ್ತೆಯಲ್ಲಿ ಅಬ್ಬರಿಸಿತ್ತು. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದರು. ಆದರೆ, ನಾನಾ ಕಾರಣಗಳಿಗೆ 'ಸುಮೋ' ಮಾರಾಟವನ್ನು ಕಂಪನಿಯು ಸ್ಥಗಿತಗೊಳಿಸಿ, 6 ವರ್ಷಗಳೇ ಉರುಳಿದಿದೆ. ಆಗ್ಗಾಗ್ಗೆ ಟಾಟಾ ಕಂಪನಿಯು ಇದೇ ಸುಮೋವನ್ನು ಹೊಸ ರೂಪದಲ್ಲಿ ಮತ್ತೆ ಮಾರಾಟಕ್ಕೆ ತರಬಹುದು ಎಂಬ ಬಗ್ಗೆ ಇಂಟರ್‌ನೆಟ್‌ನಲ್ಲಿಯೂ ಚರ್ಚೆಯಾಗುತ್ತಿರುತ್ತದೆ. ಅದರ ಹೊರತಾಗಿ ಕಂಪನಿಯು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಒಂದೊಮ್ಮೆ 'ಟಾಟಾ ಸುಮೋ'ವನ್ನು ಮತ್ತೆ ಪರಿಚಯಿಸಿದರೆ ಹೇಗೆಲ್ಲ ಇರಬಹುದು.. ಬನ್ನಿ ತಿಳಿಯೋಣ.

ಬೆಲೆ (Price):

ಎಲ್ಲವೂ ಅಂದುಕೊಂಡಂತೆ ನಡೆದು ಹೊಚ್ಚ ಹೊಸ 'ಟಾಟಾ ಸುಮೋ' ಎಂಪಿವಿ ಬಿಡುಗಡೆಯಾಗಿ ಬಿಟ್ಟರೆ, ಅದು ಅತಿ ಕಡಿಮೆ ಬೆಲೆಯಲ್ಲಿಯೂ ಖರೀದಿಗೆ ದೊರೆಯಬಹುದು ಎಂದು ಹೇಳಲಾಗಿದೆ. ಕನಿಷ್ಠ ರೂ.8 ಲಕ್ಷ ಹಾಗೂ ಗರಿಷ್ಠ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಊಹಿಸಲಾಗಿದ್ದು, ಮಧ್ಯಮ ವರ್ಗದವರು ಕೂಡ ಸುಲಭವಾಗಿ ಕೊಂಡುಕೊಳ್ಳಬಹುದು ಎನ್ನಲಾಗಿದೆ.

Tata Sumo Expected To Relaunch Price Mileage And Features Details

ವಿನ್ಯಾಸ (Design):

ಮರು ಮಾರಾಟಕ್ಕೆ ಬರಲಿದೆ ಎಂದು ಅಂದಾಜಿಸಲಾಗಿರುವ 'ಸುಮೋ' ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿರುವ ಎಲ್ಲ ಸಾಧ್ಯತೆಗಳಿವೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಪಡೆದಿರಲಿದ್ದು, ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಾಗುವ ನಿರೀಕ್ಷೆಯಿದೆ.

ಆಸನ ಆಯ್ಕೆ (Seating Capacity):

ಹೊಸ ಟಾಟಾ ಸುಮೋ ಎಂಪಿವಿ 7 ಅಥವಾ 9 ಆಸನಗಳೊಂದಿಗೆ ಬಿಡುಗಡೆಯಾಗಬಹುದು ಎನ್ನಲಾಗಿದೆ. ಆಗೊಮ್ಮೆ ಇಷ್ಟೇ ಆಸನ ಆಯ್ಕೆ ವ್ಯವಸ್ಥೆಯಲ್ಲಿ ಮಾರಾಟಕ್ಕೆ ಬಂದರೆ, ಎರಡು ಕುಟುಂಬ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣ ಮಾಡಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ.

Tata Sumo Expected To Relaunch Price Mileage And Features Details

ಕಾರ್ಯಕ್ಷಮತೆ (Performance):

ನೂತನ ಸುಮೋ ಎಂಪಿವಿಯು ಬಲವಾದ ಪವರ್‌ಟ್ರೇನ್‌ನ್ನು ಹೊಂದಿರಬಹುದು. ವಿಶೇಷವಾಗಿ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಆಯ್ಕೆಯನ್ನು ಒಳಗೊಂಡಿರಬಹುದು ಎನ್ನಲಾಗಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿರುವ ನಿರೀಕ್ಷೆಯಿದ್ದು, 20 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ವೈಶಿಷ್ಟ್ಯಗಳು (Features):

ಈ ಕಾರು ಹಲವು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯೂ ಇದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, 4-ಸ್ಪೀಕರ್ ಸೆಟಪ್‌, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್, ಯುಎಸ್‌‍ಬಿ-ಸಿ ಚಾರ್ಜಿಂಗ್ ಪೋರ್ಟ್‌ ಹಾಗೂ ರೇರ್ ಎಸಿ ವೆಂಟ್‌ಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.

Tata Sumo Expected To Relaunch Price Mileage And Features Details

ಸುರಕ್ಷತಾ ವೈಶಿಷ್ಟ್ಯಗಳು (Safety Features):

ಇದು ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸಲಿದೆ ಎನ್ನಲಾಗಿದೆ. ಬಹುಮುಖ್ಯವಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯೂ ಇದೆ.

ಇನ್ನು, ಹೊಸ ರೂಪದಲ್ಲಿ 'ಸುಮೋ' ಬಿಡುಗಡೆಯಾಗುತ್ತದೆ ಎಂಬ ವಿಚಾರವು ಕೇವಲ ವದಂತಿಯಾಗಿದೆ. ಈ ಎಂಪಿವಿಯನ್ನು ಮರು ಮಾರಾಟಕ್ಕೆ ತರುವ ಕುರಿತಂತೆ ಕಂಪನಿಯ ಕಡೆಯಿಂದ ಯಾವುದೇ ವಿವರಗಳು ಲಭ್ಯವಾಗಿಲ್ಲ. ಆಗೊಮ್ಮೆ ಎಲ್ಲ ಅಡೆತಡೆಗಳನ್ನು ಮೀರಿ 'ಟಾಟಾ ಸುಮೋ'ವನ್ನು ಪರಿಚಯಿಸಿದರೆ, ಮಧ್ಯಮ ವರ್ಗದ ಜನರ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

Article Published On: Friday, August 1, 2025, 15:30 [IST]
English summary
Tata sumo expected to relaunch price mileage and features details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+