Tata: ಬಹುಬೇಡಿಕೆಯ ಅಗ್ಗದ ಟಾಟಾ ಕಾರು: ಕೇವಲ 5 ಲಕ್ಷ ಬೆಲೆ... 28.06 ಕಿ.ಮೀ ಮೈಲೇಜ್
ಭಾರತದಲ್ಲಿ ಗುಣಮಟ್ಟದ ಕಾರುಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದ್ದು, ಸುರಕ್ಷತೆ ವಿಚಾರದಲ್ಲಿ ಗ್ರಾಹಕರು ತುಂಬಾ ಪರಿಶೀಲಿಸುತ್ತಿದ್ದಾರೆ. ಅಗ್ಗದ ಬೆಲೆಗೆ ಸುರಕ್ಷಿತ ಕಾರುಗಳು ಸಿಕ್ಕರೆ ಮುಗಿಬಿದ್ದು ಖರೀದಿಸುತ್ತಾರೆ. ಅಂತಹ ಒಂದು ಕಾರೆಂದರೆ 'ಟಾಟಾ ಟಿಯಾಗೋ'. ಟಾಟಾ ಟಿಯಾಗೊ ಸದ್ಯ 2025 ರಲ್ಲಿ ಅತ್ಯಂತ ಕೈಗೆಟುಕುವ ಕಾರಾಗಿದ್ದು, ಉತ್ತಮ ಮಾರಾಟ ಕಾಣುತ್ತಿದೆ. ಈ ಕಾರು ಬಿಡುಗಡೆಯಾಗಿ ಈಗ ಸುಮಾರು ಹತ್ತು ವರ್ಷ ಕಳೆದಿದ್ದರೂ, ಟಾಟಾ ಮೋಟಾರ್ಸ್ ನಿರಂತರ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯ ಸೇರ್ಪಡೆಗಳೊಂದಿಗೆ ಕಾರನ್ನು ಹೊಸದಾಗಿರಿಸಿದೆ.
ಹೊಸ ಟಾಟಾ ಟಿಯಾಗೊ ಬೇಸ್ ವೇರಿಯೆಂಟ್ ಬೆಲೆಯು ರೂ. 5 ಲಕ್ಷದಿಂದ ಪ್ರಾರಂಭವಾಗಲಿದ್ದು, ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 8.45 (ಎರಡೂ ಎಕ್ಸ್ ಶೊರೂಂ ಬೆಲೆಗಳು) ಲಕ್ಷವಾಗುತ್ತದೆ. ಟಿಯಾಗೊವನ್ನು 12 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಈ ಕಾರು ನಿಮಗೆ ಪೆಟ್ರೋಲ್, ಎಲೆಕ್ಟ್ರಿಕ್, ಸಿಎನ್‌ಜಿ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ ತುಂಬಾ ಬೇಡಿಕೆ ಹೊಂದಿರುವ ಈ ಕಾರು ಫೆಬ್ರವರಿ 2025 ರಲ್ಲಿ ಟಿಯಾಗೊ ಐಸಿಇ (ಇಂಧನ ಚಾಲಿತ) ಮತ್ತು ಎಲೆಕ್ಟ್ರಿಕ್ ಆವೃತ್ತಿಯ ಸುಮಾರು 7,000 ಯುನಿಟ್ ಕಾರುಗಳು ಮಾರಾಟವಾಗಿರುವುದಾಗಿ ವರದಿ ಹೇಳಿದೆ. ಸುರಕ್ಷತೆ ವಿಷಯದಲ್ಲೂ ಉತ್ತಮ ಹೆಸರು ಮಾಡಿರುವ ಈ ಪುಟ್ಟ ಕಾರು, 2020 ರಲ್ಲಿ ನಡೆಸಿದ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.
ಹೊಸ ಟಾಟಾ ಟಿಯಾಗೊ ಕಾರು, ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ನೀಡಲಿದ್ದು, 1.2-ಲೀ. ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ವೇರಿಯೆಂಟ್‌ಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿದೆ. 19.43 ರಿಂದ 28.06 (ಸಿಎನ್‌ಜಿ) ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.

ಟಿಯಾಗೊದಲ್ಲಿ ಸ್ಟ್ತಾಂಡರ್ಡ್ ಆಗಿ ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್ ಸ್ಟಾಪ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್, ಹೊಸ ಫ್ರೀ-ಫ್ಲೋಟಿಂಗ್ 10.25-ಇಂಚಿನ ಟಚ್ ಸ್ಕ್ರೀನ್, ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಸಹ ನೀಡಲಾಗಿದೆ.
ಇವಿಷ್ಟೆ ಅಲ್ಲದೇ ಟಾಟಾ ಮೋಟಾರ್ಸ್ ಟಿಯಾಗೊದಲ್ಲಿ ಆಡಿಯೊ ಸಿಸ್ಟಮ್ ಅನ್ನು 8 - ಸ್ಪೀಕರ್ ಸೆಟಪ್ ನಿಂದ ಬೇಸಿಕ್ 4 - ಸ್ಪೀಕರ್ ಸೌಂಡ್ ಸಿಸ್ಟಮ್ ಗೆ ಇಳಿಸಿದೆ. ರಿವರ್ಸ್ ಕ್ಯಾಮೆರಾ, 4-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡೋರ್ ಸ್ಥಿತಿ, ಟೈರ್ ಪ್ರೆಶರ್ ಮಾನಿಟರಿಂಗ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೇನ್ ಸೆನ್ಸಿಂಗ್ ವೈಪರ್ ಮತ್ತು ಆಟೋ-ಫೋಲ್ಡ್ ಔಟ್ ಸೈಡ್ ಮಿರರ್‌ಗಳನ್ನು ಹೊಂದಿದೆ.

ಆನ್-ರೋಡ್ ಬೆಲೆ: ಬೆಂಗಳೂರಿನಲ್ಲಿ ಟಾಟಾ ಟಿಯಾಗೋ ಬೇಸ್ XE (ಪೆಟ್ರೋಲ್) ರೂಪಾಂತರವು, ರೂ.6 ಲಕ್ಷದವರೆಗೆ ಆನ್-ರೋಡ್ ದರವನ್ನು ಹೊಂದಿದೆ. ಈ ಕಾರನ್ನು ರೂ. 2 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ. 4 ಲಕ್ಷವರೆಗೆ ಸಾಲವಿರುತ್ತದೆ. ಅದಕ್ಕೆ ಶೇಕಡ 8 ಬಡ್ಡಿ ದರದಲ್ಲಿ 5 ವರ್ಷಗಳಿಗೆ ತಿಂಗಳಿಗೆ ರೂ. 8,000 ವರೆಗೆ ಇಎಂಐ ಕಟ್ಟಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications