ಕಳೆದ ತಿಂಗಳು ಈ 5 ಪ್ರಮುಖ ಕಾರುಗಳನ್ನು ಯಾರು ಖರೀದಿಸಿಲ್ಲ.. ಶೂನ್ಯ ಮಾರಾಟ ದಾಖಲು, ಯಾಕೆ?

ಭಾರತದ ವಾಹನೋದ್ಯಮವು ಉತ್ತಮವಾಗಿ ಪ್ರಗತಿಯಾಗುತ್ತಿದೆ. ಆದರೆ, ಕೆಲವು ಕಾರುಗಳನ್ನು ಗ್ರಾಹಕರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅದು ಸೆಪ್ಟೆಂಬರ್ ತಿಂಗಳಲ್ಲೂ ಮುಂದುವರಿದೆ. ಕಿಯಾ, ಮಾರುತಿ ಸುಜುಕಿ, ಸಿಟ್ರನ್ ಹಾಗೂ ನಿಸ್ಸಾನ್ ಕಂಪನಿಯ ಈ ಕಾರುಗಳನ್ನು ಒಬ್ಬನೇ ಒಬ್ಬ ಖರೀದಿದಾರನು ಕೊಂಡುಕೊಂಡಿಲ್ಲ. ಇದರಿಂದಾಗಿ ಶೂನ್ಯ ಮಾರಾಟ ದಾಖಲಾಗಿದೆ. ಬನ್ನಿ, ಆ ಕಾರುಗಳು ಯಾವುವು.. ಯಾವ ಕಾರಣಕ್ಕೆ ಮಾರಾಟವಾಗುತ್ತಿಲ್ಲ ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಕಿಯಾ ಇವಿ6 (Kia EV6):

ಇದೊಂದು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ 'ಫೇಸ್‌ಲಿಫ್ಟ್' ಮಾಡೆಲ್‌ನ್ನು ಬಿಡುಗಡೆಗೊಳಿಸಲಾಗಿತ್ತು. ನೂತನ 'ಇವಿ6' ಖರೀದಿ ಮೇಲೆ ಕಂಪನಿಯು ಭಾರೀ ರಿಯಾಯಿತಿ ನೀಡುತ್ತಿದ್ದರೂ ಮಾರಾಟ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಈ ಕಾರು ದುಬಾರಿ ಬೆಲೆಯನ್ನು ಹೊಂದಿದೆ. ಜೊತೆಗೆ ಬೇರೆ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಒಳ್ಳೆಯ ಬೇಡಿಕೆಯಿದೆ. ಹೀಗಾಗಿ 'ಇವಿ6' ಮಾರಾಟವು ಇಳಿಮುಖವಾಗುತ್ತಿದೆ ಎಂದು ಹೇಳಲಾಗಿದೆ.

These 5 Cars Have Zero Sales In September 2025 EV6 Ciaz X-Trail EV9 And C5 Aircross

ಹೊಚ್ಚ ಹೊಸ 'ಕಿಯಾ ಇವಿ6' ಎಸ್‌ಯುವಿ ರೂ.65.97 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 84 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 663 ಕಿಲೋಮಿಟರ್ ರೇಂಜ್ (ಮೈಲೇಜ್) ನೀಡುತ್ತದೆ. 5 ಆಸನಗಳನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz):

ಇದೊಂದು ಪ್ರೀಮಿಯಂ ಸೆಡಾನ್ ಆಗಿದೆ. ಮಾರ್ಚ್‌ನಲ್ಲಿ ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತು. ಡೀಲರ್‌ಶಿಪ್‌ಗಳಲ್ಲಿ ಉಳಿದ ಸ್ಟಾಕ್‌ನಷ್ಟೇ ಮಾರಾಟ ಮಾಡಲಾಗುತ್ತಿತ್ತು. ಅದರ ಹೊರತಾಗಿ ಈ ಸೆಪ್ಟೆಂಬರ್‌ನಲ್ಲಿ ಒಂದೇ ಒಂದು 'ಸಿಯಾಜ್' ಮಾರಾಟಗೊಂಡಿಲ್ಲ. ಬಹುಶಃ ಈ ಸೆಡಾನ್ ಮಾಡೆಲ್‌ಗಳೆಲ್ಲ ಖಾಲಿಯಾಗಿಬೇಕು ಎನ್ನಲಾಗದೆ.

These 5 Cars Have Zero Sales In September 2025 EV6 Ciaz X-Trail EV9 And C5 Aircross

ನೂತನ 'ಸಿಯಾಜ್' ರೂ.9.09 ಲಕ್ಷದಿಂದ ರೂ.11.88 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.5-ಲೀ. ಪೆಟ್ರೋಲ್ ಎಂಜಿನ್‌ ಮತ್ತು 5-ಸ್ಪೀಡ್ ಮ್ಯಾನುವಲ್/ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 20 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನಿಸ್ಸಾನ್ ಎಕ್ಸ್-ಟ್ರಯಲ್ (Nissan X-Trail):

ಈ ಎಸ್‌ಯುವಿಯನ್ನು 2024ರ ಆಗಸ್ಟ್ ತಿಂಗಳಲ್ಲಿ ಮಾರಾಟಕ್ಕೆ ತರಲಾಗಿತ್ತು. ಇದಕ್ಕೆ ಕಂಪನಿಯ ಡೀಲರ್‌ಶಿಪ್‌ಗಳು ದೊಡ್ಡ ರಿಯಾಯಿತಿ ನೀಡುತ್ತಿದ್ದರೂ ಶೂನ್ಯ ಮಾರಾಟವನ್ನು ದಾಖಲಿಸಿದೆ. ಇತರೆ ಕಂಪನಿ ಫ್ಯಾಮಿಲಿ ಕಾರುಗಳ ಖರೀದಿಯತ್ತ ಗ್ರಾಹಕರು ಮುಖ ಮಾಡಿರುವುದರಿಂದ 'ಎಕ್ಸ್-ಟ್ರಯಲ್' ಮಾರಾಟವು ಇಳಿಕೆಯಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದು ರೂ.48.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 7 ಆಸನಗಳನ್ನು ಹೊಂದಿದೆ.

These 5 Cars Have Zero Sales In September 2025 EV6 Ciaz X-Trail EV9 And C5 Aircross

ಕಿಯಾ ಇವಿ9 (Kia EV9):

ಇದು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ದುಬಾರಿ ಬೆಲೆಯನ್ನು ಪಡೆದುಕೊಂಡಿರುವುದರಿಂದ ಮಾರಾಟ ಸಂಖ್ಯೆಯು ಕುಸಿತವಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಈ ಕಾರು ರೂ.1.30 ಕೋಟಿ ದರವನ್ನು ಒಳಗೊಂಡಿದೆ. 99.8 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 561 ಕಿಲೋಮಿಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಸಿಟ್ರನ್ ಸಿ5 ಏರ್‌ಕ್ರಾಸ್ (Citroen C5 Aircross):

ದೇಶೀಯ ಮಾರುಕಟ್ಟೆಯಲ್ಲಿರುವ ತೀವ್ರ ಪೈಪೋಟಿಯಿಂದ ಈ ಮಿಡ್-ಸೈಜ್ ಎಸ್‌ಯುವಿಯು ಖರೀದಿದಾರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಈ ಕಾರು ರೂ.37.32 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2.0-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 17.5 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಪಡೆದಿದೆ.

More from DriveSpark

Article Published On: Monday, October 13, 2025, 13:31 [IST]
English summary
These 5 cars have zero sales in september 2025 ev6 ciaz x trail ev9 and c5 aircross
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+