Petrol Price: ಇಲ್ಲಿ ಪೆಟ್ರೋಲ್ - ಡೀಸೆಲ್ ದರ ಏರಿಕೆ, ಕರ್ನಾಟಕದ ಯಾವ ನಗರದಲ್ಲಿ ಎಷ್ಟಿದೆ?

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ದರವನ್ನು ರೂ.2 ಏರಿಕೆ ಮಾಡಲಾಗಿದೆ. ನೂತನ ದರಗಳು ಇಂದಿನಿಂದಲೇ (ಜನವರಿ 1, 2025) ಜಾರಿಗೆ ಬಂದಿದೆ. ಈ ಹಿಂದೆ, ರೂ.94.26 ಇದ್ದ 1 ಲೀಟರ್ ಪೆಟ್ರೋಲ್ ಬೆಲೆ ರೂ. 96.26 ಆಗಿದೆ. ಅದೇ ರೀತಿಯಲ್ಲಿ ರೂ.84.48 ಇದ್ದ 1 ಲೀಟರ್ ಡೀಸೆಲ್ ದರ ರೂ.86.48ಕ್ಕೆ ಹೆಚ್ಚಳಗೊಂಡಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಪುದುಚೇರಿಯೇ ಅತಿಕಡಿಮೆ ಇಂಧನ ಬೆಲೆಯನ್ನು ಹೊಂದಿದೆ.

ಕರ್ನಾಟಕದಲ್ಲಿ ಹಲವು ತಿಂಗಳಿಂದ ಇಂಧನ ದರಗಳು ಯಥಾಸ್ಥಿತಿಯಲ್ಲಿವೆ. ಈ ಹಿಂದೆ, ಜುಲೈನಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆಯನ್ನು ರೂ.3.02 ಮತ್ತು ಡೀಸೆಲ್‌ ದರ ರೂ.3 ಹೆಚ್ಚಳ ಮಾಡಿತ್ತು. 'ಗುಡ್ ರಿಟರ್ನ್ಸ್' ಮಾಹಿತಿ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ರೂ.102.92 ಹಾಗೂ 1 ಲೀಟರ್ ಡೀಸೆಲ್ ದರ ರೂ.88.99 ದಾಖಲಾಗಿದೆ.

This Union Territory Administration Hike Petrol Diesel Price How Much In Karnataka Top Cities

ಮೈಸೂರಿನಲ್ಲಿ 1 ಲೀ. ಪೆಟ್ರೋಲ್ ದರ ರೂ.102.90 ಇದ್ದರೆ, 1 ಲೀ. ಡೀಸೆಲ್ ಬೆಲೆ ರೂ.88.97 ಆಗಿದೆ. ಮಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್‌ಗೆ ರೂ.102.22 ಮತ್ತು 1 ಲೀಟರ್ ಡೀಸೆಲ್‌ಗೆ ರೂ.88.33 ದಾಖಲಾಗಿದೆ. ಬೆಳಗಾವಿಯಲ್ಲಿ 1 ಲೀ. ಪೆಟ್ರೋಲ್ ದರ ರೂ.103.29 ಮತ್ತು 1 ಲೀ. ಡೀಸೆಲ್ ಬೆಲೆ ರೂ.89.37 ಇದೆ.

ಬಾಗಲಕೋಟೆಯಲ್ಲಿ 1 ಲೀ. ಪೆಟ್ರೋಲ್ ದರ ರೂ.103.62 ಆಗಿದ್ದರೆ, 1 ಲೀ. ಡೀಸೆಲ್ ಬೆಲೆ ರೂ.89.65 ಇದೆ. ಬಳ್ಳಾರಿಯಲ್ಲಿ 1 ಲೀಟರ್ ಪೆಟ್ರೋಲ್‌ಗೆ ರೂ.104.09 ಹಾಗೂ 1 ಲೀಟರ್ ಡೀಸೆಲ್‌ಗೆ ರೂ.90.20 ಆಗಿದೆ. ಚಾಮರಾಜನಗರದಲ್ಲಿ 1 ಲೀ. ಪೆಟ್ರೋಲ್ ದರ ರೂ.102.91 ಇದ್ದು, 1 ಲೀ. ಡೀಸೆಲ್ ಬೆಲೆ ರೂ.88.98 ದಾಖಲಾಗಿದೆ.

This Union Territory Administration Hike Petrol Diesel Price How Much In Karnataka Top Cities

ಚಿಕ್ಕಮಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ರೂ.103.26 ಇದ್ದರೆ, 1 ಲೀ. ಡೀಸೆಲ್ ಬೆಲೆ ರೂ.89.27 ಆಗಿದೆ. ಚಿಕ್ಕಬಳ್ಳಾಪುರದಲ್ಲಿ 1 ಲೀಟರ್ ಪೆಟ್ರೋಲ್‌ಗೆ ರೂ.103.27 ಮತ್ತು 1 ಲೀಟರ್ ಡೀಸೆಲ್‌ಗೆ ರೂ.89.31 ದಾಖಲಾಗಿದೆ. ಚಿತ್ರದುರ್ಗದಲ್ಲಿ 1 ಲೀ. ಪೆಟ್ರೋಲ್ ದರ ರೂ.104.14 ಹಾಗೂ 1 ಲೀ.90.23 ಡೀಸೆಲ್ ಬೆಲೆ ರೂ. ಇದೆ.

ದಾವಣಗೆರೆಯಲ್ಲಿ 1 ಲೀ. ಪೆಟ್ರೋಲ್ ದರ ರೂ.104.14 ಆಗಿದ್ದರೆ, 1 ಲೀ. ಡೀಸೆಲ್ ಬೆಲೆ ರೂ.90.23 ಇದೆ. ಧಾರವಾಡದಲ್ಲಿ 1 ಲೀಟರ್ ಪೆಟ್ರೋಲ್‌ಗೆ ರೂ.102.81 ಹಾಗೂ 1 ಲೀಟರ್ ಡೀಸೆಲ್‌ಗೆ ರೂ.88.92 ಆಗಿದೆ. ಗದಗದಲ್ಲಿ 1 ಲೀ. ಪೆಟ್ರೋಲ್ ದರ ರೂ.103.24 ಮತ್ತು 1 ಲೀ. ಡೀಸೆಲ್ ಬೆಲೆ ರೂ.89.32 ದಾಖಲಾಗಿದೆ.

ಕಲಬುರಗಿಯಲ್ಲಿ 1 ಲೀ. ಪೆಟ್ರೋಲ್ ದರ ರೂ.102.98 ಇದ್ದರೆ, 1 ಲೀ. ಡೀಸೆಲ್ ಬೆಲೆ ರೂ.89.07 ಆಗಿದೆ. ಹಾಸನದಲ್ಲಿ 1 ಲೀಟರ್ ಪೆಟ್ರೋಲ್‌ಗೆ ರೂ.102.90 ಮತ್ತು 1 ಲೀಟರ್ ಡೀಸೆಲ್‌ಗೆ ರೂ.88.79 ದಾಖಲಾಗಿದೆ. ಹಾವೇರಿಯಲ್ಲಿ 1 ಲೀ. ಪೆಟ್ರೋಲ್ ದರ ರೂ.103.76 ಹಾಗೂ 1 ಲೀ. ಡೀಸೆಲ್ ಬೆಲೆ ರೂ.88.78 ಇದೆ.

ಕೋಲಾರದಲ್ಲಿ 1 ಲೀ. ಪೆಟ್ರೋಲ್ ದರ ರೂ.103.15 ಆಗಿದ್ದರೆ, 1 ಲೀ. ಡೀಸೆಲ್ ಬೆಲೆ ರೂ.89.20 ಇದೆ. ಮಂಡ್ಯದಲ್ಲಿ 1 ಲೀಟರ್ ಪೆಟ್ರೋಲ್‌ಗೆ ರೂ.102.88 ಹಾಗೂ 1 ಲೀಟರ್ ಡೀಸೆಲ್‌ಗೆ ರೂ.88.96 ಆಗಿದೆ. ತುಮಕೂರಿನಲ್ಲಿ 1 ಲೀ. ಪೆಟ್ರೋಲ್ ದರ ರೂ.103.88 ಇದ್ದು, 1 ಲೀ. ಡೀಸೆಲ್ ಬೆಲೆ ರೂ.89.86 ದಾಖಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 1, 2025, 10:18 [IST]
English summary
This union territory administration hike petrol diesel price how much in karnataka top cities
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+