Acer Faster Awards: ಇಂದು ಏಸರ್ ಫಾಸ್ಟರ್ ಪ್ರಶಸ್ತಿ ಸಮಾರಂಭ.. ಯಾವ ಕಾರು & ಟೂ ವೀಲರ್‌ಗಳಿಗೆ ಸಿಗಲಿದೆ ಕಿರೀಟ?

ದೇಶದ ಆಟೋಮೋಟಿವ್ ಮಾಧ್ಯಮಗಳ ಒಕ್ಕೂಟವಾಗಿ 'ಫಾಸ್ಟರ್' ಗುರುತಿಸಿಕೊಂಡಿದೆ. ಗುರುಗ್ರಾಮದಲ್ಲಿಂದು ಜನಪ್ರಿಯ ಕಾರು & ದ್ವಿಚಕ್ರ ವಾಹನಗಳಿಗೆ ನೀಡಲಾಗುವ ಏಸರ್ ಫಾಸ್ಟರ್ ಪ್ರಶಸ್ತಿ (Acer Faster Awards - 2025) ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಸಂಜೆ 6.30ರ ಸುಮಾರಿಗೆ ಕಾರ್ಯಕ್ರಮ ಆರಂಭವಾಗಲಿದೆ. ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಇದೇ ಫೆ 26 & 27ರಂದು ಚೆನ್ನೈನ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್‌ನಲ್ಲಿ ಈ ಪ್ರಶಸ್ತಿಗಾಗಿ ವಾಹನಗಳನ್ನು ಆಯ್ಕೆ ಮಾಡಲು ಜ್ಯೂರಿಗಳ ಸಭೆಯನ್ನು ನಡೆಸಲಾಗಿತ್ತು ಅಲ್ಲಿ ಒಂದಷ್ಟು ವಾಹನಗಳನ್ನು ಅಂತಿಮ ಸುತ್ತಿಗೂ ನಾಮ ನಿರ್ದೇಶನ ಮಾಡಲಾಗಿದೆ. ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ವಿಗಾಗಿ 'ಏಸರ್'ನೊಂದಿಗೆ ಗಾರ್ವೇರ್ ಹೈ-ಟೆಕ್ ಫಿಲ್ಮ್ಸ್ ಮತ್ತು ರೆಡ್ ಬುಲ್ ಕಂಪನಿಗಳು ಕೂಡ ಜೊತೆಯಾಗಿವೆ.

Today Acer Faster Awards 2025 Ceremony Details

3ನೇ ಆವೃತ್ತಿಯ ಏಸರ್ ಫಾಸ್ಟರ್ ಪ್ರಶಸ್ತಿಗೆ ಆಯ್ಕೆ ಮಾಡಿದಂತೆ, ಈ ಬಾರಿಯ 4ನೇ ಆವೃತ್ತಿಯಲ್ಲೂ 2024ರ ಜನವರಿಯಿಂದ ಮಾರಾಟಕ್ಕೆ ಬಂದ ಎಲ್ಲ ಹೊಚ್ಚ ಹೊಸ ಕಾರುಗಳು & ದ್ವಿಚಕ್ರ ವಾಹನಗಳು ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದ್ದವು. ವಿನ್ಯಾಸ, ಕಾರ್ಯಕ್ಷಮತೆ ಹಾಗೂ ಸುರಕ್ಷತಾ ವೈಶಿಷ್ಟ್ಯಗಳು ಒಳಗೊಂಡಂತೆ ಹಲವು ಮಾನದಂಡಗಳ ಅನ್ವಯ ಪರೀಕ್ಷಿಸಿ, ಕೆಲವೊಂದು ವಾಹನಗಳನ್ನು ಅಂತಿಮ ಸುತ್ತಿಗೂ ಆಯ್ಕೆ ಮಾಡಲಾಗಿದೆ. ಕೆಲವೇ ಗಂಟೆಗಳಲ್ಲಿ ಅಂತಿಮ ಫಲಿತಾಂಶ ಲಭ್ಯವಾಗಲಿದೆ.

ಫಾಸ್ಟರ್ ಕುರಿತ ಸಂಕ್ಷಿಪ್ತ ವಿವರ: ಕನ್ನಡ, ತಮಿಳು, ತೆಲುಗು ಮಲಯಾಳಂ ಹಾಗೂ ಇಂಗ್ಲಿಷ್ ಒಳಗೊಂಡಂತೆ ಹಲವು ಭಾಷೆಗಳ 250 ಮಿಲಿಯನ್‌ಗಿಂತಲೂ ಅಧಿಕ ಮಾಸಿಕ ಡಿಜಿಟಲ್ ಓದುಗರನ್ನು ತಲುಪುವ ವಿವಿಧ ಆಟೋಮೋಟಿವ್ ಮಾಧ್ಯಮ ಸಂಸ್ಥೆಗಳ ಒಕ್ಕೂಟ ಈ ಫಾಸ್ಟರ್ ಆಗಿದೆ. ಈ ಸಂಘಟನೆ ಪ್ರತಿವರ್ಷವು ವರ್ಷದ ಕಾರು, ವರ್ಷದ ಬೈಕ್, ವರ್ಷದ ಪ್ರೀಮಿಯಂ ಕಾರು, ವರ್ಷದ ಪ್ರೀಮಿಯಂ ಬೈಕ್ ಸೇರಿದಂತೆ ಹತ್ತಾರು ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡುತ್ತದೆ.

ವಿಶೇಷವಾಗಿ ನಮ್ಮ 'ಡ್ರೈವ್‌ಸ್ಪಾರ್ಕ್' ಪೋರ್ಟಲ್ ಇದೇ ಫಾಸ್ಟರ್ ಒಕ್ಕೂಟದ ಭಾಗವಾಗಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮೊಂದಿಗೆ ಗೇರ್‌ಫ್ಲಿಕ್, ಮೋಟಾರಾಯ್ಡ್ಸ್, ಕಾರ್‌ಬ್ಲಾಗ್ ಇಂಡಿಯಾ, ಗಾಡಿವಾಡಿ ಹಾಗೂ ಪೈಲಟ್ ಆನ್ ವೀಲ್ಸ್ ಪೋರ್ಟಲ್‌ಗಳು ಸಹ ಈ ಒಕ್ಕೂಟದ ಸದಸ್ಯ ಆಟೋಮೋಟಿವ್ ಮಾಧ್ಯಮ ಸಂಸ್ಥೆಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 26, 2025, 9:58 [IST]
English summary
Today acer faster awards 2025 ceremony details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+