627 Km ರೇಂಜ್.. 5-ಸ್ಟಾರ್ ಸೇಫ್ಟಿ ರೇಟಿಂಗ್, ನಾಳೆ Tata Harrier EV ಎಡಬ್ಲ್ಯೂಡಿ ವೇರಿಯೆಂಟ್‌ಗಳ ಬೆಲೆ ಘೋಷಣೆ!

ಟಾಟಾ ಹ್ಯಾರಿಯರ್ ಇವಿ (Tata Harrier EV) ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದೇ 23 ರಂದು ಈ ಕಾರಿನ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಘೋಷಣೆ ಮಾಡಲಾಗಿದೆ. ಇವು ರೂ.21.49 ಲಕ್ಷದಿಂದ ರೂ.27.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿವೆ. ನಾಳೆ ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ರೂಪಾಂತರಗಳ ಬೆಲೆಯನ್ನು ಘೋಷಣೆ ಮಾಡಲಾಗುತ್ತದೆ. ಜುಲೈ 2 ರಿಂದ ಬುಕ್ಕಿಂಗ್ ಕೂಡ ಶುರುವಾಗಲಿದೆ. ಆಸಕ್ತ ಗ್ರಾಹಕರು ಸಮೀಪದ ಶೋರೂಂಗೆ ಭೇಟಿ ನೀಡಿ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡಬಹುದು.

ನೂತನ ಟಾಟಾ ಹ್ಯಾರಿಯರ್ ಇವಿಯನ್ನು ಭಾರತ್ ಎನ್‌ಸಿಎಪಿ (Bharat NCAP) ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 32 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 45 ಅಂಕಗಳನ್ನು ಗಳಿಸಿದೆ. ಈ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Tomorrow Tata Harrier EV AWD Variants Price Announce Details

ಈ ಎಲೆಕ್ಟ್ರಿಕ್ ಎಸ್‌ಯುವಿ ಪ್ರಯಾಣಿಕರ ಸುರಕ್ಷತೆಗಾಗಿ ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಆಲ್ ವೀಲ್ ಡಿಸ್ಕ್ ಬ್ರೇಕ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ನೂತನ ಹ್ಯಾರಿಯರ್ ಇವಿ ಅಡ್ವೆಂಚರ್, ಅಡ್ವೆಂಚರ್ ಎಸ್, ಫಿಯರ್‌ಲೆಸ್ ಪ್ಲಸ್ ಮತ್ತು ಎಂಪವರ್ಡ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. ಹೊರಭಾಗದಲ್ಲೂ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಟೆಲ್ತ್ ಬ್ಲ್ಯಾಕ್, ಎಂಪವರ್ಡ್ ಆಕ್ಸೈಡ್ ಹಾಗೂ ಪ್ಯೂರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

Tomorrow Tata Harrier EV AWD Variants Price Announce Details

ಇದು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು 502 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಈ ಕಾರು 4607 ಎಂಎಂ ಉದ್ದ, 2132 ಎಂಎಂ ಅಗಲ ಹಾಗೂ 1740 ಎಂಎಂ ಎತ್ತರವು ಇದೆ. ಹಾಗೆಯೇ 2741 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ ಹ್ಯಾರಿಯರ್ ಇವಿ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 65 ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 627 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 6.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವಾಗಿ 14.5-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೊರೊಮಿಕ್ ಸನ್‌ರೂಫ್, 10 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ.

ಸಾಮಾನ್ಯ ಟಾಟಾ ಹ್ಯಾರಿಯರ್ ಎಸ್‌ಯುವಿಯು ಖರೀದಿಗೆ ಲಭ್ಯ:

ಇದು ರೂ.15 ಲಕ್ಷದಿಂದ ರೂ.26.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 2-ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 16.8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಜೊತೆಗೆ 5 ಆಸನಗಳನ್ನು ಒಳಗೊಂಡಿದೆ. 12.3-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

More from DriveSpark

Article Published On: Thursday, June 26, 2025, 16:56 [IST]
English summary
Tomorrow tata harrier ev awd variants price announce details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+