2024 ರಲ್ಲಿ ಜನರ ಮನಗೆದ್ದು ಉತ್ತಮ ಮಾರಾಟ ಕಂಡ ಟಾಪ್-4 ಎಸ್‌ಯುವಿಗಳು!

2024 ರಲ್ಲಿ ಗ್ರಾಹಕರ ಮೇಲೆ ಎಸ್‌ಯುವಿಗಳ (SUV) ಪ್ರಭಾವ ಹೆಚ್ಚಿದಂತಿದೆ. ಭಾರತೀಯ ಗ್ರಾಹಕರ ಪ್ರಾಧಾನ್ಯತೆಗಳಲ್ಲಿ ಈ ಬದಲಾವಣೆ ಎಸ್‌ಯುವಿಗಳ ಮುಂದುವರೆದ ಪ್ರಭಾವವನ್ನು ತೋರಿಸುತ್ತಿದೆ. 2024 ರಲ್ಲಿ ಭಾರತದಲ್ಲಿ ಗ್ರಾಹಕರು ಹೆಚ್ಚು ಇಷ್ಟಪಟ್ಟು ಖರೀದಿಸಿರುವ ಜನಪ್ರಿಯ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಇವು ಅತಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್‌ಗಳನ್ನು ಹಿಂದಿಕ್ಕಿ ಭಾರೀ ಮಾರಾಟ ಕಂಡಿರುವ ಕಾರುಗಳಾಗಿವೆ. ಮಾರುತಿ, ಮಹೀಂದ್ರಾ, ಟಾಟಾ, ಹ್ಯುಂಡೈನ ತಲಾ ಒಂದೊಂದು ಕಾರು ಭಾರತದಲ್ಲಿ 2024 ರಲ್ಲಿ ತಮ್ಮ ಅಬ್ಬರವನ್ನು ತೋರಿಸಿವೆ.

ಟಾಟಾ ಪಂಚ್: ಡೀಸೆಲ್ ಆವೃತ್ತಿಯ ಕೊರತೆಯಿದ್ದರೂ, ತನ್ನ ವಿನ್ಯಾಸ, ವೈಶಿಷ್ಟ್ಯಗಳು ಹಾಗೂ ಗಟ್ಟಿತನದ ಜೊತೆಗೆ ಇದರ ಕಡಿಮೆ ಬೆಲೆಯು ಪಂಚ್ ಯಶಸ್ಸಿಗೆ ಕಾರಣವಾಗಿದೆ. ಇವಿ ಆವೃತ್ತಿಯ ಪರಿಷ್ಕರಣೆಗಳು ಹಾಗೂ ನವೀಕರಣಗಳೊಂದಿಗೆ, ಪಂಚ್ ಕಾರು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ. ಟಾಟಾ ಪಂಚ್ ಪ್ರಸ್ತುತ ಭಾರತದಲ್ಲಿ ಜನಪ್ರಿಯ ಕಾರಾಗಳುಗಳಲ್ಲಿ ಒಂದಾಗಿದ್ದು, 2024 ರಲ್ಲಿ ತನ್ನ ಯಶಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.

top-4-best-selling-suvs-in-2024-tata-mahindra-hyundai-maruti

ಮಾರುತಿ ಬ್ರೆಝಾ: ಮಾರುತಿ ಮಾರಾಟ ಜಾಲ ಹಾಗೂ ಬ್ರೆಝಾ ಹೊಸ ವಿನ್ಯಾಸವು ಹೊಸ ಸ್ಪರ್ಧೆಯ ನಡುವೆಯೂ ತಾಜಾ ಕಾಣಿಕೆಗೆ ಸಹಾಯಕವಾಗಿದೆ. ಇದರ ಯಶಸ್ಸಿನ ಹಿಂದಿನ ಕಾರಣವೇನೆಂದರೆ, ಬ್ರೆಝಾ ಉತ್ತಮ ಮೈಲೇಜ್ ಕೊಡುತ್ತದೆ. ಇದು ಅದರ ಮಾರಾಟದ ಸಾಧನೆಗೆ ಹಾಗೂ ಸ್ಥಳಾವಕಾಶಕ್ಕೆ ಮಹತ್ವಪೂರ್ಣವಾಗಿದೆ. ಹೊಸ ಸಬ್ - ಕಾಂಪ್ಯಾಕ್ಟ್ ಎಸ್‌ಯುವಿಗಳಂತೆ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿರದಿದ್ದರೂ, ಮಾರುತಿ ಬ್ರೆಝಾ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೋ: ಹೊಸ ಸ್ಕಾರ್ಪಿಯೋ ಎನ್ ಎಸ್‌ಯುವಿಯು ಅದ್ಭುತ ವಿನ್ಯಾಸ ಹಾಗೂ ಚಾಲನಾ ಅನುಭವವನ್ನು ಹೊಂದುವ ಮೂಲಕ ಗ್ರಾಹಕರ ಮನಗೆದ್ದಿದೆ. ಮಹೀಂದ್ರಾ ಸ್ಕಾರ್ಪಿಯೋ ಹಳವು ವರ್ಷಗಳಿಂದ ಪ್ರಖ್ಯಾತಿಯಲ್ಲಿರೋ ಎಸ್‌ಯುವಿ ಆಗಿದ್ದು, ಅದರ ಹೊಸ ಆವೃತ್ತಿಯಾದ ಸ್ಕಾರ್ಪಿಯೋ - ಎನ್ ತನ್ನ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

top-4-best-selling-suvs-in-2024-tata-mahindra-hyundai-maruti

ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಒದಗಿಸುತ್ತಿರುವುದು ಗ್ರಾಹಕರಗೆ ಬೆಸ್ಟ್‌ ಆಯ್ಕೆ ಎನಿಸಿಕೊಂಡಿದೆ. ಸದ್ಯ ಆರಾಮ ಪ್ರಯಾಣ ಅನುಭವದ ಜೊತೆಗೆ ವೈಶಿಷ್ಟ್ಯಗಳಿಂದ ಪ್ಯಾಕ್ ಮಾಡಿದ ಎಸ್‌ಯುವಿ ಎಂದರೆ ತಪ್ಪಾಗುವುದಿಲ್ಲ. ಹೊಸ ಮಹೀಂದ್ರಾ ಸ್ಕಾರ್ಪಿಯೋ - ಎನ್ ವೈಶಿಷ್ಟ್ಯಗಳಿಂದ ತುಂಬಿದ ಆಕರ್ಷಕ ಎಸ್‌ಯುವಿ ಇದಾಗಿದ್ದು, ಇತರ ಎಸ್‌ಯುವಿಗಳಿಗೆ ತೀವ್ರ ಪೈಪೋಟಿ ನೀಡುತ್ತದೆ.

ಹ್ಯುಂಡೈ ಕ್ರೆಟಾ: ಕ್ರೆಟಾ ಹೊಸ ನವೀಕರಣವನ್ನು ಹೊಂದಿದ್ದು, ಫೇಸ್‌ಲಿಫ್ಟ್‌ ಮಾಡಲ್‌ನೊಂದಿಗೆ ತನ್ನ ಮಾರಾಟವನ್ನು ಹೆಚ್ಚಿಸಿದೆ. ಹೊಸ ವಿನ್ಯಾಸ ವೈಶಿಷ್ಟ್ಯಗಳೊಂದಿಗೆ ಧೂಳೆಬ್ಬಿಸಿದೆ. ಹ್ಯುಂಡೈ ಕ್ರೆಟಾ ರೂ. 10 ಲಕ್ಷದೊಳಗೆ ಸಿಗದ ಕಾರಾಗಿದ್ದರೂ, 2024 ರಲ್ಲಿ ಇದು ಭಾರತದಲ್ಲಿ ಮಾರಾಟವಾಗುವ ಟಾಪ್ 3 ಕಾರುಗಳಲ್ಲೊಂದಾಗಿದೆ.

top-4-best-selling-suvs-in-2024-tata-mahindra-hyundai-maruti

ಜೊತೆಗೆ ಇಂಟೀರಯರ್ ಅನ್ನು ಹೊಸದಾಗಿ ನವೀಕರಿಸಲಾಗಿದೆ. ಹ್ಯುಂಡೈ ಕ್ರೆಟಾದ ಹೊಸ ಆವೃತ್ತಿಯನ್ನು ತರಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗಿದೆ. ಹಾಗೆಯೇ ಎಲೆಕ್ಟ್ರಿಕ್ ಆವೃತ್ತಿಯು ಕ್ರೆಟಾ ಮಾರಾಟವನ್ನು ಮತ್ತಷ್ಟು ಉತ್ತೇಜಿಸುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಹ್ಯುಂಡೈ ಕ್ರೆಟಾ ಎರಡು ಪೆಟ್ರೋಲ್ ಆಯ್ಕೆಗಳು ಹಾಗೂ ಡೀಸೆಲ್ ಆವೃತ್ತಿಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 13, 2025, 9:30 [IST]
English summary
Top 4 best selling suvs in 2024 tata mahindra hyundai maruti
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+