ಭಾರತದಲ್ಲಿ ಕೈಗೆಟುಕುವ ಬೆಲೆಯ ಟಾಪ್-5 ಡೀಸೆಲ್ ಎಂಜಿನ್ 7-ಸೀಟರ್ ಎಸ್‌ಯುವಿಗಳು

2025 ರಲ್ಲಿ, ಡೀಸೆಲ್ ಚಾಲಿತ 7-ಸೀಟರ್ ಎಸ್‌ಯುವಿಗಳು ಭಾರತದಲ್ಲಿ ಜನಪ್ರಿಯ ಆಯ್ಕೆಯಾಗಿ ಉಳಿದಿವೆ, ವಿಶೇಷವಾಗಿ ಇಂಧನ ದಕ್ಷತೆ ಮತ್ತು ವಿಶಾಲವಾದ ಇಂಟೀರಿಯರ್‌ಗೆ ಆದ್ಯತೆ ನೀಡುವ ಕುಟುಂಬ ಪ್ರಯಾಣಿಕರಲ್ಲಿ ಭಾರೀ ಜನಪ್ರಿಯತೆ ಪಡೆಯುವತ್ತಿವೆ. ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಹೊರತಾಗಿಯೂ, ಲಾಂಗ್ ಡ್ರೈವ್‌ಗಳು ಮತ್ತು ಒರಟು ಭೂಪ್ರದೇಶಗಳಿಗೆ ಡೀಸೆಲ್ ಕಾರುಗಳು ಗ್ರಾಹಕರಲ್ಲಿ ಗಮನಾರ್ಹ ಸ್ಥಾನವನ್ನು ಪಡೆದಿವೆ. ಪ್ರಸ್ತುತ ಲಭ್ಯವಿರುವ ಕೈಗೆಟುಕುವ 7-ಸೀಟರ್ ಡೀಸೆಲ್ ಎಸ್‌ಯುವಿಗಳಲ್ಲಿ, ಬೆಲೆಗೆ ತಕ್ಕ ಮೌಲ್ಯವನ್ನು ನೀಡುವ ಪ್ರಮುಖ ಮಾಡಲ್‌ಗಳ ಪಟ್ಟಿ ಇಲ್ಲಿದೆ.

ಮಹೀಂದ್ರಾ ಬೊಲೆರೊ ಮತ್ತು ಬೊಲೆರೊ ನಿಯೋ

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮಹೀಂದ್ರಾ ಬೊಲೆರೊ ಮತ್ತು ಅದರ ಆಧುನಿಕ ಅವತಾರವಾದ ಬೊಲೆರೊ ನಿಯೋ ಇದೆ. ಬೊಲೆರೊ ಬೆಲೆ ರೂ. 8.79 (ಎಕ್ಸ್-ಶೋರೂಂ)ಲಕ್ಷದಿಂದ ಆರಂಭವಾಗುತ್ತದೆ. ಇದು 76 hp ಪವರ್ ಮತ್ತು 210 Nm ಟಾರ್ಕ್ ನೀಡುವ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಬೊಲೆರೊ ನಿಯೋ ಹೆಚ್ಚು ಶಕ್ತಿಶಾಲಿ 100 hp ಎಂಜಿನ್ ಹೊಂದಿದೆ. ಇದು ಏಳು ಆಸನಗಳೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮಾರಾಟವಾಗುತ್ತದೆ.

top-5-affordable-diesel-engine-7-seater-suvs-in-india

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ 132 ಎಚ್‌ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಉತ್ಪಾದಿಸುವ 2.2 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಸ್ವಲ್ಪ ಹೆಚ್ಚು ಪರಿಷ್ಕೃತ ಆಯ್ಕೆಯಾಗಿದೆ. ಇದರ ಬೆಲೆ ರೂ. 13 (ಎಕ್ಸ್‌ ಶೋರೂಂ) ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಎಸ್‌ಯುವಿ ಸ್ಕಾರ್ಪಿಯೊದ ದೃಢವಾದ ಕಾರ್ಯಕ್ಷಮತೆಯ ಪರಂಪರೆಗೆ ನಿಜವಾದ ಪ್ರತಿಬಿಂಬವಾಗಿದೆ. ಆದರೆ ಮ್ಯಾನುವಲ್‌ನಲ್ಲಿ ಮಾತ್ರ ಸಿಗುತ್ತದೆ.

ಮಹೀಂದ್ರಾ ಸ್ಕಾರ್ಪಿಯೊ-ಎನ್

ರೂ. 13.20 (ಎಕ್ಸ್‌ ಶೋರೂಂ) ಲಕ್ಷದಿಂದ ಪ್ರಾರಂಭವಾಗುವ ಹೆಚ್ಚು ಸಮಕಾಲೀನ ಮತ್ತು ವೈಶಿಷ್ಟ್ಯ-ಭರಿತ ಮಧ್ಯಮ ಗಾತ್ರದ ಎಸ್‌ಯುವಿ ಎಂದು ಸ್ಕಾರ್ಪಿಯೊ-ಎನ್ ಗುರ್ತಿಸಿಕೊಂಡಿದೆ. ಇದು 175 ಎಚ್‌ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್‌ನೊಂದಿಗೆ ರಿಯರ್-ವೀಲ್-ಡ್ರೈವ್ ಮತ್ತು ಫೋರ್-ವೀಲ್-ಡ್ರೈವ್ ವೇರಿಯೆಂಟ್‌ಗಳನ್ನು ನೀಡುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡಲ್ಲೂ ಖರೀದಿಗೆ ಸಿಗುತ್ತದೆ.

top-5-affordable-diesel-engine-7-seater-suvs-in-india

ಮಹೀಂದ್ರಾ XUV700

ರೂ. 13.66 ಲಕ್ಷದಿಂದ ರೂ. 23.71 (ಎಕ್ಸ್‌ ಶೋರೂಂ) ಲಕ್ಷದವರೆಗೆ ಬೆಲೆಯಿರುವ ಮಹೀಂದ್ರಾ XUV700, ಈಗ ಪ್ರತ್ಯೇಕವಾಗಿ 7-ಸೀಟರ್ ರೂಪದಲ್ಲಿ ಸಿಗುತ್ತದೆ. ಐಷಾರಾಮಿ ಮತ್ತು ಉಪಯುಕ್ತತೆಯ ನಡುವೆ ಸಮತೋಲನವನ್ನು ನೀಡುತ್ತದೆ. ಇದು ಹೆಚ್ಚು ಸುಧಾರಿತ ಸುರಕ್ಷತಾ ತಂತ್ರಜ್ಞಾನ, ಡ್ಯುಯಲ್-ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾದ AWD ಆವೃತ್ತಿಗಳನ್ನು ಒಳಗೊಂಡಿದೆ. ಇದು 185 ಎಚ್‌ಪಿ ಪವರ್ ಹೊರಹಾಕುತ್ತದೆ.

ಟಾಟಾ ಸಫಾರಿ

ಈ ಪಟ್ಟಿಯಲ್ಲಿ ಕೊನೆಯ ಕಾರಾಗಿ ಟಾಟಾ ಸಫಾರಿಯನ್ನು ಪರಿಗಣಿಸಲಾಗಿದೆ. ಇದರ ಬೆಲೆ ರೂ. 14.66 (ಎಕ್ಸ್‌ ಶೋರೂಂ) ಲಕ್ಷದಿಂದ ಪ್ರಾರಂಭವಾಗುತ್ತದೆ. ಸಫಾರಿಯ 2.0-ಲೀಟರ್ ಡೀಸೆಲ್ ಎಂಜಿನ್ 170 ಎಚ್‌ಪಿ ಪವರ್ ಮತ್ತು 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದು ಪ್ರೀಮಿಯಂ ಒಳಾಂಗಣ ಮತ್ತು ಬಲವಾದ ರಸ್ತೆ ಉಪಸ್ಥಿತಿಯಿಂದ ಪೂರಕವಾಗಿದೆ.

top-5-affordable-diesel-engine-7-seater-suvs-in-india

ಈ ಡೀಸೆಲ್ 7-ಸೀಟರ್ ಎಸ್‌ಯುವಿಗಳು ಭಾರತೀಯ ಕುಟುಂಬಗಳು ಮತ್ತು ದೀರ್ಘ ಪ್ರಯಾಣಕ್ಕಾಗಿ ಕೈಗೆಟುಕುವ ಬೆಲೆಯನ್ನು ಹೊಂದಿವೆ. ಮಹೀಂದ್ರಾ ಮತ್ತು ಟಾಟಾ ವೈವಿಧ್ಯಮಯ ಅಗತ್ಯಗಳು ಮತ್ತು ಬಜೆಟ್ ವಿಭಾಗದಲ್ಲಿ ಪ್ರಾಬಲ್ಯ ಹೊಂದಿವೆ. ಇಲ್ಲಿ ನಾವು ತಿಳಿಸಿರುವ ಕಾರುಗಳು ಅತ್ಯಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿರುವ ಬೆಸ್ಟ್ 7-ಸೀಟರ್ ಎಸ್‌ಯುವಿಗಳಾಗಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನಿಜಕ್ಕೆ ಇತ್ತೀಚಿನ ವರ್ಷಗಳಲ್ಲಿ ಡೀಸೆಲ್ ಎಸ್‌ಯುವಿಗಳಿಗೆ ಭಾರತದಲ್ಲಿ ಜನಪ್ರಿಯತೆ ಕುಸಿದಿವೆ, ಆದರೂ ಹಲವಾರು ವಾಹನ ತಯಾರಕರು ದೃಢವಾದ 7-ಸೀಟರ್ ಎಸ್‌ಯುವಿ ಆಯ್ಕೆಗಳನ್ನು ನೀಡುತ್ತಲೇ ಇದ್ದಾರೆ. ಏಕೆಂದರೆ ಹೆದ್ದಾರಿಗಳಲ್ಲಿ ಹೆಚ್ಚು ಚಾಲನೆ ಮಾಡುವ ಮತ್ತು ಹೆಚ್ಚಿನ ಮೈಲೇಜ್ ಬಯಸುವವರಿಂದ ಅವುಗಳಿಗೆ ಇನ್ನೂ ಬೇಡಿಕೆ ಇದೆ. ಹಾಗಾಗಿಯೇ ಈ ಈ ಬೆಸ್ಟ್‌ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

Article Published On: Sunday, October 5, 2025, 13:59 [IST]
English summary
Top 5 affordable diesel engine 7 seater suvs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+