ಸೇನೆಗೆ ಪವರ್‌ಫುಲ್ ಸುರಕ್ಷಿತ ಎಸ್‌ಯುವಿಗಳು! ದೇಶಿಯ ಬ್ರಾಂಡ್‌ಗಳ ಸಹಕಾರ, ಶತ್ರುಗಳಿಗೆ ನಡುಕ!

ಭಾರತೀಯ ಸೇನೆಗೆ ಯುದ್ಧ ವಿಮಾನಗಳು, ಟ್ಯಾಂಕರ್‌ಗಳು, ಬೃಹತ್ ಟ್ರಕ್‌ಗಳು ಎಷ್ಟು ಮುಖ್ಯವೋ ತುರ್ತು ಸಂದರ್ಭಗಳನ್ನು ನಿಭಾಯಿಸಲು ಹಾಗೂ ಕೂಡಲೇ ಪ್ರತಿಕ್ರಿಯಿಸಲು ಪವರ್‌ಫುಲ್‌ ಎಸ್‌ಯುವಿಗಳು ಕೂಡ ಅಷ್ಟೇ ಮುಖ್ಯ. ದೇಶದ ವೈವಿಧ್ಯಮಯ ಭೂಪ್ರದೇಶಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯು ದೀರ್ಘಕಾಲದಿಂದ ಹಲವಾರು ಅಪ್ರತಿಮ ಮೇಡ್ ಇನ್ ಇಂಡಿಯಾ ಕಾರುಗಳನ್ನು ಬಳಸುತ್ತಿದೆ. ಹಿಮಾಲಯದಿಂದ ಹಿಡಿದು ರಾಜಸ್ಥಾನದ ಮರುಭೂಮಿಗಳವರೆಗಿನ ಕಠಿಣ ಭೂಪ್ರದೇಶಗಳಲ್ಲಿ ಮುನ್ನುಗ್ಗಲು ಕೆಲವು ಜನಪ್ರಿಯ ಕಾರುಗಳನ್ನು ವಿಶೇಷವಾಗಿ ಭಾರತೀಯ ಸಶಸ್ತ್ರ ಪಡೆಗಳಿಗಾಗಿ ತಯಾರಿಸಲಾಗುತ್ತದೆ.

ಇವುಗಳನ್ನು ಭಾರತೀಯ ಸೇನೆಗಾಗಿ ಆಯಾ ಬ್ರಾಂಡ್‌ಗಳು ಅನುಕೂಲಕರ ರೀತಿಯಲ್ಲಿ ನಿರ್ಮಾಣ ಮಾಡಿದ್ದು, ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸೈನಿಕರಿಗೆ ಹೊಂದಿಕೊಳ್ಳುವ ರೀತಿಯಲ್ಲಿ ವಾಹನಗಳನ್ನು ಡಿಸೈನ್ ಮಾಡಲಾಗಿದೆ. ಭಾರತೀಯ ಸೇನೆಯು ಪ್ರಸ್ತುತ ತನ್ನ ಗ್ಯಾರೇಜ್ ಗಳಲ್ಲಿ ಹೊಂದಿರುವ ಐದು ಜನಪ್ರಿಯ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

top-5-best-suvs-in-indian-army-garage-tata-mahindra-maruti-toyota

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್: ಮಹೀಂದ್ರಾ ಕಂಪನಿಯು ಭಾರತದಲ್ಲಿ ಪ್ರಮುಖ ಎಸ್‌ಯುವಿ ತಯಾರಕಾ ಕಂಪನಿಯಾಗಿದ್ದು, ತನ್ನ ಜನಪ್ರಿಯ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಸೇನೆಗಾಗಿ ವಿಶೇಷವಾಗಿ ನಿರ್ಮಿಸಿಕೊಟ್ಟಿದೆ. ಈ ಕಾರು ಸದ್ಯ ಸೇನೆಯಲ್ಲಿ ಬಳಕೆಯಲ್ಲಿದೆ. ಉತ್ತಮ ಪರ್ಫಾಮೆನ್ಸ್ ಹಾಗೂ ನಿರ್ಮಾಣ ಗುಣಮಟ್ಟವನ್ನು ಹೊಂದಿರುವ ಈ ಕಾರು ಸೈನ್ಯಕ್ಕೆ ವಿಶ್ವಾಸಾರ್ಹ ಸಂಗಾತಿಯಾಗಿದೆ.

ಭಾರತೀಯ ಸೇನೆಗಾಗಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಆಲಿವ್ ಗ್ರೀನ್‌ ಬಣ್ಣದಲ್ಲಿ ರೂಪುಗೊಂಡಿದೆ. ಈ ಮಾದರಿಯು 2.2 - ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 130 ಬಿಹೆಚ್ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ನಾಗರಿಕರಿಗೆ ಲಭ್ಯವಿರುವ ಮಾದರಿಗಿಂತ ಇದು ಭಿನ್ನವಾಗಿದೆ, ಅದರ 4x4 ಸಾಮರ್ಥ್ಯವು ವೈವಿಧ್ಯಮಯ ಭೂಪ್ರದೇಶಗಳಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ.

top-5-best-suvs-in-indian-army-garage-tata-mahindra-maruti-toyota

ಟಾಟಾ ಸಫಾರಿ ಸ್ಟಾರ್ಮ್ ಜಿಎಸ್ 800: ನಿರ್ಮಾಣ ಗುಣಮಟ್ಟ ಹಾಗೂ ಸುರಕ್ಷತೆಯಲ್ಲಿ ದೇಶಿಯವಾಗಿ ಭಾರೀ ಸದ್ದು ಮಾಡಿರುವ ಟಾಟಾ ಬ್ರಾಂಡ್‌, ತನ್ನ ಜನಪ್ರಿಯ ಟಾಟಾ ಸಫಾರಿ ಸ್ಟಾರ್ಮ್ ಜಿಎಸ್ 800 ಎಸ್‌ಯುವಿಯನ್ನು ಭಾರತೀಯ ಸೇನೆಗೆ ನೀಡಿದೆ. ಮಿಲಿಟರಿ ವಿಶೇಷಣಗಳನ್ನು ಪೂರೈಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಜಿಎಸ್ 800 "ಜನರಲ್ ಸರ್ವಿಸ್ 800" ಅನ್ನು ಸೂಚಿಸುತ್ತದೆ.

ಟಾಟಾ ಸಫಾರಿ ಸ್ಟಾರ್ಮ್ ಜಿಎಸ್ 800 ಸೇನೆಯ ಫ್ಲೀಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಗಾಗ್ಗೆ ದೇಶದ ವಿವಿಧ ಭಾಗಗಳಲ್ಲಿ ಕಂಡುಬರುವ ಈ ಎಸ್‌ಯುವಿ, ಗಸ್ತು ತಿರುಗುವುದು ಹಾಗೂ ಸಶಸ್ತ್ರ ಪಡೆಗಳ ತುರ್ತು ಸಂದರ್ಭಗಳಿಗೆ ಸಹಕಾರಿಯಾಗಿದೆ. ಇದು 800 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇದರ 2.2 - ಲೀಟರಿನ ಡೀಸೆಲ್ ಎಂಜಿನ್ 156 ಬಿಹೆಚ್ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

top-5-best-suvs-in-indian-army-garage-tata-mahindra-maruti-toyota

ಮಾರುತಿ ಜಿಪ್ಸಿ: ಮೇಲಿನ ಎರಡೂ ದೇಶೀಯ ಬ್ರಾಂಡ್‌ಗಳ ಕಾರುಗಳು ಸೇನೆಗೆ ಬರುವ ಮೊದಲು ಮಾರುತಿ ಕಂಪನಿಯು ಸೇನೆಗೆ ತನ್ನ ಪವರ್‌ಫುಲ್‌ ಎಸ್‌ಯುವಿಯನ್ನು ದೀರ್ಘ ಕಾಲದವರೆಗೆ ನೀಡಿತ್ತು. ಅದೇ ಮಾರುತಿ ಜಿಪ್ಸಿ, ಇದು ಸೈನ್ಯದ ಚಲನಶೀಲತೆಯ ಬೆನ್ನೆಲುಬಾಗಿತ್ತು. ಇದರ ಹಗುರವಾದ ವಿನ್ಯಾಸ ಮತ್ತು ಸಾಬೀತಾದ 4x4 ವ್ಯವಸ್ಥೆಯು ಇದನ್ನು ಬೇಹುಗಾರಿಕೆ ಮತ್ತು ಗಸ್ತು ಕಾರ್ಯಾಚರಣೆಗಳಿಗೆ ಬಳಸುವಂತೆ ಮಾಡಿತ್ತು.

ಇಂದಿಗೂ ದೇಶದ ಕೆಲವು ಬಾರ್ಡರ್‌ಗಳಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ಈ ಮಾರುತಿ ಜಿಪ್ಸಿಯನ್ನು ಬಳಸುವುದನ್ನು ಕಾಣಬಹುದು. ಇದು 1.3 - ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದ್ದು, 80 ಬಿಹೆಚ್ ಪವರ್ ಹಾಗೂ 103 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಭಾರತೀಯ ಸೇನಾ ಮೆರವಣಿಗೆಗಳು ಮತ್ತು ಡ್ರಿಲ್‌ಗಳಲ್ಲಿ ಪರಿಚಿತ ದೃಶ್ಯವಾಗಿರುವ ಈ ಮಾದರಿಯನ್ನು ಗಸ್ತು, ಬೇಹುಗಾರಿಕೆ ಮತ್ತು ಸೈನ್ಯದ ಸಾಗಣೆಗೆ ವ್ಯಾಪಕವಾಗಿ ಬಳಸಲಾಗುತ್ತಿತ್ತು.

ಟೊಯೊಟಾ ಹಿಲಕ್ಸ್: ಟೊಯೋಟಾ ಬ್ರಾಂಡ್‌ ನೀಡುವ ಅತ್ಯುತ್ತಮ ಪಿಕಪ್ ಆಗಿರುವ ಈ ವಾಹನ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಭಾರೀ ಸದ್ದು ಮಾಡಿದೆ. ಸದ್ಯ ಇದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಬೃಹತ್ ಪಿಕಪ್ ಡಿಸೈನ್‌ನೊಂದಿಗೆ ಅತ್ಯುತ್ತಮ ರೋಡ್ ಪ್ರಸೆನ್ಸ್ ಹೊಂದಿರುವ ಈ ಕಾರು ಸೇನೆಯ ಬಲಿಷ್ಟ ಕಾರುಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ.

ಈ ಹಿಂದೆ, ಸೇನೆಯು ಟೊಯೊಟಾ ಹಿಲಕ್ಸ್ ಅನ್ನು ತನ್ನ ನೌಕಾಪಡೆಗೆ ಸೇರಿಸಿತ್ತು. ಈ ಪಿಕಪ್ ಟ್ರಕ್ 2.8 - ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 204 ಬಿಹೆಚ್ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4 - ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಸಹ ಹೊಂದಿದೆ, ಜೊತೆಗೆ 6 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಹೊಂದಿದೆ.

ಫೋರ್ಸ್ ಗೂರ್ಖಾ: ಕಳೆದ ವರ್ಷ ಬಿಡುಗಡೆಯಾದ ನವೀಕರಿಸಿದ ಗೂರ್ಖಾವನ್ನು 3 - ಡೋರ್ ಮತ್ತು 5 - ಡೋರ್ ರೂಪಾಂತರಗಳಲ್ಲಿ ಕ್ರಮವಾಗಿ ರೂ. 16.75 ಲಕ್ಷ ಮತ್ತು ರೂ. 18 ಲಕ್ಷಗಳ ಎಕ್ಸ್ ಶೋರೂಂ ಬೆಲೆಯಲ್ಲಿ ನೀಡಲಾಗುತ್ತದೆ. ಮಾರ್ಚ್ 2025 ರಲ್ಲಿ, ಸೇನೆಯು ಫೋರ್ಸ್ ಗೂರ್ಖಾದ 2,978 ಯುನಿಟ್‌ ಎಸ್‌ಯುವಿಗಳನ್ನು ತನ್ನ ನೌಕಾಪಡೆಗೆ ಸೇರಿಸಿದೆ.

ಫೋರ್ಸ್ ಗೂರ್ಖಾ ಫ್ರಂಟ್ ಇಂಡಿಪೆಂಡೆಂಟ್ ಸಸ್ಪೆಂಷನ್, ಫುಲ್ ಲಾಕಿಂಗ್ ಡಿಫರೆನ್ಷಿಯಲ್ಸ್, 233 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 35 ಡಿಗ್ರಿ ಇಳಿಜಾರು ಸಾಮರ್ಥ್ಯ ಮತ್ತು 700 ಎಂಎಂ ವಾಟರ್ ವ್ಯಾಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್ ಯುವಿ 2.6 ಲೀಟರಿನ ಮರ್ಸಿಡಿಸ್ ಮೂಲದ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 138 ಬಿಹೆಚ್ ಪವರ್ ಮತ್ತು 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದು ಅತ್ಯುತ್ತಮ ಎಸ್‌ಯುವಿ ಸಾಮರ್ಥ್ಯಗಳನ್ನು ಹೊಂದಿರುವುದರಿಂದ ಎಂಥಹ ವೈವಿದ್ಯಮಯ ಭೂಪ್ರದೇಶಗಳಲ್ಲಿಯೂ ಮುನ್ನುಗ್ಗುವ ತಾಕತ್ತನ್ನು ಹೊಂದಿದೆ. ಇದೇ ಕಾರಣಕ್ಕೆ ಮಹೀಂದ್ರಾ ಥಾರ್ ಮತ್ತು ಮಾರುತಿ ಸುಜುಕಿ ಜಿಮ್ನಿಯಂತಹ ಟ್ರೆಂಡಿ ಕಾರುಗಳನ್ನು ಬಿಟ್ಟು ಸೇಗೆ ಈ ಬಾರಿ ಫೋರ್ಸ್ ಗೂರ್ಖಾವನ್ನು ತನ್ನ ಫ್ಲೀಟ್‌ಗೆ ಸೇರಿಸಿದೆ ಎಂಬುದು ನಮ್ಮ ಅನಿಸಿಕೆ.

ದೇಶದ ವೈವಿಧ್ಯಮಯ ಭೂಪ್ರದೇಶಗಳಿಂದ ಎದುರಾಗುವ ವೈವಿಧ್ಯಮಯ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯು ದೀರ್ಘಕಾಲದಿಂದ ಈ ಅಪ್ರತಿಮ ಮೇಡ್ ಇನ್ ಇಂಡಿಯಾ ಕಾರುಗಳನ್ನು ಅವಲಂಬಿಸಿದೆ. ಕಠಿಣ ಭೂಪ್ರದೇಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವ ಪ್ರಯತ್ನದಲ್ಲಿ ಈ ಕೆಲವು ಜನಪ್ರಿಯ ಮಾದರಿಗಳು ಭಾರತೀಯ ಸಶಸ್ತ್ರ ಪಡೆಗಳಿಗೆ ಸಹಕರಿಸುತ್ತಿವೆ. ಈ ಬಲಿಷ್ಟ ಎಸ್‌ಯುವಿಗಳ ಬಗ್ಗೆ ನಿಮ್ಮೆ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 15, 2025, 12:45 [IST]
English summary
Top 5 best suvs in indian army garage tata mahindra maruti toyota
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+