ಈ ಮಾನ್ಸೂನ್‌ನಲ್ಲಿ ಬೆಂಗಳೂರಿನಿಂದ ಕೊಡಗಿಗೆ ಟ್ರಿಪ್ ಹೋಗಬೇಕೇ.. ಇವಿದ್ರೆ ಫುಲ್ ಜಾಲಿ, ಜಾಲಿ!

ಕರ್ನಾಟಕದ ಕೊಡಗು (Coorg), ಪಶ್ಚಿಮ ಘಟ್ಟದ ​​ತಪ್ಪಲಿರುವ ಸುಂದರ ಜೆಲ್ಲೆ. ದಟ್ಟವಾದ ಕಾಡುಗಳು ಹಾಗೂ ಸುಂದರವಾದ ಗಿರಿಧಾಮಗಳಿಂದ ಸುತ್ತುವರಿದಿದೆ. ಭತ್ತ, ಕಾಫಿ ಹಾಗೂ ಮೆಣಸನ್ನು ಹೇರಳವಾಗಿ ಬೆಳೆಯಲಾಗುತ್ತದೆ. ನಾಗರಹೊಳೆ, ಮಾಂದಲಪಟ್ಟಿ, ಹಾರಂಗಿ ಜಲಾಶಯ, ಅಬ್ಬಿ ಜಲಪಾತ, ಚಿಕ್ಲಿಹೊಳೆ ಜಲಾಶಯ, ದುಬಾರೆ ಆನೆ ಶಿಬಿರ, ಬ್ರಹ್ಮಗಿರಿ ಶಿಖರ, ಓಂಕಾರೇಶ್ವರ ದೇವಸ್ಥಾನ, ಇರ್ಪು ಜಲಪಾತ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಮಲ್ಲಳ್ಳಿ ಜಲಪಾತ, ತಲಕಾವೇರಿ ಮತ್ತು ಭಾಗಮಂಡಲ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಇಲ್ಲಿವೆ.

ಈ ಮಳೆಗಾಲದಲ್ಲಿ (Monsoon Season) ಕೊಡಗಿನ ಪ್ರಕೃತಿಯ ಸೌಂದರ್ಯ ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಬಹುತೇಕರಿಗೆ ವಾರಾಂತ್ಯ ಅಥವಾ ರಜಾ ದಿನಗಳಲ್ಲಿ ಬೆಂಗಳೂರಿನಿಂದ ಕೊಡಗಿನಂತಹ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗಬೇಕು ಎಂಬ ಆಸೆಯೂ ಇರುತ್ತದೆ. ಅದಕ್ಕಾಗಿ ಮಳೆಗಾಲಕ್ಕೆ ಹೆಚ್ಚು ಹೊಂದಾಣಿಕೆಯಾಗುವ ಕಾರೊಂದನ್ನು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಿರುತ್ತಾರೆ.

Top 5 Cars For Going Trip Bangalore To Coorg In Monsoon Season XUV700 to Innova Hycross

ಅಂತಹವರಿಗೆ ಮಹೀಂದ್ರಾ ಎಕ್ಸ್‌ಯುವಿ700, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಕಿಯಾ ಸೆಲ್ಟೋಸ್ ಹಾಗೂ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಇವುಗಳನ್ನು ಎಲ್ಲ ಸನ್ನಿವೇಶಗಳಿಗೂ ಸರಿ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ದೂರದ ಊರುಗಳಿಗೆ ಪ್ರವಾಸ ಮಾಡಬೇಕೆಂಬ ಹೆಬ್ಬಯಕೆ ಇರುವವರು ಖರೀದಿ ಮಾಡಬಹುದು.

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700):

ಇದೊಂದು ಫ್ಯಾಮಿಲಿ ಎಸ್‍ಯುವಿಯಾಗಿದೆ. 6/ 7 ಆಸನದೊಂದಿಗೆ ಲಭ್ಯವಿದ್ದು, ಒಂದು ತುಂಬು ಕುಟುಂಬ ಸುಲಭವಾಗಿ ಪ್ರಯಾಣ ಮಾಡಬಹುದು. ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿದ್ದು, ಮಳೆಗಾಲದಲ್ಲಿ ಚಾಲಕರು ಎಚ್ಚರದಿಂದ ಕಾರನ್ನು ಚಾಲನೆ ಮಾಡಲು ನೆರವಾಗುತ್ತದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇದ್ದು, ಕೊಡಗಿನ ಗುಡ್ಡಗಾಡು ರಸ್ತೆಗಳಿಗೆ ಸರಿ ಹೊಂದುತ್ತದೆ. ನೂತನ 'ಎಕ್ಸ್‌ಯುವಿ700' ರೂ.14.49 ಲಕ್ಷದಿಂದ ರೂ.25.14 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Top 5 Cars For Going Trip Bangalore To Coorg In Monsoon Season XUV700 to Innova Hycross

ಹ್ಯುಂಡೈ ಕ್ರೆಟಾ (Hyundai Creta):

ಈ ಎಸ್‍ಯುವಿಯು ಮಳೆಗಾಲದ ಸಂದರ್ಭದಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ಕಾರಾಗಿದೆ. ತಿರುವುಗಳು ಹಾಗೂ ಘಾಟಿ ರಸ್ತೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬಲ್ಲದು. ಇದರಲ್ಲಿರುವ ಟ್ರಾಕ್ಷನ್ ಕಂಟ್ರೋಲ್ & ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳು ಕೊಡಗಿನ ರಸ್ತೆಗಳಲ್ಲಿ ಬಹಳಷ್ಟು ಮಟ್ಟಿಗೆ ನೆರವಾಗಬಲ್ಲದು. 5 ಆಸನಗಳನ್ನು ಪಡೆದಿದ್ದು, ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 433 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಹೊಸ 'ಕ್ರೆಟಾ' ರೂ.11.11 ಲಕ್ಷದಿಂದ ರೂ.20.50 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ.

Top 5 Cars For Going Trip Bangalore To Coorg In Monsoon Season XUV700 to Innova Hycross

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara):

ಇದು ಜನಪ್ರಿಯ ಎಸ್‍ಯುವಿಯಾಗಿದ್ದು, ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಪೆಟ್ರೋಲ್ ಎಂಜಿನ್ ಪಡೆದಿದ್ದು, 22 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಇದು ಪ್ರವಾಸಕ್ಕೆ ಹೋಗುವಾಗ ದೊಡ್ಡ ಮಟ್ಟದಲ್ಲಿ ನೆರವಾಗಬಲ್ಲದು. 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಕೊಡಗಿನ ರಸ್ತೆಗಳಿಗೆ ಸರಿ ಹೊಂದುತ್ತದೆ. 5 ಮಂದಿ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ನೂತನ ಗ್ರ್ಯಾಂಡ್ ವಿಟಾರಾ ರೂ.11.42 ಲಕ್ಷದಿಂದ ರೂ.20.68 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

Top 5 Cars For Going Trip Bangalore To Coorg In Monsoon Season XUV700 to Innova Hycross

ಕಿಯಾ ಸೆಲ್ಟೋಸ್‌ (Kia Seltos):

ಈ ಎಸ್‌ಯುವಿಯು ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿರುವ ವೆಂಟಿಲೇಟೆಡ್ ಸೀಟ್‌ಗಳು ಮಳೆಗಾಲದ ತಂಡಿ ವಾತಾವರಣದಲ್ಲೂ ಆರಾಮದಾಯಕವಾದ ಪ್ರಯಾಣವನ್ನು ಒದಗಿಸಬಲ್ಲದು. ಸಸ್ಪೆನ್ಷನ್ ಸೆಟಪ್ ತುಂಬಾ ಚೆನ್ನಾಗಿದ್ದು, ಕೊಡಗಿನ ರಸ್ತೆಗೆ ಸರಿ ಹೊಂದುತ್ತದೆ. ಹೊಸ ಸೆಲ್ಟೋಸ್‌ ರೂ.11.19 ಲಕ್ಷದಿಂದ ರೂ.20.56 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

Top 5 Cars For Going Trip Bangalore To Coorg In Monsoon Season XUV700 to Innova Hycross

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross):

ಇದೊಂದು ಎಂಪಿವಿಯಾಗಿದೆ. 7/ 8 ಆಸನಗಳನ್ನು ಹೊಂದಿದೆ. ಒಟ್ಟು ಕುಟುಂಬ ಪ್ರವಾಸಕ್ಕೆ ಹೋಗಲು ಉತ್ತಮವಾದ ಕಾರಾಗಿದೆ. ಹೈಬ್ರಿಡ್ (ಎಲೆಕ್ಟ್ರಿಕ್+ಪೆಟ್ರೋಲ್) ಎಂಜಿನ್ ಹೊಂದಿದ್ದು, 23 ಕಿ.ಮೀ ವರೆಗೆ ಮೈಲೇಜ್ ಕೊಡಬಲ್ಲದು. ಕೊಡಗಿನ ರಸ್ತೆಗೂ ಸರಿ ಹೊಂದಬಲ್ಲದು. ನೂತನ 'ಇನ್ನೋವಾ ಹೈಕ್ರಾಸ್' ರೂ.19.94 ಲಕ್ಷದಿಂದ ರೂ.31.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Article Published On: Wednesday, August 6, 2025, 13:11 [IST]
English summary
Top 5 cars for going trip bangalore to coorg in monsoon season xuv700 to innova hycross
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+