ಕೈಗೆಟುಕುವ ಬೆಲೆಯಲ್ಲಿ ADAS ಹೊಂದಿರುವ ಕಾರು ಹುಡುಕುತ್ತಿದ್ದೀರಾ? ಟಾಪ್-5 ಪಟ್ಟಿ ಇಲ್ಲಿದೆ...
ಇತ್ತೀಚಿನ ವರ್ಷಗಳಲ್ಲಿ ಸುರಕ್ಷಿತ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ನೀವು ಕೂಡ ಹೊಸ ಕಾರು ಖರೀದಿಸುವ ಬಗ್ಗೆ ಮತ್ತು ADAS (Advanced Driver Assistance Systems) ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳನ್ನು ಹುಡುಕುತ್ತಿದ್ದರೇ 15 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಕಾರುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸದ್ಯ ಭಾರತದಲ್ಲಿ ADAS ಹೊಂದಿರುವ 5 ಕೈಗೆಟುಕುವ ಕಾರುಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ. ಹೆಚ್ಚುವರಿಯಾಗಿ, ಈ ಎಲ್ಲಾ ಕಾರುಗಳು 15 ಲಕ್ಷ ರೂ.ಗಿಂತ ಕಡಿಮೆ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿವೆ.
ಟಾಟಾ ನೆಕ್ಸಾನ್: ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದನ್ನು ಲೆವೆಲ್ 2.0 ADAS ಸೂಟ್‌ನೊಂದಿಗೆ ಅಪ್‌ಗ್ರೇಡ್ ಮಾಡಿದೆ. ಲೆವೆಲ್ 2.0 ADAS ಸೂಟ್ ನೆಕ್ಸಾನ್‌ನ ಫಿಯರ್‌ಲೆಸ್+ PS ಪೆಟ್ರೋಲ್ DCA ವೇರಿಯೆಂಟ್‌ನೊಂದಿಗೆ ಲಭ್ಯವಿದೆ, ಇದರ ಬೆಲೆ ರೂ 12.16 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಬವಾಗುತ್ತದೆ. ಟಾಟಾ ನೆಕ್ಸಾನ್ ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಮೊದಲ ಭಾರತೀಯ ಕಾರಾಗಿದೆ.

ಮಹೀಂದ್ರಾ XUV 3XO: ಮಹೀಂದ್ರಾ XUV 3XO ನ AX5L ಮತ್ತು AX7L ಟ್ರಿಮ್‌ಗಳೊಂದಿಗೆ ಲೆವೆಲ್ 2 ADAS ಸೂಟ್ ಅನ್ನು ನೀಡಲಾಗುತ್ತದೆ. ಈ ಎರಡೂ ವೇರಿಯೆಂಟ್‌ಗಳ ಬೆಲೆ ರೂ. 11.60 ಲಕ್ಷ (ಎಕ್ಸ್-ಶೋರೂಂ) ಮತ್ತು ರೂ. 12.75 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗಲಿದೆ. ಅಲ್ಲದೆ ಭಾರತ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದ್ದು, ದೇಶದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.
ಹೋಂಡಾ ಸಿಟಿ: ದೇಶದಲ್ಲಿ ಹೋಂಡಾ ಸಿಟಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದಾಗಿನಿಂದ ಜನಪ್ರಿಯ ಸೆಡಾನ್ ಆಗಿ ಉಳಿದಿದೆ. ADAS ಲೆವೆಲ್ 2 ಹೊಂದಿರುವ ಹೋಂಡಾ ಸಿಟಿ ಟ್ರಿಮ್‌ಗಳು ದೇಶದಲ್ಲಿ 12.70 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಲಭ್ಯವಿದೆ. ಅಂದರೆ ಬೇಸ್ SV ವೇರಿಯೆಂಟ್ ಹೊರತುಪಡಿಸಿ ಹೋಂಡಾ ಸಿಟಿಯ ಎಲ್ಲಾ ಟ್ರಿಮ್‌ಗಳು ಲೆವೆಲ್ 2 ADAS ಸೂಟ್‌ನೊಂದಿಗೆ ಲಭ್ಯವಿದೆ.

ಹೋಂಡಾ ಅಮೇಜ್: ಪ್ರಸ್ತುತ, ಹೋಂಡಾ ಅಮೇಜ್ (Honda Amaze) ಭಾರತದಲ್ಲಿ ADAS ಲೆವೆಲ್ 2.0 ಹೊಂದಿರುವ ಅತ್ಯಂತ ಕೈಗೆಟುಕುವ ಕಾರು. ADAS ಲೆವೆಲ್ 2.0 ಹೋಂಡಾ ಅಮೇಜ್‌ನ ಟಾಪ್ - ಆಫ್ - ದಿ - ಲೈನ್ ZX ವೇರಿಯೆಂಟ್‌ನಲ್ಲಿ ಲಭ್ಯವಿದೆ. ಹೋಂಡಾ ಅಮೇಜ್‌ನ ZX ಟ್ರಿಮ್‌ಗಳು ಭಾರತದಲ್ಲಿ 9.15 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿವೆ.
ಕಿಯಾ ಸೋನೆಟ್: ಈ ಪಟ್ಟಿಯಲ್ಲಿರುವ ಹೆಚ್ಚಿನ ಕಾರುಗಳು ಲೆವೆಲ್-2 ADAS ಸೂಟ್‌ನೊಂದಿಗೆ ಬಂದರೆ, ಕಿಯಾ ಸೋನೆಟ್ ಲೆವೆಲ್-1 ಅಡಾಸ್‌ನೊಂದಿಗೆ ಬರುತ್ತದೆ. ಈ ಕಿಯಾ ಸೋನೆಟ್ 2020 ರಲ್ಲಿ ಪರಿಚಯಿಸಲ್ಪಟ್ಟಾಗಿನಿಂದ ದೇಶದಲ್ಲಿ ಜನಪ್ರಿಯ ಕಾಂಪ್ಯಾಕ್ಟ್ SUV ಆಗಿ ಉಳಿದಿದೆ. ADAS ಸೋನೆಟ್‌ನ ಟಾಪ್-ಸ್ಪೆಕ್ GTX+ ಟ್ರಿಮ್‌ನೊಂದಿಗೆ ಲಭ್ಯವಿದ್ದು, ಇದರ ಬೆಲೆ ರೂ. 13.51 ಲಕ್ಷ (ಎಕ್ಸ್-ಶೋರೂಂ) ಇದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಆಟೋಮೋಟಿವ್ ಮಾರುಕಟ್ಟೆ ವೇಗವಾಗಿ ಬದಲಾಗಿದೆ. SUV ಗಳಿಗೆ ಬೇಡಿಕೆ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಹೈಬ್ರಿಡ್ ವಾಹನಗಳು ಜನಪ್ರಿಯತೆಯನ್ನು ಗಳಿಸುತ್ತಿವೆ, ಇತ್ತೀಚಿನ ವರ್ಷಗಳಲ್ಲಿ ಸುರಕ್ಷಿತ ಕಾರಿನ ಬೇಡಿಕೆಯೂ ಹೆಚ್ಚಾಗಿದೆ. ಇದನ್ನು ಪರಿಗಣಿಸಿ ಕಾರು ತಯಾರಕರು ಕಡಿಮೆ ಬೆಲೆಯಲ್ಲಿ ADAS ಸೂಟ್ ನೀಡುತ್ತಿರುವುದಕ್ಕೆ ಈ ಮೇಲಿನ ಕಾರುಗಳೆ ಉದಾಹರಣೆಯಾಗಿವೆ.
ADAS ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೇ, ಮೇಲಿನ ಈ ಕಾರುಗಳು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸುರಕ್ಷತೆಯನ್ನು ಒದಗಿಸುತ್ತವೆ. ಈ ಎಲ್ಲಾ ಕಾರುಗಳು 15 ಲಕ್ಷ ರೂ.ಗಿಂತ ಕಡಿಮೆ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿವೆ. ಈ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








