ಗ್ರಾಮಕ್ಕೂ ಸೈ ಸಿಟಿಗೂ ಸೈ: ಇವು ಭಾರತದ 5 ಅಗ್ಗದ ಡೀಸೆಲ್ ಕಾರುಗಳು

ಡೀಸೆಲ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಸ್ಥಾನವನ್ನು ಉಳಿಸಿಕೊಂಡಿವೆ. ಅವುಗಳ ಮೈಲೇಜ್, ಪವರ್ ಮತ್ತು ಬಾಳಿಕೆಯು ಅವುಗಳನ್ನು ಗ್ರಾಮೀಣ ಪ್ರದೇಶದಿಂದ ನಗರದವರೆಗೆ ಜನಪ್ರಿಯಗೊಳಿಸಿವೆ. ಇತ್ತೀಚಿನ ಜಿಎಸ್‌ಟಿ ಕಡಿತದ ನಂತರ, ಅನೇಕ ಡೀಸೆಲ್ ಕಾರುಗಳು ಹೆಚ್ಚು ಕೈಗೆಟುಕುವ ಬೆಲೆಗೆ ಸಿಗುತ್ತಿವೆ. ನೀವು ಬಜೆಟ್ ಸ್ನೇಹಿ ಡೀಸೆಲ್ ಕಾರನ್ನು ಖರೀದಿಸಲು ನೀವು ಬಯಸಿದರೆ, 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ದೇಶದ ಐದು ಅಗ್ಗದ ಡೀಸೆಲ್ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಟಾಟಾ ಆಲ್ಟ್ರೊಜ್ ಡೀಸೆಲ್: ಟಾಟಾ ಆಲ್ಟ್ರೊಜ್ ಅತ್ಯಂತ ಕೈಗೆಟುಕುವ ಡೀಸೆಲ್ ಹ್ಯಾಚ್‌ಬ್ಯಾಕ್ ಆಗಿದ್ದು, ಬೆಲೆಯು ಈಗ ರೂ.8.10 ಲಕ್ಷ (ಎಕ್ಸ್ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಇದರ ದೃಢವಾದ ನಿರ್ಮಾಣ ಗುಣಮಟ್ಟ, ಆರಾಮ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳಿಂದಾಗಿ ಮಧ್ಯಮ ವರ್ಗದ ನೆಚ್ಚಿನ ಕಾರಾಗಿದೆ. ಇದು 1.5-ಲೀಟರ್ ಟರ್ಬೋಡೀಸೆಲ್ ಎಂಜಿನ್‌ನೊಂದಿಗೆ 90 ಬಿಹೆಚ್ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

top-5-cheapest-diesel-cars-in-india

ಮಹೀಂದ್ರಾ ಬೊಲೆರೊ ನಿಯೋ: ಮಹೀಂದ್ರಾ ಬೊಲೆರೊ ನಿಯೋ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.49 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಇದರ 1.5 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ 98.6 ಬಿಹೆಚ್ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಲೆದರ್ ಸೀಟುಗಳು, ರಿಯರ್-ವ್ಯೂ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಮತ್ತು 9-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಹೀಂದ್ರಾ ಬೊಲೆರೊ: ಒರಟಾದ ರಸ್ತೆಗಳಲ್ಲಿಯೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ಒರಟಾದ, ಬಾಳಿಕೆ ಬರುವ ಎಸ್ ಯುವಿಯನ್ನು ನೀವು ಹುಡುಕುತ್ತಿದ್ದರೆ, ಮಹೀಂದ್ರಾ ಬೊಲೆರೊ ಪರಿಪೂರ್ಣ ಆಯ್ಕೆಯಾಗಿದೆ. ಇದರ ಎಕ್ಸ್ ಶೋರೂಂ ಬೆಲೆಯು ರೂ.7.99 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಬಾಳಿಕೆ ಮತ್ತು ಕಡಿಮೆ ನಿರ್ವಹಣೆಯಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. 1.5 ಲೀಟರ್ ಎಂಹಾಕ್ 75 ಡೀಸೆಲ್ ಎಂಜಿನ್ 75 ಬಿಹೆಚ್ ಪವರ್ ಮತ್ತು 210 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

top-5-cheapest-diesel-cars-in-india

ಕಿಯಾ ಸೊನೆಟ್ ಡೀಸೆಲ್: ಕಿಯಾ ಸೊನೆಟ್ ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟಿನಲ್ಲಿ ಬಹಳ ಜನಪ್ರಿಯ ಆಯ್ಕೆಯಾಗಿದೆ. ಇದು 1.5-ಲೀಟರ್ ಸಿಆರ್‌ಡಿಐ ಎಂಜಿನ್ ನಿಂದ ಚಾಲಿತವಾಗಿದೆ. ಇದು 6-ಸ್ಪೀಡ್ ಐಎಂಟಿ ಮತ್ತು AT ಗೇರ್ ಬಾಕ್ಸ್ ಗಳೊಂದಿಗೆ ಲಭ್ಯವಿದೆ. 8.98 ಲಕ್ಷ ರೂ.ಗಳ ಆರಂಭಿಕ ಬೆಲೆಯೊಂದಿಗೆ, ಕಿಯಾ ಸೊನೆಟ್ ಡೀಸೆಲ್ ಅದರ ಪ್ರೀಮಿಯಂ ನೋಟ ಮತ್ತು ವೈಶಿಷ್ಟ್ಯಗಳಿಂದಾಗಿ ನೆಚ್ಚಿನ ಆಯ್ಕೆಯಾಗಿದೆ.

ಟಾಟಾ ನೆಕ್ಸಾನ್ ಡೀಸೆಲ್: ಟಾಟಾ ನೆಕ್ಸಾನ್ ಡೀಸೆಲ್ ದೇಶದ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಟಾಟಾ ನೆಕ್ಸಾನ್ ತನ್ನ 5-ಸ್ಟಾರ್ ಸುರಕ್ಷತಾ ರೇಟಿಂಗ್ ನೊಂದಿಗೆ ಭಾರತೀಯ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಈಗ ಅದರ ಡೀಸೆಲ್ ರೂಪಾಂತರದಲ್ಲಿ ಇದು ಇನ್ನಷ್ಟು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

top-5-cheapest-diesel-cars-in-india

ಟಾಟಾ ನೆಕ್ಸಾನ್ ಡೀಸೆಲ್ ಎಂಜಿನ್ 1.5 ಲೀಟರ್ ಎಂಜಿನ್ ಆಗಿದ್ದು, ಕಂಪನಿಯ ಪ್ರಕಾರ ಇದು ಪ್ರತಿ ಲೀಟರ್‌ಗೆ 24.08 ಕಿ.ಮೀ ಮೈಲೇಜ್ ನೀಡುತ್ತದೆ. ಜಿಎಸ್‌ಟಿ ಕಡಿತದ ನಂತರ ನೆಕ್ಸಾನ್ ಡೀಸೆಲ್ ಬೆಲೆಯು ರೂ.9.01 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಈ ಮೇಲೆ ತಿಳಿಸಿರುವ ಡೀಸೆಲ್ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Sunday, November 23, 2025, 12:19 [IST]
English summary
Top 5 cheapest diesel cars in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+