ಹೊಸ ಟಾಟಾ ಸಿಯೆರಾ ಕಾರಿನಲ್ಲಿದೆ ಮಾರುತಿ ವಿಕ್ಟೋರಿಸ್‌ನ್ನು ಮೀರಿಸುವ 5 ಬೆಸ್ಟ್ ಫೀಚರ್‌ಗಳು.. ಯಾರು ಹೇಳಲ್ಲ!
ಇತ್ತೀಚೆಗೆ ನೂತನ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ರೂ.11.49 ಲಕ್ಷ ಪರಿಚಯಾತ್ಮಕ ದರವನ್ನು ಪಡೆದಿದೆ. ಸೆಪ್ಟೆಂಬರ್ 3ರಂದು ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಮಾರಾಟಕ್ಕೆ ತರಲಾಗಿತ್ತು. ಈ ಎಸ್‌ಯುವಿಯು ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಆದರೂ ವಿಕ್ಟೋರಿಸ್‌ನ್ನು ಮೀರಿಸುವಂತೆ ಸಿಯೆರಾವು 5 ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಹೊಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟ್ರಿಪಲ್ ಸ್ಕ್ರೀನ್ (Triple-Screen):
ಹೊಸ 'ಟಾಟಾ ಸಿಯೆರಾ' ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಪ್ಯಾಸೆಂಜರ್-ಸೈಡ್ ಡಿಸ್ಪ್ಲೇಗಾಗಿ ತಲಾ 12.3 ಇಂಚಿನ ಟ್ರಿಪಲ್ ಸ್ಕ್ರೀನ್ಗಳನ್ನು ಒಳಗೊಂಡಿದೆ. ಅದೇ ರೀತಿಯಲ್ಲಿ 'ಮಾರುತಿ ವಿಕ್ಟೋರಿಸ್' ಬೇರೆ - ಬೇರೆಯಾದ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.

19 ಇಂಚಿನ ಅಲಾಯ್ ವೀಲ್‌ಗಳು (19 inch Alloy Wheels):
'ಸಿಯೆರಾ' ಕಾರಿನ ಗರಿಷ್ಠ ಶ್ರೇಣಿ ರೂಪಾಂತರಗಳಾದ ಅಕಂಪ್ಲಿಶ್ಡ್ ಮತ್ತು ಅಕಂಪ್ಲಿಶ್ಡ್ ಪ್ಲಸ್, ದೊಡ್ಡ ಗಾತ್ರದ 19 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿವೆ. ಇದು ಪ್ರೀಮಿಯಂ ಲುಕ್ ಒದಗಿಸಲು ನೆರವಾಗಬಲ್ಲದು. 'ಮಾರುತಿ ಸುಜುಕಿ ವಿಕ್ಟೋರಿಸ್' ಕೇವಲ 17 ಅಲಾಯ್ ವೀಲ್‌ಗಳನ್ನು ಹೊಂದಿವೆ.
ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು (Flush Door Handles):
ನೂತನ 'ಟಾಟಾ ಸಿಯೆರಾ' ವಿಶೇಷವಾಗಿ ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಪಡೆದಿದೆ. ಇವು ಹೆಚ್ಚು ಅತ್ಯಾಧುನಿಕವಾಗಿದ್ದು, ನೋಡುಗರ ಸೆಳೆಯಬಲ್ಲವು. ಜೊತೆಗೆ ಐಷಾರಾಮಿ ಕಾರು ಎಂಬಂತೆ ಭಾಸವಾಗುವಂತೆ ಮಾಡುತ್ತದೆ. ಹಾಗೆಯೇ 'ವಿಕ್ಟೋರಿಸ್' ಸಾಮಾನ್ಯವಾಗಿರುವ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.
ಮ್ಯಾನುವಲಿ ಎಕ್ಸ್ಟೆಂಡಬಲ್ ಥೈ ಸಪೋರ್ಟ್ (Manually Extendable Thigh Support):
'ಟಾಟಾ ಸಿಯೆರಾ' ಎಸ್‌ಯುವಿ, ಬಹುಮುಖ್ಯವಾಗಿ ಮುಂಭಾಗದ ಆಸನಗಳಲ್ಲಿ 'ಮ್ಯಾನುವಲಿ ಎಕ್ಸ್ಟೆಂಡಬಲ್ ಥೈ ಸಪೋರ್ಟ್'ನ್ನು ಪಡೆದಿದೆ. ಆದರೆ, 'ಮಾರುತಿ ವಿಕ್ಟೋರಿಸ್'ನಲ್ಲಿ ಈ ವೈಶಿಷ್ಟ್ಯವಿಲ್ಲ. ಇವೆರೆಡು ಕಾರುಗಳ ಗರಿಷ್ಠ ಶ್ರೇಣಿ ರೂಪಾಂತರಗಳು ಒಂದೇ ರೀತಿಯ 8-ವೇ ಪವರ್ಡ್ ಡ್ರೈವರ್ಸ್ ಸೀಟ್‌ನ್ನು ಪಡೆದಿವೆ.
12 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ (12 Speaker JBL Sound System):
ಹೊಸ 'ಸಿಯೆರಾ' ದೂರದ ಊರುಗಳಿಗೆ ಆರಾಮದಾಯಕವಾಗಿ ಹಾಡನ್ನು ಕೇಳಿಸಿಕೊಂಡು ಪ್ರಯಾಣಿಸಲು ಸಾಧ್ಯವಾಗುವಂತೆ, 12 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್‌ನ್ನು ಹೊಂದಿದೆ. ವಿಕ್ಟೋರಿಸ್ ಕಾರಿನ ಟಾಪ್ ಎಂಡ್ ರೂಪಾಂತರಗಳು 8 ಸ್ಪೀಕರ್ ಇನ್ಫಿನಿಟಿ ಸೌಂಡ್ ಸಿಸ್ಟಮ್‌ನ್ನು ಪಡೆದಿದೆ.
ಟಾಟಾ ಸಿಯೆರಾ ವಿಶೇಷತೆಗಳೇನು:
ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಅಂಡಮಾನ್ ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ ಮತ್ತು ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳನ್ನು ಒಳಗೊಂಡಿದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ. 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊ ಪೆಟ್ರೋಲ್ ಮತ್ತು 1.5-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 20 ಕಿ.ಮೀವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ಮಾರುತಿ ಸುಜುಕಿ ವಿಕ್ಟೋರಿಸ್ ಹೇಗಿದೆ:
ಇದು ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಎಟರ್ನಲ್ ಬ್ಲೂ, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ ಮತ್ತು ಮಿಸ್ಟಿಕ್ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 1.5-ಲೀ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಹಾಗೂ 1.5-ಲೀ. ಸಿಎನ್‌ಜಿ ಎಂಜಿನ್ ಎಂಜಿನ್‌ನ್ನು ಹೊಂದಿದೆ. 21 ರಿಂದ 28.65 ಕಿ.ಮೀವರಗೆ ಮೈಲೇಜ್ ಕೊಡುತ್ತದೆ.


Click it and Unblock the Notifications








