ಬಿಡುಗಡೆಗೆ ಸಜ್ಜಾಗಿವೆ 5 ಹೊಸ ಎಸ್‌ಯುವಿಗಳು: ಮಾರುತಿ, ಟಾಟಾ, ಹ್ಯುಂಡೈ ಫುಲ್ ಜೋರು!

2025 ರಲ್ಲಿ ಹೊಸ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಐದು ಹೊಸ ಎಸ್‌ಯುವಿಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಈ ಎಸ್‌ಯುವಿಗಳು ಗಮನಾರ್ಹ ವಿನ್ಯಾಸ ನವೀಕರಣಗಳು, ಸುಧಾರಿತ ತಂತ್ರಜ್ಞಾನ ಮತ್ತು ಸೌಕರ್ಯದೊಂದಿಗೆ ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿವೆ. ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ನಂತಹ ಕಂಪನಿಗಳು ತಮ್ಮ ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿವೆ. ಇವುಗಳಲ್ಲಿ ಕೆಲವು ಸಂಪೂರ್ಣವಾಗಿ ಹೊಸ ಮಾದರಿಗಳಾಗಿದ್ದರೆ, ಕೆಲವು ಪ್ರಮುಖ ವಿನ್ಯಾಸ ಮತ್ತು ವೈಶಿಷ್ಟ್ಯ ನವೀಕರಣಗಳನ್ನು ಪಡೆಯಲಿವೆ. ಈ ಮುಂಬರುವ ಎಸ್‌ಯುವಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಮಾರುತಿ ಸುಜುಕಿ ಎಸ್ಕುಡೊ: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಆಧಾರಿತ ಮಧ್ಯಮ ಗಾತ್ರದ ಎಸ್‌ಯುವಿ ಇದಾಗಿದ್ದು, 1.5L ನ್ಯಾಚುರಲ್ಲಿ ಆಸ್ಪಿರೇಟೆಡ್, ಹೈಬ್ರಿಡ್ ಪೆಟ್ರೋಲ್ ಮತ್ತು CNG ಎಂಜಿನ್‌ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಇರಲಿವೆ. ಇದನ್ನು ಅರೆನಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

top-5-maruti-tata-hyundai-upcoming-suvs-in-2025

ಫೇಸ್‌ಲಿಫ್ಟ್ ಹುಂಡೈ ವೆನ್ಯೂ: ಹೊಸ ವಿನ್ಯಾಸ, ಡ್ಯುಯಲ್ 12.3-ಇಂಚಿನ ಸ್ಕ್ರೀನ್ ಸೆಟಪ್, ವೆಂಟಿಲೇಟೆಡ್ ಸೀಟುಗಳು, ಪನೋರಮಿಕ್ ಸನ್‌ರೂಫ್ ಮತ್ತು ADAS ತಂತ್ರಜ್ಞಾನವನ್ನು ಒಳಗೊಂಡಿರುವ ಜನಪ್ರಿಯ ಕಾಂಪ್ಯಾಕ್ಟ್ SUV ಯ ಮೂರನೇ ಪೀಳಿಗೆಯ (3r gen) ಫೇಸ್‌ಲಿಫ್ಟ್ ಹುಂಡೈ ವೆನ್ಯೂ ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ. ಅಸ್ತಿತ್ವದಲ್ಲಿರುವ ಅದೇ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳೊಂದಿಗೆ ಮುಂದುವರಿಯುತ್ತದೆ.

ಅಸ್ತಿತ್ವದಲ್ಲಿರುವ ಅದೇ 1.2 - ಲೀಟರ್ ಪೆಟ್ರೋಲ್, 1.0 - ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 - ಲೀಟರ್ ಡೀಸೆಲ್ ಅನ್ನು ಎಸ್‌ಯುವಿಯಲ್ಲಿ ಪವರ್ ಟ್ರೇನ್‌ಗಳಾಗಿ ಉಳಿಸಿಕೊಳ್ಳಲಾಗುವುದು. ಒಟ್ಟಾರೆ ಇದು ಹೊಸ ವಿನ್ಯಾಸ ಮತ್ತು ಇತ್ತೀಚಿನ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮೂರನೇ ತಲೆಮಾರಿನ ಮಾಡಲ್‌ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

top-5-maruti-tata-hyundai-upcoming-suvs-in-2025

ಟಾಟಾ ಪಂಚ್ ಫೇಸ್‌ಲಿಫ್ಟ್: ಟಾಟಾ ಮೋಟಾರ್ಸ್ ತನ್ನ ಎಂಟ್ರಿ ಲೆವೆಲ್ ಎಸ್‌ಯುವಿ ಪಂಚ್ ಫೇಸ್ ಲಿಫ್ಟ್ ಅನ್ನು ಸಹ ತರುತ್ತಿದೆ. 87bh ಪವರ್ ಮತ್ತು 115Nm ಟಾರ್ಕ್‌ನೊಂದಿಗೆ 1.2L ಮೂರು - ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಂಡಿರುವ ರಿಫ್ರೆಶ್ಡ್ ಬಜೆಟ್ SUV ಆಗಿ ಬಿಡುಗಡೆಯಾಗಲಿದೆ.

ದೊಡ್ಡ ಟಚ್‌ಸ್ಕ್ರೀನ್, ಟಚ್ - ಆಧಾರಿತ HVAC ಕಂಟ್ರೋಲ್‌ಗಳು ಮತ್ತು ಹೊಸ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರಲಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಗಳೊಂದಿಗೆ ಲಭ್ಯವಿರುತ್ತದೆ. ಎಲ್ಲವು ಅಂದುಕೊಂಡತಾದರೆ ದ್ವಿತೀಯಾರ್ಧದಲ್ಲಿ ಈ ಕಾರು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

top-5-maruti-tata-hyundai-upcoming-suvs-in-2025

ಟಾಟಾ ಹ್ಯಾರಿಯರ್ ಪೆಟ್ರೋಲ್: ಮೊದಲ ಬಾರಿಗೆ, ಹ್ಯಾರಿಯರ್ 170bh ಪವರ್ ಮತ್ತು 280Nm ಟಾರ್ಕ್ ಉತ್ಪಾದಿಸುವ ಹೊಸ 1.5L TGDi ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಪೆಟ್ರೋಲ್ ವೇರಿಯೆಂಟ್ ಬಿಡುಗಡೆಯಾಗಲಿದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಲಭ್ಯವಿರಲಿದೆ. ಹ್ಯಾರಿಯರ್‌ನಂತೆಯೇ, ಸಫಾರಿ ಕೂಡ ಅದೇ 1.5L TGDi ಟರ್ಬೊ ಪೆಟ್ರೋಲ್‌ನಲ್ಲಿ ಬಿಡುಗಡೆಯಾಗಲಿದೆ.

ನವೆಂಬರ್‌ನಲ್ಲಿ, ಟಾಟಾ ತನ್ನ ಪ್ರಮುಖ ಹ್ಯಾರಿಯರ್ ಮತ್ತು ಸಫಾರಿಯನ್ನು ಪರಿಚಯಿಸಲಿದೆ. ಎರಡೂ ಮಾದರಿಗಳು ಕಂಪನಿಯ ಹೊಸ 1.5-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿವೆ. ಎರಡು ಎಸ್‌ಯುವಿಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿರುತ್ತವೆ. ಈ ಮುಂಬರಲಿರುವ ಎಸ್‌ಯುವಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಈ ಎಸ್‌ಯುವಿಗಳು ಗಮನಾರ್ಹ ವಿನ್ಯಾಸ ನವೀಕರಣಗಳು, ಸುಧಾರಿತ ತಂತ್ರಜ್ಞಾನ, ಸೌಕರ್ಯ, ಆಧುನಿಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿವೆ. ಇವೆಲ್ಲವುಗಳಲ್ಲಿ ಮಾರುತಿ ಸುಜುಕಿ ಎಸ್ಕುಡೊ ಹೊಸ ಎಂಟ್ರಿಯಾಗಿದ್ದು, ಈ ಕಾರಿನ ಮೇಲೆ ಭಾರೀ ನಿರೀಕ್ಷೆಗಳಿವೆ. ಈ ಮುಂಬರುವ ಎಸ್‌ಯುವಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Monday, August 25, 2025, 17:05 [IST]
English summary
Top 5 maruti tata hyundai upcoming suvs in 2025
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+